ಪಿಡಿಓ ಮೇಲೆ ಆಕ್ರಮ ಖಾತೆ ಆರೋಪ ಅಮಾನತ್ತಿಗೆ ಆಗ್ರಹ
ವಿಜಯ ದರ್ಪಣ ನ್ಯೂಸ್….
ಪಿಡಿಓ ಮೇಲೆ ಆಕ್ರಮ ಖಾತೆ ಆರೋಪ ಅಮಾನತ್ತಿಗೆ ಆಗ್ರಹ
ದೇವನಹಳ್ಳಿ ಜೂ 29,
ಅಂಗನವಾಡಿ ಕಟ್ಟಡವಿದ್ದ ಸ್ಥಳವನ್ನು ಖಾಸಗಿ ವ್ಯಕ್ತಿಗಳಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಖಾತೆ ಮಾಡಿ ಕೊಟ್ಟಿದ್ದಾರೆ, ಇಂತಹ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದುಗ್ರಾಮಪಂಚಾಯ್ತಿ ಸದಸ್ಯ ಸೋಮಶೇಖರ್ ಒತ್ತಾಯಿಸಿದರು.
ಕನ್ನಮಂಗಲ ಗ್ರಾಮ ಪಂಚಾಯಿತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಟಿ.ಶ್ರೀನಿವಾಸ್ ಅಕ್ರಮವಾಗಿ ಖಾತೆ ಮಾಡಿದ್ದಾರೆ ಕೂಡಲೇ ಅವರ ವಿರುದ್ಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ನಿವೇಶನದ ಜಾಗ ದಾಖಲಾಗಿದ್ದು, 1997-98ನೇ ಸಾಲಿನಲ್ಲಿ ಜವಾಹರ್ ರೋಜ್‌ಗಾರ್ ಯೋಜನೆಯಡಿ 75 ಸಾವಿರ ರೂ.ಗಳನ್ನು ಭರಿಸಿ ಕಟ್ಟಡ ನಿರ್ಮಾಣ ಮಾಡಿ, ಅಂದಿನಿಂದ ಇಂದಿನವರೆಗೆ ಅಂಗನವಾಡಿ ಕೇಂದ್ರ ಚಾಲ್ತಿಯಲ್ಲಿದ್ದು, ವಿದ್ಯುತ್ ಬಿಲ್ ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹೆಸರಿನಲ್ಲಿ ಬಿಲ್ ಪಾವತಿ ಮಾಡುತ್ತಿರುತ್ತಾರೆ.
ಆದರೆ ಶ್ರೀನಿವಾಸ್ ಹಣದಾಸೆಗೆ 1969ರಲ್ಲಿ ಸುಳ್ಳು ಹಕ್ಕುಪತ್ರ ಸೃಷ್ಟಿಸಿ, ಇ-ಖಾತಾ ಮಾಡಿದ್ದು ನಂತರ ತಿದ್ದುಪಡಿ ಮಾಡಿ ಮಾರ್ಚ್ .10 -2020ರಂದು 632.48 ಚದರ ಮೀಟರ್‌ಗಳಿಗೆ ಕಡಿಮೆ ಮಾಡಿ ದಾಖಲೆ ವಿತರಿಸಿದ್ದಾರೆ.
ನಾವು ಈಗಾಗಲೆ ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆರವರಿಗೆ ಲಿಖಿತ ದೂರು ನೀಡಲಾಗಿದ್ದು, ಅವರು ಕೂಡಲೇ 15 ದಿನಗಳೊಳಗೆ ವರದಿ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಇದರ ಬಗ್ಗೆ ಲೋಕಾಯುಕ್ತದಲ್ಲೂ ಸಹ ದೂರು ನೀಡಲಾಗಿದೆ ಎಂದು ತಿಳಿಸಿದರು.
