ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ
ವಿಜಯ ದರ್ಪಣ ನ್ಯೂಸ್…
ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ
ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ: ವಿಜಯಪುರ ಪಟ್ಬಣದ ಬಲಿಜಪೇಟೆಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿಯವರ ಬ್ರಹ್ಮರಥೋತ್ಸವ, 64 ನೇ ವರ್ಷದ ಅಖಂಡ ಶ್ರೀರಾಮನಾಮ ಸಪ್ತಾಹ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಂಧವಾರದಂದು ವಿಜೃಂಭಣೆಯಿಂದ ನಡೆಯಿತು.
ಇದರ ಪ್ರಯುಕ್ತ ಮೂರು ದಿನಗಳಿಂದಲೂ ಕಲ್ಯಾಣೋತ್ಸವ, ಪಲ್ಲಕ್ಕಿ ಉತ್ಸವಗಳು ನಡೆದಿದ್ದು, ಬುಧವಾರದಂದು ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಲಂಗಿ ಸೇವೆ. ಅಖಂಡ ರಾಮ ನಾಮ ಸಪ್ತಾಹ, ಪೂರ್ಣಹುತಿ, ಶ್ರೀಮತ್ ಕಲ್ಯಾಣ ಮಹೋತ್ಸವದೊಂದಿಗೆ ಕಲ್ಲುಗಾಲಿ ಬ್ರಹ್ಮರಥೋತ್ಸವ ನಡೆದಿದ್ದು, ಇದರೊಂದಿಗೆ ಸದ್ಗುರು ಯೋಗಿನಾರೇಯಣಯತೀಂದ್ರರ 17 ನೇ ವರ್ಷದ ಆರಾಧನಾ ಮಹೋತ್ಸವ,ಪಟ್ಟಣದ ಬಲಿಜ ಸಂಘದ 41 ನೇ ವರ್ಷದ ವಾರ್ಷಿಕೋತ್ಸವವನ್ನು ಜರುಗಿಸಲಾಯಿತು.
ವೃತ್ತದಿಂದ ಹೊರಟ ರಥವನ್ನು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಮಹಾದ್ವಾರದವರೆಗೂ ರಥೋತ್ಸವ ಎಳೆಯಲಾಯಿತು ಭಕ್ತರು ತೇರೀನ ಕಳಸಕ್ಕೆ ಹಣ್ಣುದವನ ಅರ್ಪಿಸಿದರು. ರಥೋತ್ಸವ ಜೊತೆಗೆ ಗಾರ್ಡಿಗೊಂಬೆ, ಕೀಲು ಕುದುರೆ, ಗಾರ್ಡಿಗೊಂಬೆಗಳ ವೇಷಭೂಷಣ. ವೀರಗಾಸೆ, ಪಂಡರಾಪುರ ಭಜನೆ ಏರ್ಪಡಿಸಲಾಗಿತ್ತು.
ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ರಾಜೇಶ್ವರಿ ಭಾಸ್ಕರ್, ಸದಸ್ಯರುಗಳಾದಸಿ.ಎಂ. ರಾಮು, ರಾಜಣ್ಣ, ಮಂಜುಳಾ , ಸುರೇಶ್, ಬಲಿಜ ಸಂಘದ ಅಧ್ಯಕ್ಷ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.