ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ

ವಿಜಯ ದರ್ಪಣ ನ್ಯೂಸ್ …

ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ 

ವಿಜಯಪುರ :2023 -24ನೇ ಸಾಲಿನಲ್ಲಿ ಜೆಸಿಐ ಅಧ್ಯಕ್ಷರ ನನ್ನ ಅಧಿಕಾರ ಅವಧಿಯಲ್ಲಿ 80000 ಪಾಯಿಂಟ್ ತೆಗೆದುಕೊಂಡಿದ್ದೆ ಇಂದಿನ ಅಧ್ಯಕ್ಷರು ಅರ್ಧವಾರ್ಷಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪಾಯಿಂಟ್ ತೆಗೆದುಕೊಂಡಿರುವುದು ಸಂತಸ ತರುವ ವಿಷಯವಾಗಿದೆ ಎಂದು ಜೆಸಿಐ ವಲಯ 14ರ ಅಧಿಕಾರಿಗಳಾದ ಎನ್ ಸಿ ಮುನಿವೆಂಕಟರಮಣ ತಿಳಿಸಿದರು.

 

ಅವರು ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಪುರಸಭಾ ಸದಸ್ಯರು ಜೆಸಿಐ ಅಧ್ಯಕ್ಷರು ಆದ ಬೈರೇಗೌಡರವರ ಸ್ವಗೃಹದಲ್ಲಿ ಜೆ ಸಿ ಐ ಮತ್ತು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಆಶ್ರಯದಲ್ಲಿ ವೃತ್ತಿಪರ ಸೇವಾ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.

 ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷರಾದ ಕೆ ವೆಂಕಟೇಶ್ ನೆರವೇರಿಸಿ ಮಾತನಾಡುತ್ತಾ ಉಭಯ ಸಂಸ್ಥೆಗಳು ವೃತ್ತಿ ಸೇವಾ ಪುರಸ್ಕಾರ ಪ್ರಸ್ತುತ ಸರ್ಕಾರ ಅಲ್ಲದೆ ಸಂಘ ಸಂಸ್ಥೆಗಳು ಜನಪರಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷಕರ ವಿಚಾರವಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡುತ್ತಾ ವೃತ್ತಿಯ ಜೀವನ ನಿರ್ವಹಣೆಗೆ ಮಾಡುವ ಕೆಲಸ. ವೃತ್ತಿಯ ಜೀವನ ನಿರ್ವಹಣೆ ಮಾಡುವ ಕೆಲಸವೆಂಬುದು ನಮ್ಮ ಶಿವಶರಣರಾದ ಕ್ರಾಂತಿಯೋಗಿ ಬಸವಣ್ಣನವರು ಕಾಯವೇ ಕೈಲಾಸ ಎಂಬುದನ್ನು ಮಾರ್ಮಿಕವಾಗಿ 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅವರವರ ವೃತ್ತಿಯ ಅನುಗುಣವಾಗಿಜಾತಿಯ ಮಂತ್ರಿಗಳನ್ನು ಮಾಡಿ ಕಾಯಕ ಪ್ರಾರಂಭಿಸಿದರು. ಜೀವನ ನಿರ್ವಹಣೆಯಲ್ಲಿ ವೃತ್ತಿಯನ್ನು ಅವಿಭಾಜ್ಯ ಅಂಗ . ಜೀವನದಲ್ಲಿ ಉತ್ತಮವಾದ ಕೌಶಲ್ಯತೆಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು

ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜೆ.ಎನ್. ಶ್ರೀನಿವಾಸ್ ಸನಾತನ ಧರ್ಮದಲ್ಲಿ ವ್ಯಕ್ತಿಯ ಪ್ರಾಶಸ್ತ್ಯವನ್ನು ಅರಿಯುವುದು . ಅಂದಿನ ಜ್ಞಾನಿಗಳು ಕುಲ ಕಸುಬಿಗೆ ತಕ್ಕಂತೆ ವೇದ ಉಪನಿಷತ್ ಕುರಿತು ಕೆಲಸ ಮಾಡುವರಿಗೆ ಬ್ರಾಹ್ಮಣ. ವ್ಯವಹಾರ ವ್ಯಾಪಾರ ಮಾಡುವುದರಿಗೆ ವೈಶ್ಯರು ದೇಶ ಕಾಯುವವರು. ಮತ್ತು ಪ್ರಜೆಗಳನ್ನು ಕಾಯುವವರು ಕ್ಷತ್ರಿಯರು ವ್ಯವಸಾಯವನ್ನು ಮಾಡುವ ರೈತರು ಒಕ್ಕಲುತನದವರು ರೈತ ದೇಶಕ್ಕೆ ಬೆನ್ನೆಲುಬು ಎಂದು ಬಣ್ಣಿಸುತ್ತಾ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ನಾಲ್ಕು ಮಂದಿ ಪುರಸ್ಕೃತರು ತಮ್ಮದೇ ಆದ ವೃತ್ತಿಯಲ್ಲಿ ಉತ್ತಮ ಹೆಸರನ್ನು ಗಳಿಸಿರುತ್ತಾರೆಂದು ತಿಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಅಧ್ಯಕ್ಷರಾದ ಬೈರೇಗೌಡ ಮಾತನಾಡುತ್ತಾ ನಮ್ಮ ಸಂಸ್ಥೆಯು ಜನನೋಪಯುಕ್ತವಾದ ಕಾರ್ಯಕ್ರಮಗಳು ಹಮ್ಮಿಕೊಂಡು ಬರುತ್ತಿದೆಂದು ಸಂತಸ ವ್ಯಕ್ತಪಡಿಸಿದ್ದರು.

 ಇದೇ ಸಂದರ್ಭದಲ್ಲಿ ಕಾರ್ಪೆಂಟರ್ ಗಡ್ಡದ ಶಿವಕುಮಾರ್ ಅಂಗನವಾಡಿ ಕಾರ್ಯಕರ್ತೆ ಉಮಾದೇವಿ ಮಹಾದೇವಣ್ಣ ಪಾರ್ವತಮ್ಮ ರವರನ್ನು ವೃತ್ತಿ ಸೇವಾ ಪ್ರಶಸ್ತಿ ನೀಡಿಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಸಿಎಂ ರಾಮು ಶ್ರೀ ರಾಮಣ್ಣ ರಾಷ್ಟ್ರೀಯ ಉಪಾಧ್ಯಕ್ಷ ಸೀನಿಯರ್ ಡಾ. ಎಂ ಶಿವಕುಮಾರ್ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಕಾರ್ಯದರ್ಶಿ ಎ ಬಿ ಪರಮೇಶ್ವರಯ್ಯ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಕೋಶಾಧಿಕಾರಿಗಳು ಎಸ್ ಆರ್ ಎಸ್ ಬಸವರಾಜು ಜೆಸಿಐ ಮಾಜಿ ಅಧ್ಯಕ್ಷ ಎಸ್ ರಮೇಶ್ ಜೆ ಆರ್ ಮುನಿವೀರಣ್ಣ ವಿ ವೆಂಕಟೇಶ್ ಎಸ್.ರಮೇಶ್ ಕಾರ್ಯದರ್ಶಿ ಮಾಧವಿ ರಮೇಶ್ ಸೀನಿಯರ್ ಮಾರ್ಕೆಟ್ ವೆಂಕಟೇಶ್ ಉಪಸ್ಥಿತರಿದ್ದರು