ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರು ಜಯಭೇರಿ 

ವಿಜಯ ದರ್ಪಣ ನ್ಯೂಸ್ 

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರು ಜಯಭೇರಿ 

ವಿರಾಜಪೇಟೆ ಕೊಡಗು ಜಿಲ್ಲೆ :ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ( ಫ್ಯಾಕ್ಸ್) ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನವನ್ನು ಪಡೆದುಕೊಂಡು ತನ್ನ ಭದ್ರಕೋಟೆಯನ್ನು ಸಾಬೀತುಪಡಿಸಿದೆ.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದುರುಪಯೋಗ ನಡೆದಿದೆ ಎಂದು ಕೆಲವು ಕಾಂಗ್ರೆಸ್ಸಿಗರು ಮೂರು ಬಾರಿ ನಿಗದಿಯಾಗಿದ್ದ ಚುನಾವಣೆಯನ್ನು ಮುಂದೊಡಲು ಕಾರಣಕರ್ತರಾಗಿದ್ದರು. ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದ ಹಾಲಿ ಆಡಳಿತ ಮಂಡಳಿ ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಉಚ್ಛ ನ್ಯಾಯಾಲಯದ ಆದೇಶದಂತೆ ಜುಲೈ 28ರಂದು ( ಇಂದು ) ಚುನಾವಣೆ ನಿಗದಿಪಡಿಸಲಾಗಿತ್ತು.

ಈ ಹಿಂದೆ ಹಾಲಿ ಆಡಳಿತ ಮಂಡಳಿ ಚುನಾವಣೆ ನಡೆಸುವಂತೆ ಮಡಿಕೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಕೆಲವರು ಚುನಾವಣೆಯಲ್ಲಿ ಮತದಾರರ ಪಟ್ಟಿ ಸಮರ್ಪಕವಾಗಿಲ್ಲ ಎಂದು ದೂರಿಕೊಂಡು ಚುನಾವಣೆಯನ್ನು ಮುಂದೂಡುವಂತೆ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ವಿವಿಧ ಕಾರಣಗಳಿಂದಾಗಿ ಎರಡು ಬಾರಿ ಚುನಾವಣೆ ಮುಂದೂಡಲಾಗಿತ್ತು ಫ್ಯಾಕ್ಸ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಗುರಿಯಾಗಿರಿಸಿ ಜನವರಿ ತಿಂಗಳಲ್ಲಿ ಅಮಾನತ್ತು ಪಡಿಸಲು ಕೂಡ ಕಾರಣರಾಗಿದ್ದರು.

ದುರುಪಯೋಗ ಪ್ರಕರಣದ ಸಂಬಂಧಿಸಿ ದಂತೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ತನಿಖಾ ತಂಡ 20 ದಿನಗಳ ತನಕ ತನಿಖೆ ನಡೆಸಿ ಯಾವುದೇ ದುರುಪಯೋಗ ಹಾಲಿ ಆಡಳಿತ ಮಂಡಳಿಯವರು ನಡೆಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಸುಳ್ಳು ಆರೋಪ ಹೊರಿಸಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯರು ವಿರುದ್ಧ ಅಲ್ಲಿನ ಕಾಂಗ್ರೆಸ್ ನಾಯಕ ಸೂರಜ್ ಮತ್ತಿತರು ಆರೋಪಿಸಿದ್ದರು. ಎರಡು ಬಾರಿ ಚುನಾವಣೆ ಪ್ರಕ್ರಿಯೆ ನಡೆದು ನಂತರ ನಿಲುಗಡೆಗೊಳ್ಳಿಸಲಾಗಿತ್ತು. ಬಿಜೆಪಿಯ ಭದ್ರಕೋಟೆಯಾದ ಹುದಿಕೇರಿಯಲ್ಲಿ, ಶಾಸಕ ಎಸ್ ಪೊನ್ನಣ್ಣನವರ ಹೆಸರಿನಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಮೂಲಕ ಚುನಾವಣೆ ಪ್ರಕ್ರಿಯೆಗೆ ತಡೆಒಡ್ಡಲಾಗಿತ್ತು ಎಂದು ಹೇಳಲಾಗಿದೆ.

