ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯತಿಗೆ ಕೇಂದ್ರ ಜಲ ಶಕ್ತಿ ತಂಡ ಭೇಟಿ
ವಿಜಯ ದರ್ಪಣ ನ್ಯೂಸ್…
ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯತಿಗೆ ಕೇಂದ್ರ ಜಲ ಶಕ್ತಿ ತಂಡ ಭೇಟಿ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 19, 2024 :- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯತಿಗೆ ಕೇಂದ್ರ ಜಲ ಶಕ್ತಿ ಮಂತ್ರಾಲಯ ತಂಡ ಭೇಟಿ ನೀಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವಿವಿಧ ಕಾಮಗಾರಿಗಳ ಪರಿಶೀಲನೆ.
ಜಲಜೀವನ್ ಮಿಷನ್ ಯೋಜನೆಯ ರಾಷ್ಟ್ರೀಯ ತಜ್ಞರಾದ ಪ್ರೊನೋಭಕುಮಾರ್ ತಾಲೂಕ್ಡ್ ಹಾಗೂ ವನಿತಾ ತಂಡವು ಗ್ರಾಮ ಪಂಚಾಯತಿ ವ್ಯಾಪಿಯ ಪಂಡಿತಪುರ ಹಾಗೂ ದಿನ್ನೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಡಿ ಮನೆ ಮನೆಗೆ ಗಂಗೆ(ಜೆ.ಜೆ.ಎಂ), ಕುಡಿಯುವ ನೀರಿನ ಘಟಕ, ವೈಯಕ್ತಿಕ ಶೌಚಾಲಯ, ಸಿಸ್ಟನ್, ಓವರ್ ಹೆಡ್ ಟ್ಯಾಂಕ್, ನೀರು ಕಾಲುವೆ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ವಿಕ್ಷಣೆ ಮಾಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ವಿಠ್ಠಲ್ ಕಾವ್ಳೆ, ಯೋಜನಾ ಸಹಾಯಕ ನಿರ್ದೇಶಕಿ ನಾಗಮಣಿ, ಆರ್.ಡಬ್ಲ್ಯೂ.ಎಸ್ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ, ಸಹಾಯಕ ನಿರ್ದೇಶಕರಾದ ಅಮರನಾರಾಯಣಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಭರತ್, ಆರ್.ಡಬ್ಲ್ಯೂ.ಎಸ್ ತಾಂತ್ರಿಕ ಅಭಿಯಂತರರು, ನರೇಗಾ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆಗೆ ಅಕ್ಟೊಬರ್ 15ವರೆಗೆ ಅವಕಾಶ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 19,2024 :-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ, ಮೆಟ್ರಿಕ್-ನಂತರದ ಕೋರ್ಸುಗಳಾದ ಪಿಯುಸಿ ಮತ್ತು ಸಮನಾಂತರ(PUC & Equivalent Courses), ಸಾಮಾನ್ಯ ಪದವಿ(General Degree Courses) ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಲ್ಲಿ (Integrated Degree Courses) ಈ ಕೋರ್ಸ್ ಗಳಿಗೆ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ಮರುಪಾವತಿ”, ಮತ್ತು “ವಿದ್ಯಾಸಿರಿ(“ಊಟ ಮತ್ತು ವಸತಿ ಸಹಾಯ ಯೋಜನೆ”), ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸಲು ಅಕ್ಟೊಬರ್ 15 ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ, ವಿದ್ಯಾರ್ಥಿಗಳು ಆನ್ಲೈನ್ ಮೂಲಕ https://ssp.postmatric.karnataka.gov.in/ ಈ ವೆಬ್ ಸೈಟ್ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಬೇಕಾದ ವೆಬ್ ಸೈಟ್ ವಿಳಾಸ- https://bcwd.karnataka.gov.in ಇಲಾಖಾ ಸಹಾಯವಾಣಿ ಸಂಖ್ಯೆ:8050770005 ಇಮೇಲ್: bcwdhelpline@gmail.com ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್: postmatrichelp@karnataka.gov.in ಸಹಾಯವಾಣಿ ಸಂಖ್ಯೆ: 1902 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.