ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಇರಬೇಕು :ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ವಿಜಯ ದರ್ಪಣ ನ್ಯೂಸ್…
ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಇರಬೇಕು :ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಮೂಡಬೇಕು ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟರು.
ಅವರು ಬೆಂಗಳೂರು ನಗರದ ಕನ್ನಡ ಭವನ ನಯನ ಸಭಾಂಗಣದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ “ಮಾಹಿತಿ ಹಕ್ಕು ದಿನಾಚರಣೆ” ಹಾಗೂ ಸಂಘಟನೆಯ “5 ನೇ ವಾರ್ಷಿಕೋತ್ಸವ”ದ ಅಂಗವಾಗಿ ‘ವಿಚಾರಕ್ರಾಂತಿ ರತ್ನ ‘ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಲಂಚ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆ ಯಲ್ಲಿ ಕಾನೂನಿನ ಅರಿವು ಇರಬೇಕು ಹಾಗೂ ಯುವಕರು ಈ ಭ್ರಷ್ಟ ವ್ಯವಸ್ಥೆ ವಿರುದ್ದ ಪ್ರಶ್ನೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.ನ್ಯಾಯ ಮಾರ್ಗದಿಂದ ಹಣ ಸಂಪಾದಿಸಬೇಕು ಅನ್ಯಾಯ ಮಾರ್ಗದಿಂದ ಸಂಪಾದಿಸಿದ ಹಣದಿಂದ ನೆಮ್ಮದಿ ದೊರಕುವುದಿಲ್ಲೆಂದರು. ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಹೋರಾಡುತ್ತಿರುವ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಟ್ಟಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಸಮಾಜದಲ್ಲಿನ ಭ್ರಷ್ಟಚಾರ ತಡೆಗಟ್ಟಲು ಗ್ರಾಮ ಪಂಚಾಯತಿ ಯಿಂದ ಪ್ರಾರಂಭವಾಗಿ ಪಾರ್ಲಿಮೆಂಟ್ ವರೆಗೆ ಭ್ರಷ್ಟಚಾರ ನಿರ್ಮೂಲನೆ ಅಭಿಯಾನ ಪ್ರಾರಂಭವಾಗಬೇಕು.ಹಾಗೂ ಸಾಮಾಜಿಕ ಹೋರಾಟಗಾರರು,ಮಾಹಿತಿ ಹಕ್ಕು ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುವುದರ ಮುಖಾಂತರ ಭ್ರಷ್ಟಚಾರದ ವಿರುದ್ದ ದ್ವನಿ ಯಾಗಬೇಕು ಎಂದು ಕರೆ ಕೊಟ್ಟರು.
ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲದಂತಾಗಿದೆ ಕಾರಣ ಇತಿಹಾಸದಲ್ಲಿ ನಾವು,ನೀವು ಓದಿದಂತೆ ರಾಜನ ಮಗ ರಾಜನೇ ಆಗುತಿದ್ದರಲ್ಲಾ ಅದೇ ರೀತಿ ಈಗ ರಾಜಕಾರಣಿಗಳ ಮಕ್ಕಳು ರಾಜಕಾರಣಿ ಗಳೇ ಆಗುತ್ತಿದ್ದಾರೆ. ಅದು ನಿಲ್ಲಬೇಕು.ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳುಮಾತ್ರವೇ ರಾಜಕಾರಣದಲ್ಲಿ ಉಳಿಯಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಮಾಜ ಕಟ್ಟುವಲ್ಲಿ ಯುವಕರು ಮುಂದಾಗಬೇಕು ಅಲ್ಲದೇ ಮನೆಗೊಬ್ಬ ಮಾಹಿತಿ ಕಾರ್ಯಕರ್ತರ ಉದ್ಭವಿದಾಗ ಮಾತ್ರವೇ ಭ್ರಷ್ಟಾಚಾರವನ್ನು ತಡೆಗಟ್ಟಬಹುದಾಗಿದೆ ಎಂದರು. ಆದರೆ ಪ್ರಶ್ನೆಮಾಡುವ ಮಾಹಿತಿ ಕಾರ್ಯಕರ್ತರು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿದ್ದಾಗ ಮಾತ್ರವೇ ಭ್ರಷ್ಟರನ್ನು ಪ್ರಶ್ನಿಸಬಹುದು
ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಆಯೋಗದ ವತಿಯಿಂದ ಸರ್ಕಾರದ ಖಜಾನೆಗೆ ಅಧಿಕಾರಿಗಳಿಂದ ದಂಡ ತುಂಬಿಸಿದ ಸಾಮಾಜಿಕ ಕಾರ್ಯಕರ್ತರಿಗೆ ‘ವಿಚಾರಕ್ರಾಂತಿ ರತ್ನ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವೀರೇಶ್ ಬೆಳ್ಳೂರ್,ಸಂಸ್ಥಾಪಕ ಹೆಚ್.ಜಿ. ರಮೇಶ್ ಕುಣಿಗಲ್, ರಾಜ್ಯಾಧ್ಯಕ್ಷರ ಚೆನ್ನಯ್ಯ ಎಂ.ವಸ್ತ್ರದ್,ಕಾರ್ಯಾಧ್ಯಕ್ಷ ಎಂ.ಓಂಕಾರಪ್ಪ, ಪ್ರಾಧಾನ ಕಾರ್ಯದರ್ಶಿ ಹೆಚ್.ಡಿ.ರುದ್ರೇಶ್,ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್.ಡಿ. ಉಪ್ಪಾರ್ ಸಂಘಟನೆಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಟಿ. ಮೋಹನ್, ಶಂಕರ್ ಬೆನ್ನೂರು, ಶಿವಲಿಂಗಯ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು/ಕಾರ್ಯದರ್ಶಿ ಗಳು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.