ಕ್ವಿಟ್ ಇಂಡಿಯಾ ಚಳವಳಿ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆ.

ವಿಜಯ ದರ್ಪಣ ನ್ಯೂಸ್….

ಕ್ವಿಟ್ ಇಂಡಿಯಾ ಚಳವಳಿ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆ.

ಅಖಿಲ ಕರ್ನಾಟಕ ಮಿತ್ರ ಸಂಘ ಶಾಲೆಯಿಂದ ಶಾಲೆಗೆ ಸ್ವಾತಂತ್ರ್ಯ ಹೋರಾಟಗಾರರು ಶಿವಶರಣರ ಸ್ಮರಣೆ ಜಯಂತಿಯ ಕಾರ್ಯಕ್ರಮಗಳು ಹಮ್ಮಿಕೊಂಡು ಬರುತ್ತಿದೆಂದು ಸಂಘದ ಉಪಾಧ್ಯಕ್ಷ ವಿ.ವಿಶ್ವನಾಥ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರಾಜೀವನಗರದ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಚಿ. ಮಾ. ಸುಧಾಕರ್ ಭಾರತೀಯ ಬೆಂಬಲವನ್ನು ಪಡೆಯಲು ಬ್ರಿಟಿಷರು ವಿಫಲವಾದ ನಂತರ , ಗಾಂಧಿಯವರು 8 ಆಗಸ್ಟ್ 1942 ರಂದು ಬಾಂಬೆಯಲ್ಲಿ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಮಾಡಿದ ತಮ್ಮ ಕ್ವಿಟ್ ಇಂಡಿಯಾ ಭಾಷಣದಲ್ಲಿ ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದರು .

ವೈಸರಾಯ್ ಲಿನ್ಲಿತ್ಗೋ ಈ ಚಳುವಳಿಯನ್ನು “1857 ರಿಂದ ಇದುವರೆಗಿನ ಅತ್ಯಂತ ಗಂಭೀರ ದಂಗೆ” ಎಂದು ವಿವರಿಸುತ್ತಾ 1945 ರಲ್ಲಿ ಜೈಲಿನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ಬಿಡುಗಡೆಯೊಂದಿಗೆ ಚಳುವಳಿ ಕೊನೆಗೊಂಡಿತು. ಈ ಸ್ವಾತಂತ್ರ್ಯ ಚಳುವಳಿಯ 1992 ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಕ್ವಿಟ್ ಇಂಡಿಯಾ ಚಳುವಳಿಯ ಸುವರ್ಣ ಮಹೋತ್ಸವವನ್ನು ಗುರುತಿಸಲು 1 ರೂಪಾಯಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡದರೆಂದು ತಿಳಿಸಿದರು.

ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು ಎಂದು ತಿಳಿಸಿದರು 

 ಎಸ್ ನಿಜಲಿಂಗಪ್ಪ ಪುಣ್ಯಸ್ಮರಣೆ ಅಂಗವಾಗಿ ನಮನಗಳು ಅರ್ಪಿಸುತ್ತಾಶ್ರೀಯುತನಿಜಲಿಂಗಪ್ಪನವರು1902ರಲ್ಲಿ ಕೃಷಿ ಪ್ರಧಾನವಾದ ಬಡ ಕುಟುಂಬವೊಂದರಲ್ಲಿ ಜನಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀವಾದದ ದೀಕ್ಷೆ ಕೈಗೊಂಡು ಬದುಕಿನುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದ ನಿಜಲಿಂಗಪ್ಪನವರ ನಡೆ-ನುಡಿಗಳ ನಡುವೆ ಎಂದೂ ಅಂತರವಿರಲಿಲ್ಲ.

ನಿಜಲಿಂಗಪ್ಪನವರು ತೆರಿಗೆದಾರರ ಹಣ ಅವರ ಅಭ್ಯುದಯಕ್ಕೆ ಹೊರತು, ಅವರೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗಲ್ಲ ಎಂಬ ನಿಲುವುವಿನಲ್ಲಿ ಅಚಲ ವಿಶ್ವಾಸವಿರಿಸಿಕೊಂಡಿದ್ದರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು, ಸ್ವಂತಕ್ಕಾಗಿ ಅಧಿಕಾರವನ್ನು ಬಳಸಲಿಲ್ಲ.

ಕರ್ನಾಟಕದ ಏಕೀಕರಣ ಮತ್ತು ಅಭಿವೃದ್ಧಿಗಾಗಿ ದುಡಿದ ನಿಜಲಿಂಗಪ್ಪನವರಿಗೆ 1999 ರಲ್ಲಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.ಕರ್ನಾಟಕದ ಏಕೀಕರಣ, ಶರಾವತಿ ಜಲವಿದ್ಯುತ್ ಯೋಜನೆ, ಕೃಷ್ಣಾ ಮೇಲ್ಡಂಡೆ ಯೋಜನೆಗಳು ಹೀಗೆ ಹಲವಾರು ಯೋಜನೆಗಳು ನಿಜಲಿಂಗಪ್ಪನವರ ನೆನಪು ನಾಡಿನ ಜನಮನದಲ್ಲಿ ಹಚ್ಚಾಗಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮುರಳಿಧರ್ ಮಗು, ಅಡುಗೆ ತಯಾರಕರಾದ ಮುನಿವೆಂಕಟಪ್ಪ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.