ಶತಾಯಗತಾಯ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲೇಬೇಕು ಎಂದು ಪಣತೊಟ್ಟಿದ್ದರು. ಆದರೆ ಪ್ರಬುದ್ಧ ಮತದಾರರು ಮತ್ತೆ ಪುನಹ ಹಿಂದಿನ ಆಡಳಿತ ಮಂಡಳಿಯ ಬಹುತೇಕ ಸದಸ್ಯರನ್ನು ಆರಿಸಿ, ಸ್ಪಷ್ಟ ಬಹುಮತದೊಂದಿಗೆ ಗೆಲುವನ್ನು ತಂದುಕೊಟ್ಟಿದ್ದಾರೆ. ಶಾಸಕರ ತವರು ಕ್ಷೇತ್ರದಲ್ಲಿ ಆದ ಹಿನ್ನಡೆ ಕಾಂಗ್ರೆಸಿಗರಿಗೆ ಮುಜುಗರ ತಂದೊಡ್ಡಿದೆ.

ಶಾಸಕರು ಸಂಧಾನದ ಮೂಲಕ ತನ್ನ ತವರು ಕ್ಷೇತ್ರದ ಸಹಕಾರ ಸಂಘಕ್ಕೆ ಚುನಾವಣೆ ನಡೆಯದ ರೀತಿಯಲ್ಲಿ ಕ್ರಮವಹಿಸಿದ್ದರೆ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿತ್ತು. ಸುಳ್ಳು ಆರೋಪ ಹೊರಿಸಿ ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದರಿಂದ, ಸದಸ್ಯರಿಗೆ ಎಲ್ಲಾ ವಿಚಾರ ತಿಳಿದರಿಂದ, ನಮ್ಮ ಅವಧಿಯ ಆಡಳಿತದಲ್ಲಿ ಸಹಕಾರಿಗಳಿಗೆ ಸಿಕ್ಕಿದ ಪ್ರಯೋಜನವನ್ನು ಮನಗಂಡು ಮತ್ತೆ ಪುನಃ ನಮ್ಮನ್ನು ಆರಿಸಿದ್ದಾರೆ ಎನ್ನುತ್ತಾರೆ ಬಿಜೆಪಿ ಪ್ರಮುಖರು.

ಮತದಾರರು ಪ್ರಭುದ್ಧರಾಗಿದ್ದಾರೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಹೊರಟರೆ ತಕ್ಕ ಉತ್ತರ ಸಿಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾರಣೆ ಎನ್ನುತ್ತಾರೆ ಬಿಜೆಪಿಯ ಬೆಂಬಲಿಗರು.

ಆರೋಪ ಪ್ರತ್ಯಾರೋಪ ಸಹಜ, ಪ್ರತಿಷ್ಠಿತ ಸಹಕಾರ ಸಂಘಗಳಿಗೆ ಸುಳ್ಳು ಆರೋಪದ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಗೆ ಈ ಚುನಾವಣೆ ಸ್ಪಷ್ಟ ಉತ್ತರ ನೀಡಿದೆ ಎಂದು ಆರಿಸಿ ಬಂದವರು ಹೇಳುತ್ತಾರೆ. ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆಯಾದ ಹುದಿಕೇರಿಯಲ್ಲಿ, ತವರು ಕ್ಷೇತ್ರದ ಶಾಸಕರ ಬೆಂಬಲಿಗರನ್ನು ಮಣಿಸಿ ಮತ್ತೆ ಪುನಃ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವುದು ಇದೀಗ ಭಾರಿ ಚರ್ಚೆಗೆ ಒಳಗಾಗಿದೆ.

ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ಪ್ರಾಬಲ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೆರೆದಿದ್ದರು. ಮುಂದೆ ಬರುವ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕುವುದರಲ್ಲಿ ಸಂಶಯ ಮೂಡಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

_ಶ್ರೀಧರ್ ನೆಲ್ಲಿತಾಯಿ