ಇನ್ನೊಬ್ಬ ದೂರುದಾರ ಎಂ.ಚಂದ್ರೇಗೌಡ ಮಾತನಾಡಿ, 2021ರ ಆಗಸ್ಟ್ 21ರಂದು ಹಿಂದಿನ ಪಿಡಿಒ ಮಹಜರ್ ಮಾಡಿ, ತಾಲ್ಲೂಕು ಪಂಚಾಯಿತಿ ಇಓ ಗಳಿಗೆ ವರದಿ ಸಲ್ಲಿಸಿರುತ್ತಾರೆ, ವರದಿಯಲ್ಲಿ ವಿಸ್ತೀರ್ಣ 7 ಜನರಿಗೆ ಸೇರಿತ್ತದೆ. ಖಾತೆದಾರರಿಗೆ ಒಟ್ಟು 803.41 ಚದರ ಮೀಟರ್ ಒಳಗೊಂಡಿರುತ್ತದೆ, ಇದರಲ್ಲಿ ಪಿಡಿಓ ಅಕ್ರಮ ಖಾತೆ ಮಾಡಿರುವುದು ಕಂಡು ಬಂದಿದ್ದು ಕೂಡಲೆ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ನಿವೇಶನ ಕಟ್ಟಡ ಸರ್ಕಾರಿ ಅಂಗನವಾಡಿಯದ್ದೆ ಎನ್ನುವುದಕ್ಕೆ ದಾಖಲೆಗಳು ಇದ್ದರೂ, ಸಹಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಟಿ. ಶ್ರೀನಿವಾಸ್ ಅವರು ನಕಲಿ ದಾಖಲೆಗಳ ಮೂಲಕ ಬಲಾಡ್ಯರಿಗೆ ಖಾತೆ ಮಾಡಿದ್ದರೆ, ಅಷ್ಟೇ ಅಲ್ಲದೆ ಇದರ ಪಕ್ಕದಲ್ಲೇ ಖಾನೇಷು ಮಾರಿ ನಂಬರ್ ಬೇರೆಯವರ
ನಿವೇಶನವಿದ್ದು ಅದನ್ನು ಸೇರಿ ಖಾತೆ ಮಾಡಿದ್ದಾರೆ,
ಸರ್ಕಾರ ಇದನ್ನು ಪರಿಶೀಲಿಸಿ ಅವರನ್ನು ಅಮಾನತ್ತು ಮಾಡಬೇಕು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಆಗ್ರಹಿಸಿದ್ದಾರೆ.
ದೇವನಹಳ್ಳಿ ಪಟ್ಟಣ ಪತ್ರಕರ್ತರೊಂದಿಗೆ ಅಂಗನವಾಡಿ ಜಾಗಕ್ಕೆ ಸಂಬಂದಿಸಿದ ದಾಖಲೆಯನ್ನು ವಿವರಿಸಿ ಮಾತನಾಡಿದ ಅವರು ಸರ್ಕಾರದ ವತಿಯಿಂದ ಒಂದು ನಿವೇಶನಕ್ಕೆ ಹಕ್ಕುಪತ್ರ ನೀಡಲು, 30×40ಅಥವಾ 60×40 ನೀಡುತ್ತಾರೆ 9000 ಅಡಿ ಜಾಗಕ್ಕೆ ನಿವೇಶನದ ಹಕ್ಕು ಪತ್ರ ನೀಡುವುದಿಲ್ಲ, ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎನ್ನಲಾದ ಹಕ್ಕುಪತ್ರ ಸುಮಾರು 9000ಸಾವಿರ ಅಡಿಯದ್ದಾಗಿದೆ.
ಇದ್ದು ನಿಜಕ್ಕೂ ನಕಲಿ ದಾಖಲೆಗಳಾಗಿದೆ.
ಅಕ್ರಮವಾಗಿ ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಅಂಗನವಾಡಿ ಸ್ಥಳವನ್ನು ಕನ್ನಮಂಗಲ ಪಂಚಾಯತಿ ಪಿಡಿಒ ಟಿ.ಶ್ರೀನಿವಾಸ್ ದುಡ್ಡಿನ ಆಸೆಗೆ ಖಾಸಗಿ ವ್ಯಕ್ತಿಗಳ ಹೆಸರಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.