ಡೆಂಗ್ಯೂ ಹಾಗೂ ಚಿಕುನ್ ಗುನ್ಯ ರೋಗದಿಂದ ಜಾಗೃತರಾಗಿರಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಸಲಹೆ
ವಿಜಯ ದರ್ಪಣ ನ್ಯೂಸ್
ಡೆಂಗ್ಯೂ ಹಾಗೂ ಚಿಕುನ್ ಗುನ್ಯ ರೋಗದಿಂದ ಜಾಗೃತರಾಗಿರಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಸಲಹೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 :- ರಾಜ್ಯದಲ್ಲಿ ಕಳೆದ ಒಂದುವರೆ ತಿಂಗಳಿಂದ ಡೆಂಗ್ಯೂ ಹಾಗೂ ಚಿಕುನ್ ಗುನ್ಯ ರೋಗದ ಪ್ರಕರಣಗಳು ಪತ್ತೆಯಾಗುತ್ತಿದ್ದು ಈ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರು ಜಾಗೃತರಾಗಿ ಹಲವು ಕ್ರಮಗಳ ಮೂಲಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡೆಂಗ್ಯೂ/ಚಿಕುನ್ ಗುನ್ಯ ರೋಗಗಳ ಪ್ರಕರಣವನ್ನು ನಿಯಂತ್ರಣದಲ್ಲಿ ಇಡಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು:-
1. ಎಲ್ಲಾ ನೀರಿನ ಟ್ಯಾಂಕ್‌ಗಳು ಮತ್ತು ನೀರಿನ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು.
2. ನಿರುಪಯುಕ್ತ ಪರಿಕರಗಳು, ಟೈರುಗಳು, ತೆಂಗಿನ ಚಿಪ್ಪುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಅಥವಾ ನಾಶಪಡಿಸುವುದು.
3. ವಾರಕ್ಕೊಮ್ಮೆ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ಮತ್ತು ಒಣಗಿಸಿ ನೀರನ್ನು ತುಂಬಿ ಭದ್ರವಾಗಿ ಮುಚ್ಚುವುದು.
4. ಮನೆಯಲ್ಲಿರುವ ಮತ್ತು ಹೋಟೆಲ್‌ಗಳಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡುವುದು
5. ವಾರಕ್ಕೊಮ್ಮೆ ಒಂದು ದಿನ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ, ನೀರನ್ನು ತುಂಬದೇ ಒಣಗಿಸುವುದು (Dry-Day) ಉದಾಹರಣೆ- ಸಿಮೆಂಟ್ ತೊಟ್ಟಿ ಮತ್ತು ಡ್ರಂಗಳು.
6. ಹಗಲಿನ ವೇಳೆಯಲ್ಲಿ ಮನೆಗಳಲ್ಲಿ ಮಲಗಿದ್ದಾಗ ಸೊಳ್ಳೆ ಪರದೆಗಳನ್ನು ಬಳಸುವುದು.
7. ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಹಗಲು ವೇಳೆಯಲ್ಲಿ ತುಂಬುತೋಳಿನ ಬಟ್ಟೆ ಧರಿಸುವುದು ಅಥವಾ ಸೊಳ್ಳೆ ನಿರೋಧಕಗಳನ್ನು ಬಳಸುವುದು.
8. ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಉದಾಹರಣೆಗೆ ಪ್ರಿಡ್ಜ್, ಕೂಲರ್ಸ್, ಬಕೆಟ್ಸ್, ಬ್ಯಾರಲ್ಸ್, ಹೂವಿನಕುಂಡಗಳು ಮತ್ತು ತೆಂಗಿನ ಚಿಪ್ಪುಗಳು.
9. ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅಂದರೆ ಎಲ್ಲೆಂದರಲ್ಲಿ ಒಡೆದ ಮಡಿಕೆಗಳು, ಉಪಯೋಗಿಸದೇ ಇರುವ ಬಾಟಲ್‌ಗಳು, ಡಬ್ಬಗಳು, ಹಳೆಯ ಟೈರುಗಳು ಇತ್ಯಾದಿ ವಸ್ತುಗಳನ್ನು ಬಿಸಾಡಬಾರದು.
ಮಾಡಬಾರದಾದ ಕ್ರಮಗಳು:-
1. ಮನೆಗಳಲ್ಲಿ ತೆರೆದ ಪರಿಕರಗಳಲ್ಲಿ ನೀರನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಸ್ವಚ್ಚಗೊಳಿಸದೇ ಇರುವುದು.
2. ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು.
3. ಜ್ವರ ಬಂದಂತಹ ಸಂದರ್ಭಗಳಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು.
4. ವೈದ್ಯರ ಸಲಹೆ, ಸೂಚನೆಗಳಿಲ್ಲದೇ ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸುವುದು.
5. ಹಿರಿಯ ನಾಗರಿಕರು ಮತ್ತು ಮಕ್ಕಳು ಹಗಲಿನ ವೇಳೆಯಲ್ಲಿ ಸೊಳ್ಳೆಪರದೆಗಳನ್ನು ಉಪಯೋಗಿಸದೆ ಮಲಗುವುದು.
6. ದೇಹಕ್ಕೆ ಶ್ರಮವಾಗುವ ಕೆಲಸಗಳನ್ನು ಮಾಡುವುದು.
ಸಾರ್ವಜನಿಕರು ಡೆಂಗ್ಯೂ, ಚಿಕನ್ ಗುನ್ಯ ರೋಗಗಳಿಂದ ದೂರವೀರಲು ಈ ರೀತಿಯ ಮುಂಜಾಗ್ರತಾ ಕ್ರಮವನ್ನು ವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.