ಕಾಲುಬಾಯಿ ರೋಗ ತಡೆಯಲು ಲಸಿಕೆ ಅಭಿಯಾನಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ.
ವಿಜಯ ದರ್ಪಣ ನ್ಯೂಸ್…
ಕಾಲುಬಾಯಿ ರೋಗ ತಡೆಯಲು ಲಸಿಕೆ ಅಭಿಯಾನಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 22 : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಾನುವಾರಗಳ ಕಾಲು ಬಾಯಿ ರೋಗ ತಡೆಯಲು 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ದೇವನಹಳ್ಳಿ ಪಶು ಆಸ್ಪತ್ರೆ ಬಳಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಚಾಲನೆ ನೀಡಿದರು.
ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 21 ರವರೆಗೆ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಲಸಿಕೆ ಹಾಕಲಾಗುವುದು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶು ಆಸ್ಪತ್ರೆ ದೇವನಹಳ್ಳಿ ವತಿಯಿಂದ 50% ಸಹಾಯಧನದೊಂದಿಗೆ (ರೂ.16700/-) ಒಟ್ಟು 20 ಫಲಾನುಭವಿಗಳಿಗೆ 02 ಹೆಚ್.ಪಿ ಮೇವು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ.
ಕುರಿ/ಮೇಕೆ ಆಕಸ್ಮಿಕ ಮರಣದ ಅನುಗ್ರಹ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 65 ಫಲಾನುಭವಿಗಳಿಗೆ ತಲಾ 5000 ರೂಪಾಯಿಗಳಂತೆ ವಿತರಿಸಲಾಯಿತು.
ಜಾನುವಾರು ಆಕಸ್ಮಿಕ ಮರಣದ ಅನುಗ್ರಹ ಯೋಜನೆ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 58 ಫಲಾನುಭವಿಗಳಿಗೆ ತಲಾ 10,000 ರೂಪಾಯಿಗಳಂತೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ಜಗದೀಶ್, ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ, ಅನಿಲ್ ಕುಮಾರ್, ತಹಶಿಲ್ದಾರ್ ಬಾಲಕೃಷ್ಣ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಇರಿಗೆನಹಳ್ಳಿ ಶ್ರೀನಿವಾಸ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
@@@@@@@@@@@@@@@@@@@@@
ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದಾಳಿ: ದಂಡ ಸಂಗ್ರಹ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್. 22, 2024 :- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ವಿವಿಧ ಅಂಗಡಿಗಳ ಮೇಲೆ ಕೋಟ್ಪಾ ದಾಳಿಯನ್ನು ನಡೆಸಿದ್ದು, ಸೆಕ್ಷನ್ 4 ರ ಅಡಿಯಲ್ಲಿ 20 ಪ್ರಕರಣಗಳನ್ನು ದಾಖಲಿಸಿ 3900 ರೂ. ಗಳ ದಂಡವನ್ನು ಸಂಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಡಾ. ವಿದ್ಯಾರಾಣಿ ಪಿ.ಎಸ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿಕುಮಾರ್, ಪೋಲಿಸ್ ಸಿಬ್ಬಂದಿ ಸಲ್ಮಾ ಬೇಗಂ, ಸಮಾಜ ಸೇವಕ ವೆಂಕಟೇಶ್ ಉಪಸ್ಥಿತರಿದ್ದರು.