ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಸಂಗೀತದ ಸಂಜೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.
ವಿಜಯ ದರ್ಪಣ ನ್ಯೂಸ್….
ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಸಂಗೀತದ ಸಂಜೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.
ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ :ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಮತ್ತು ಜೆ ಸಿ ಐ ಸಂಗೀತ ಸಂಜೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡು ಬರೆಯುತ್ತಿರುವುದು ಶ್ಲಾಘನೀಯವಾದದ್ದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಶಿವಕುಮಾರ್ ತಿಳಿಸಿದರು.
ವಿಜಯಪುರ ಪಟ್ಟಣದ ಹಳೆ ಪುರಸಭೆ ಕಚೇರಿ ಬಳಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ಪ್ರಥಮ ಏಕಾದಶಿ ಪ್ರಯುಕ್ತ 19ನೇ ವರ್ಷದ ಕಲ್ಲು ಕಾಲಿ ಬ್ರಹ್ಮರಥೋತ್ಸವ ಮತ್ತು 17ನೇ ವರ್ಷದ ಸದ್ಗುರು ಶ್ರೀ ಯೋಗಿ ನಾರಾಯಣ ಯತೀಂದ್ರರ ಆರಾಧನಾ ಮಹೋತ್ಸವ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ವತಿಯಿಂದ ಸಂಗೀತ ಸಂಜೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯ ಬಲಿಜ ಸಂಘದ ಗೌರವ ಕಾರ್ಯದರ್ಶಿ ಸರ್ವೋಚ್ಚ ನ್ಯಾಯಾಲಯ ವಕೀಲ ಸಿ.ಕೆ.ಜಗದೀಶ್ ಅವರು ಮಾತನಾಡುತ್ತಾ ವಿಜಯಪುರ ದೇವಾಲಯಗಳ ನಗರಿ ಇಂದು ಬಣ್ಣಿಸುತ್ತಾ ಪಟ್ಟಣದಲ್ಲಿ ಧಾರ್ಮಿಕ ಸಂಸ್ಕೃತಿಕ ಸಾಹಿತಿಕ ಕಾರ್ಯಕ್ರಮಕ್ಕೆ
ಹೆಸರುವಾಸಿಯಾಗಿದೆ ಎಂದು ತಿಳಿಸಿದರು.
ಗೌರವ ಸನ್ಮಾನ ಸ್ವೀಕರಿಸಿ ವೃತ್ತಅರಕ್ಷಕ ಉಪ ನಿರೀಕ್ಷಕರ ಪ್ರಶಾಂತ್ ಮಾತನಾಡುತ್ತಾ ಕ್ರಾಂತಿ ಯೋಗಿ ಬಸವಣ್ಣ ನವರ ವಾಚನವನ್ನು ವಾಚನ ಮಾಡುತ್ತಾ ಬ್ರಿಟಿಷರ ಕಾಲದಲ್ಲಿ ಜಾರಿಗೆ ಜಾರಿಗೆ ಬಂದಿದ್ದ ಅಪರಾಧ ಫಿಷ್ ಕಾನೂನುಗಳಿಗೆ ಬದಲಾಗಿ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸಿದ್ದು ಹಾಲಿ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ.
ಹಿಂದೂ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ತಾಯಿ ಸಮಾನ ಅವರನ್ನು ಗೌರವಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಲಿಜ ರತ್ನ ಪ್ರಶಸ್ತಿ ಶ್ರೀ ಪಿ.ನಾರಾಯಣಪ್ಪ ಅರಕ್ಷಕ ರತ್ನಪ್ರಶಸ್ತಿ. ವೃತ್ತ ಅರಕ್ಷಕ ಉಪ ನಿರೀಕ್ಷಕ ಎಸ್ ಎಸ್ ಪ್ರಶಾಂತ್ ವೈದ್ಯಕೀಯ ರತ್ನ ಪ್ರಶಸ್ತಿ ಡಾ. ಹೆಚ್ ಎನ್. ನರಸಾ ರೆಡ್ಡಿ ಸಮಾಜ ಸೇವಾ ರತ್ನ ಪ್ರಶಸ್ತಿ ಬಿವಿಕೆ ಕೃಷ್ಣಪ್ಪ. ನವರಿಗೆ ಸೇವಾ ಪ್ರಶಸ್ತಿಗಳು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷರ ಕೆ ವೆಂಕಟೇಶ್ . ರಾಷ್ಟ್ರೀಯ ಸಂಯೋಜಕ ಸೀನಿಯರ್ ಜಯರಾಮ್ ವಿ ವೆಂಕಟೇಶ್ ಕಾರ್ಯದರ್ಶಿ ಚಿದಾನಂದ ಮೂರ್ತಿ ಲೀಜನ್ ಸಂಪಾದಕ ಚಂದ್ರಶೇಖರ್ ಹಡಪದ್ ಸಹ ಕಾರ್ಯದರ್ಶಿಯಾದ ವಿ ಆನಂದ ಖಜಂಚಿಯಾದ ಎಸ್ ರಮೇಶ್ ಜೆ ಸಿ ಐ ಅಧ್ಯಕ್ಷ ಬೈರೇಗೌಡ ನಗರ್ತ ಯುವಕ ಸಂಘದ ಅಧ್ಯಕ್ಷ ಎ ಮಂಜುನಾಥ್ ಜೆ ಸಿ ಐ ಗೌರವ ಕಾರ್ಯದರ್ಶಿ ಮಧವಿ ರಮೇಶ್ ಜೆಸಿಐ ಮಾಜಿ ಅಧ್ಯಕ್ಷ ಬಲಮೂರಿ ಶ್ರೀನಿವಾಸ್ ಮೂರ್ತಿ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕದ ಹರೀಶ್ ಗೌಡ ಉಪಸ್ಥಿತರಿದ್ದರು.