ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ : ಬೆಂಗಳೂರು ಗ್ರಾ.ಜಿಲ್ಲೆಯಲ್ಲಿ ಶೇ.77.03 ರಷ್ಟು ಮತದಾನ

ವಿಜಯ ದರ್ಪಣ ನ್ಯೂಸ್…

ಕರ್ನಾಟಕ ವಿಧಾನ ಪರಿಷತ್ ಚುನಾವಣೆ-2024

ಬೆಂಗಳೂರು ಪದವೀಧರರ ಕ್ಷೇತ್ರ

ಜಿಲ್ಲೆಯಲ್ಲಿ ಶೇ.77.03 ರಷ್ಟು ಮತದಾನ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್

ಬಾಲಗಂಗಾಧರನಾಥ ಸ್ವಾಮೀಜಿ ನಗರ (ಬಿಜಿಎಸ್ ನಗರ )ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್03  : ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 14729 ಪದವೀಧರ ಮತದಾರರು ಮತಚಲಾಯಿಸಿದ್ದು, ಶೇಕಡ 77.03 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದರು.

ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 5515 ಪದವೀಧರ ಮತದಾರರ ಪೈಕಿ 4261 ಮತದಾರರು ಮತ ಚಲಾಯಿಸಿದ್ದು ಶೇ.77.26 ರಷ್ಟು ಮತದಾನವಾಗಿದೆ.

ದೇವನಹಳ್ಳಿ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 4739 ಪದವೀಧರ ಮತದಾರರ ಪೈಕಿ 3459 ಮತದಾರರು ಮತ ಚಲಾಯಿಸಿದ್ದು ಶೇ. 72.80 ರಷ್ಟು ಮತದಾನವಾಗಿದೆ,

ಹೊಸಕೋಟೆ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 5611 ಪದವೀಧರ ಮತದಾರರ ಪೈಕಿ 4318 ಮತದಾರರು ಮತ ಚಲಾಯಿಸಿದ್ದು ಶೇ. 76.95 ರಷ್ಟು ಮತದಾನವಾಗಿದೆ.

ನೆಲಮಂಗಲ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 3257 ಪದವೀಧರ ಮತದಾರರ ಪೈಕಿ 2700 ಮತದಾರರು ಮತ ಚಲಾಯಿಸಿದ್ದು ಶೇ. 82.89 ರಷ್ಟು ಮತದಾನವಾಗಿದೆ,

ಒಟ್ಟಾರೆ 10240 ಪುರುಷ ಮತದಾರರು, 8882 ಮಹಿಳಾ ಮತದಾರರು ಸೇರಿ ಒಟ್ಟು 19122 ಪದವೀಧರ ಮತದಾರರು ಅಂತಿಮ ಪಟ್ಟಿಯಲ್ಲಿ ಇದ್ದು, ಅದರಲ್ಲಿ 8229 ಪುರುಷ ಮತದಾರರು, 6500 ಮಹಿಳಾ ಮತದಾರರು ಸೇರಿ ಒಟ್ಟಾರೆ 14729 ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ ಎನ್ ಶಿವಶಂಕರ್ ಅವರು ತಿಳಿಸಿದರು.