ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವನ್ನು ಮರೆತ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ : ಬಿಎಸ್ಪಿ ಆರೋಪ 

ವಿಜಯ ದರ್ಪಣ ನ್ಯೂಸ್…

ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದ ಅಭಿವೃದ್ಧಿಯನ್ನು ಮರೆತ ಉಸ್ತುವಾರಿ ಸಚಿವ : ಬಿಎಸ್ಪಿ ಆರೋಪ

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜುಲೈ 17- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಉರುಳಿದೆ. ಕ್ಷೇತ್ರದ ಜನತೆ ರಾಜಕೀಯ ಪುನರ್ ಜನ್ಮ ನೀಡಿದ ವಿಧಾನಸಭಾ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕಡೆಗಣಿಸಿದ್ದಾರೆಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜು ಕಿಡಿಕಾರಿದ್ದಾರೆ.

ಪಟ್ಟಣದ ವಿಜಯಪುರ ಕ್ರಾಸ್ ಬಳಿ ಬಿಎಸ್ಸಿ ತಾಲ್ಲೂಕು ಪದಾಧಿಕಾರಿಗಳ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆದಿದ್ದು ಕಾರ್ಯಕರ್ತರನ್ನು ಉದ್ದೇಶಿಸಿ ಬಿಎಸ್ಪಿ ಜಿಲ್ಲಾ ಉಪಾದ್ಯಕ್ಷ ನಾಗರಾಜು ಮಾತನಾಡಿ, ದೇವನಹಳ್ಳಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಗುಂಡಿಗಳು ಬಿದ್ದಿವೆ ಎಂದು ಹೇಳಿದರು 

ಸರ್ಕಾರಿ ಅಧಿಕಾರಿಗಳಿಂದ ಬಡವರ ಕೆಲಸಗಳು ಹಾಗುತ್ತಿಲ್ಲ, ಯಾವುದೇ ಇಲಾಖೆಗೆ ಹೋದರು ಬ್ರೋಕರ್  ಜತೆಗೆ ಭ್ರಷ್ಟಚಾರ ಹೇಳತೀರದಾಗಿದೆ. ಚುನಾವಣೆ ವೇಳೆ ಜನರ ಕಣ್ಮರೆಸಲೆಂದು ಕೇವಲ ಕಾಟಚಾರಕ್ಕೆ ಕಚೇರಿ ತೆರೆದರು. ಅಧಿಕಾರಕ್ಕೆ ಬರುತ್ತಿದ್ದಂತೆ ಆ ಕಚೇರಿ ಬೀಗೆ ಜಡಿದು ಬೆಂಗಳೂರು ಸೇರಿದ್ದಾರೆ. ಸಾಮಾನ್ಯ ಜನರು ಸಚಿವರಿಂದ ಆಗುವ ಕೆಲಸಕ್ಕೆ ಬೆಂಗಳೂರಿಗೆ ತೆರಳುವ ದುಸ್ಥಿತಿ ಬಂದಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಮನಸ್ಸು ಹೊತ್ತಿರುವ ಇಂತಹವರಿಗೆ ಮೀಸಲು ಕ್ಷೇತ್ರಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳು ಅಲ್ಪವದಿಗೆ ಕೊನೆಗಾಣಿಸಿ, ವಿದ್ಯುತ್, ಬಸ್ ದರ ಏರಿಸಲು ಮುಂದಾಗಿರುವ ಅನಿಷ್ಟ ಸರ್ಕಾರವಾಗಿದೆ. ಸಂವಿಧಾನವನ್ನು ವಿವಿಧ ತಿದ್ದುಪಡಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಜಾತಿವಾದಿ, ಕೋಮುವಾದಿ ಮತ್ತು ಬಂಡವಾಳಶಾಹಿಗಳ ಪರವಾದ ಸಂವಿಧಾನವನ್ನು ಮಾಡಿದ್ದಾರೆ ಎಂದು ಹೇಳಿದರು.

ಈ  ಸಂದರ್ಭದಲ್ಲಿ  ಬಿಎಸ್ಪಿ ಕಾರ್ಯದರ್ಶಿ ನರಸಿಂಹಮೂರ್ತಿ, ಮಹಿಳಾ ಘಟಕದ ರಮಾದೇವಿಮುನಿಯಪ್ಪ, ರಾಧಮ್ಮ, ಅದ್ಯಕ್ಷ ನಾಗರಾಜು, ಉಪಾದ್ಯಕ್ಷ ದೇವರಾಜು ಪ್ರಧಾನ ಕಾರ್ಯದರ್ಶಿ. ವೇಣು ಗೋಪಾಲ, ಕಚೇರಿ ಕಾರ್ಯದರ್ಶಿ ಮೂರ್ತಿ, ಖಜಾಂಚಿ ರಾಮಾಂಜಿನಪ್ಪ, ವಿಜಯಪುರ ಟೌನ್ ಅಧ್ಯಕ್ಷ ನಾಗಣ್ಣ, ಉಸ್ತುವಾರಿ ಜಗದೀಶ್, ಕಾರ್ಯದರ್ಶಿ ಮುನಿರಾಜು ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.