ಅಯಿನ ಮಂಡ ಲೀಲಾವತಿ ಗಣಪತಿಗೆ ಕಾಯಕ ರತ್ನ ಪ್ರಶಸ್ತಿ

ವಿಜಯ ದರ್ಪಣ ನ್ಯೂಸ್….

ಅಯಿನ ಮಂಡ ಲೀಲಾವತಿ ಗಣಪತಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

ಕುಶಾಲನಗರ ಕೊಡಗು ಜಿಲ್ಲೆ : ಜಿಲ್ಲೆಯ ಕುಶಾಲನಗರದ ಖ್ಯಾತ ನಾಟಿ ವೈದ್ಯೆ ಅಯಿನ ಮಂಡ ಲೀಲಾವತಿ ಗಣಪತಿ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‌ ಕೊಡಮಾಡುವ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 60 ಕ್ಕೂ ಅಧಿಕ ವರ್ಷಗಳಿಂದ

ನಾಟಿ ಔಷಧಿ ನೀಡುವ ಮೂಲಕ ಜಿಲ್ಲೆ ಮತ್ತು ನೆರೆ ಜಿಲ್ಲೆಗಳ ಮಕ್ಕಳಿಗೆ ಬಾಲ ಸಂಜೀವಿನಿ ಆಗಿರುವ ಲೀಲಾವತಿ ಗಣಪತಿ ( ಕೊಡಗರಮ್ಮ ) ಅವರನ್ನು ಕಾಯಕ ರತ್ನ ಪ್ರಶಸ್ತಿ – 2024 ಕ್ಕೆ ಕೊಡಗು ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್‌ ನಟರಾಜ್ ತಿಳಿಸಿದ್ದಾರೆ.

ಜುಲೈ 13 ರಂದು ಬೀದರ್‌ ಜಿಲ್ಲೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಒಟ್ಟು 35 ಮಂದಿ ಸಾಧಕರಿಗೆ ರಾಜ್ಯ ಮಟ್ಟದ  ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪರಿಷತ್‌ ಕೊಡಗು ಜಿಲ್ಲೆ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಮೋಹನ್ ಮಾಹಿತಿ ನೀಡಿದ್ದಾರೆ