ಪೊಲೀಸರ ಕಾರ್ಯಾಚರಣೆ : ಕಳುವಾಗಿದ್ದ ₹5.91ಲಕ್ಷ ಮೌಲ್ಯದ ವಸ್ತುಗಳ ವಶ.

ಶಿಗ್ಗಾವಿ: ಪಟ್ಟಣದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಸರಣಿ ಕಳ್ಳತನದಿಂದ ಕಳುವಾಗಿದ್ದ ₹5.91ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿಗ್ಗಾವಿ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್‌ ನಿಲ್ದಾಣಕ್ಕೆ ಹೋಗುವ ಮುಖ್ಯ ಪೇಟೆ ರಸ್ತೆಯಲ್ಲಿ ಕಳೆದ ಮೇ 24ರಂದು ನಡೆದ ಸರಣಿ ಕಳ್ಳತನ ಜನರಲ್ಲಿ ಭಯ ಮೂಡಿಸಿತ್ತು. ಅಂದು ಔಷಧ ಅಂಗಡಿ, ಸ್ಟುಡಿಯೋ, ಕಿರಾಣಿ ಅಂಗಡಿ, ಎಸ್‌ಬಿಐ ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರ, ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಅಂಗಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು. ಈದೀಗ ಪೊಲೀಸರು ಆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್‌ ಕಳ್ಳತನ ಪ್ರಕರಣದಲ್ಲಿ ನಮ್ಮ ಪೋಲಿಸ್‌ ತಂಡಕಾರ್ಯಾಚರಣೆ ನಡೆಸಿ ಒಟ್ಟು ₹23 ಲಕ್ಷ ಮೌಲ್ಯದವಿವಿಧ ಮಾಡೆಲ್‌ನ 29 ಬೈಕ್‌ಗಳನ್ನು ವಶಪಡಿಸಿಕೊಂಡುಮೂವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ’ ಎಂದುಜಿಲ್ಲಾ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದರು.

ಇಲ್ಲಿನ ನಗರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಅವರು ‘ಆರೋಪಿಗಳು ನಗರದ ಜನ ಸಂದಣಿಪ್ರದೇಶ ರೈಲ್ವೆ ಸ್ಟೇಶನ್ ಬಸ್ ನಿಲ್ದಾಣ ಬ್ಯಾಂಕ್‌ಮುಂದೆ ನಿಲ್ಲಿಸಿದ ಬೈಕ್‌ಗಳನ್ನು ಕಳವು ಮಾಡಿದ ಬಗ್ಗೆಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಪ್ರಕರಣ ಬೇಧಿಸುವಲ್ಲಿ ರಚಿಸಿದ್ದ ತಂಡವು ತ್ವರಿತಗತಿಯಲ್ಲಿ 29 ಬೈಕ್‌ಗಳು ಹಾಗೂ ಮೂವರು ಆರೋಪಿಗಳನ್ನು ಬಂಧಿಸಿದ್ದು ತಂಡದ ಯಶಸ್ವಿಗೆ ಕಾರಣವಾಗಿದೆ ಎಂದುಪೊಲೀಸ್‌ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಪಿಗಳು ಹಾವೇರಿ ದಾವಣಗೆರೆ ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ಹಾಸನ ಗದಗ ಬೆಳಗಾವಿ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೈಕುಗಳನ್ನು ಕಳವು ಮಾಡಿರುವುದಾಗಿ ಮಾಹಿತಿ ನೀಡಿದರು.

ಹೆಚ್ಚುವರಿ ಎಸ್‌ಪಿ ಸಿ ಗೋಪಾಲ್ ಡಿವೈಎಸ್‌ಪಿ ಗಿರೀಶ ಬೋಜಣ್ಣನವರ ನಗರ ಠಾಣೆ ಸಿಪಿಐ ಶಂಕರ್ ಎಸ್‌.ಕೆ ನಗರಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಎಚ್‌ .ಎನ್‌.ದೊತ್ಮನಿ ಸಿ.ಬಿ. ಕಡ್ಲೆಪ್ಪನವರ ಪಿ.ಕೆ. ಸನಿದಿ ವೈ.ಬಿ.ಓಲೇಕಾ‌ರ್ ಎಚ್‌.ಎಲ್. ನಡುವಿನಮನಿ ಶ್ರೀಕಾಂತ್ ಇದ್ದರು.