ಅನಿವಾರ್ಯ

ವಿಜಯ ದರ್ಪಣ ನ್ಯೂಸ್….

ಅನಿವಾರ್ಯ

ಬಿಟ್ಟಿ ಭಾಗ್ಯಗಳ ಕೊಟ್ಟು ಇನ್ನೂ ಕೊಡುವುದಾಗಿ ಹೇಳಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಅನಿವಾರ್ಯ. ಅಧಿಕಾರ ಸಿಕ್ಕ ಮೇಲೆ ಕನ್ನಡಿಗರ ಮೇಲೆ ದರ್ಪ ತೋರಿಸುವುದು ಅನಿವಾರ್ಯ. ಹಿಂದುಗಳ ಮೇಲೆ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿ ಮುಸಲ್ಮಾನರನ್ನು ಓಲೈಸುವುದು ಅನಿವಾರ್ಯ. ಒಂದೊಂದಾಗಿ ಬೆಲೆ ಏರಿಸುವುದು ಅನಿವಾರ್ಯ. ಮೊದಲು ಅಕ್ಕಿ, ಬೇಳೆ ದಿನಸಿಗಳು ಎಲ್ಲದರ ಬೆಲೆ ಏರಿಕೆಯಾಗಿದ್ದು ಅನಿವಾರ್ಯ.
ನಂತರ ತರಕಾರಿ ಬೆಲೆ ಅಯೋಮಯವಾಗಿದ್ದು ಅನಿವಾರ್ಯ. ವಿದ್ಯುತ್ ಬಿಲ್ ಮೇಲೆ ಶೇಕಡ 4೦ರ ಏರಿಕೆ ಅನಿವಾರ್ಯ.

ಎರಡನೇ ಸಲದ ಹಾಲಿನ ಬೆಲೆ ಏರಿಕೆ ಅನಿವಾರ್ಯ. ಕರ್ನಾಟಕದಲ್ಲಿರುವ ದೀನರು ದೈನೇಸಿ ಪರಿಸ್ಥಿತಿಗೆ ಹೋಗುವುದು ಅನಿವಾರ್ಯ. ಅವರೆಲ್ಲಾ ಸತ್ತರೂ ಅದೂ ಅನಿವಾರ್ಯ. ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರು, ಸಚಿವರು, ಉಪ ಮುಖ್ಯಮಂತ್ರಿಗಳು, ಮುಖ್ಯ ಮಂತ್ರಿಗಳ ವೇತನ ಪರಿಷ್ಕರಣೆ ಮಾಡಿ ಜನಸಾಮಾನ್ಯನ ತೆರಿಗೆ ಹಣವನ್ನು ಹಂಚಿಕೊಳ್ಳುವುದು ಅನಿವಾರ್ಯ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೇರಳದ PFI ತಂಡದವರು ಬಂದು ತಮ್ಮ ಪಾಡಿಗೆ ತಾವು ಗಣೇಶನ ವಿಸರ್ಜನೆಗೆ ಹೋಗುತ್ತಿದ್ದ ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡಿದ್ದು ಅನಿವಾರ್ಯ. ಪೆಟ್ರೋಲ್ ಬಾಂಬ್ ಎಸೆದಿದ್ದು ಅನಿವಾರ್ಯ. ಲಕ್ಷಾಂತರ ಹಣ ಹಾಕಿ ಅದಕ್ಕಾಗಿ ಇದ್ದಬದ್ದ ಚಿನ್ನ ಮಾರಿ ಬಂಡವಾಳ ಹಾಕಿ, ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಲೂಟಿ ಮಾಡಿ, ಅಂಗಡಿಗಳಿಗೆ ಬೆಂಕಿ ಹಚ್ಚುವುದು ಅನಿವಾರ್ಯ.
ಮುಸ್ಲಿಮರ ಓಲೈಕೆಗಾಗಿ ಸರ್ಕಾರ ನಡೆಸುವುದು ಅನಿವಾರ್ಯ. ಅವರಿಗೆ ಓಟು ಹಾಕುವ ನಾಮಾರ್ಧರಿಗೂ, ಅವರ ಜೊತೆ ಜನಸಾಮಾನ್ಯರಿಗೂ ಇದನ್ನೆಲ್ಲಾ ಅನುಭವಿಸುವುದು ಅನಿವಾರ್ಯ.


. … ಬಿ. ಆರ್. ನರಸಿಂಹ ಮೂರ್ತಿ,
9448174932