ರೈತರ ಮೇಲೆ ವಿನಾಕಾರಣ ಕೇಸು ದಾಖಲಿಸಿದರೆ ಸುಮ್ಮನಿರುವುದಿಲ್ಲ : ಅನುರಾಧ ಅಶೋಕ್
ವಿಜಯ ದರ್ಪಣ ನ್ಯೂಸ್…
ರೈತರ ಮೇಲೆ ವಿನಾಕಾರಣ ಕೇಸು ದಾಖಲಿಸಿದರೆ ಸುಮ್ಮನಿರುವುದಿಲ್ಲ : ಕ .ರ.ವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷೆ ಅನುರಾಧ ಅಶೋಕ್
ದೇವನಹಳ್ಳಿ: 2013-14 ರಲ್ಲಿ ವೀರಸ್ವಾಮಿ
ಎಂಬುವ ಡೆವಲಪರ್ ಕೋಡಿಮಂಚೇನಹಳ್ಳಿ ಹೊನ್ನಪ್ಪನವರ ಕಡೆಯಿಂದ ಶೆಟ್ಟರಹಳ್ಳಿ ಬಳಿ ಇರುವ 15 ಎಕರೆ ಜಮೀನನ್ನು ಜಿ.ಪಿ.ಎ ಮಾಡಿಸಿಕೊಂಡು 6 ವರ್ಷವಾದರೂ ಯಾವುದೇ ಅಭಿವೃದ್ಧಿ ಮಾಡದೇ ಕಾಲಹರಣ ಮಾಡಿದ್ದಾರೆ ಮತ್ತೆ 2019 ರಲ್ಲಿ ಇದೇ ವಿಚಾರವಾಗಿ ಹೊಸದಾಗಿ ಅಗ್ರಿಮೆಂಟ್ ಮಾಡಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿ 5 ವರ್ಷ ಕಳೆದರೂ ಬಾರದಿದ್ದಾಗ ಹೊನ್ನಪ್ಪನವರು ಕೋರ್ಟ್ ಮೊರೆ ಹೋಗಿ ನಾವು ಯಾವುದೇ ಕಾರಣಕ್ಕೂ ವೀರಸ್ವಾಮಿಗೆ ಜಮೀನನ್ನು ನೀಡುವುದಿಲ್ಲ ಎಂದು ತಿಳಿಸಿದರೂ ಈಗ ಏಕಾಏಕಿ ಬಂದು ಅಭಿವೃದ್ದಿ ಮಾಡುತ್ತೇನೆ ಎಂದು ಬಂದಿರುವುದು ಯಾವ ನ್ಯಾಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷೆ ಶ್ರೀಮತಿ ಅನುರಾಧ ಅಶೋಕ್ ತಿಳಿಸಿದರು.
ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚಪ್ಪರಕಲ್ ಬಳಿಯಿರುವ ವಿಶ್ವನಾಥಪುರ ಪೊಲೀಸ್ ಠಾಣೆ ಹತ್ತಿರ ಆಗಮಿಸಿ ರೈತ ಹೊನ್ನಪ್ಪನ ಮೇಲೆ ಕೇಸು ದಾಖಲಿಸಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿ ತಾಲ್ಲೂಕಿನ ಶೆಟ್ಟರಹಳ್ಳಿ ಸರ್ವೇ ನಂಬರ್ 51/1 ಮತ್ತು 69/2, 15 ಎಕರೆ ಜಮೀನು ಹೊನ್ನಪ್ಪನವರಿಗೆ ಸೇರಿದ್ದಾಗಿದ್ದು ಅದನ್ನು ವೀರಸ್ವಾಮಿ ಎಂಬುವರಿಗೆ ಜಿ.ಪಿ.ಎ ಮಾಡಿಕೊಟ್ಟು ಅದನ್ನು ಕೃಷಿ ಜಮೀನನ್ನು ಅಭಿವೃದ್ಧಿ ಪಡಿಸಿ ಸೈಟ್‌ಗಳನ್ನಾಗಿ ಮಾಡುವ ಉದ್ದೇಶದಿಂದ ಜಾಯಿಂಟ್ ವೆಂಚರ್ ಮಾಡಿಸಿ ಕರಾರು ಮಾಡಿಸಿದ್ದರೂ ಸುಮಾರು ವರ್ಷ ಕಳೆದರೂ ಅಭಿವೃದ್ದಿ ಪಡಿಸದ ಡೆವಲಪರ್ ವೀರಸ್ವಾಮಿ ವಿರುದ್ಧ ಜಮೀನಿನ ಮಾಲೀಕ ಹೊನ್ನಪ್ಪ ಕೋರ್ಟ್ ಮೆಟ್ಟಿಲೇರಿದ್ದರಿಂದ ಈಗ ಕೆಲಸ ಮಾಡುವ ನೆಪದಲ್ಲಿ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ವಿಶ್ವನಾಥಪುರ ಠಾಣೆಯಲ್ಲಿ ರೈತನ ವಿರುದ್ಧ ದೂರು ನೀಡಲಾಗಿದ್ದು ಎಫ್.ಐ.ಆರ್ ಕೂಡ ಹಾಕಲಾಗಿದೆ.
ರೈತನ ವಿರುದ್ಧ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ರೈತರ ಮೇಲೆ ದೂರು ದಾಖಲಿಸಿರುವ ಎನ್.ವೀರಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಇತ್ಯರ್ಥ ವಾಗುವವರೆಗೂ ಮೋಸ ಹೋಗಲು ಬಿಡುವುದಿಲ್ಲಾ ರೈತರ ಮೇಲೆ ಸುಖಾಸುಮ್ಮನೆ ಕೇಸು ದಾಖಲಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಸುಮ್ಮನಿರಲ್ಲಾ ಎಚ್ಚರಿಕೆ ನೀಡಿದರು.
ಜಮೀನಿನ ಮಾಲೀಕ ಹೊನ್ನಪ್ಪ ಮಾತನಾಡಿ, ನಮಗೆ ಕಳೆದ 11 ವರ್ಷಗಳಿಂದ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿಕೊಂಡು ಬರುತ್ತಿರುವ ವೀರಸ್ವಾಮಿರವರು ಯಾವುದೇ ಕೆಲಸ ಮಾಡುತ್ತಿಲ್ಲಾ ಇತ್ತೀಚೆಗೆ ಜಮೀನಿನ ಬಳಿಬಂದಾಗ ಕೆಲಸ ಮಾಡಲು ಬಿಡದಿದ್ದಾಗ ನಮ್ಮ ಮೇಲೆ ದೂರು ನೀಡಿರುತ್ತಾರೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿ ಪಡಿಸದಿದ್ದರಿಂದ ನಮ್ಮ ಕುಟುಂಬದ ಸದಸ್ಯರೆಲ್ಲಾ ಅವರಿಗೆ ಜಮೀನು ನೀಡುವುದಿಲ್ಲಾ ಎಂದು ತೀರ್ಮಾನಿಸಿದೆ ಹಾಗೂ ಅವರು ನೀಡಿರುವ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತರು ಇದ್ದರು.