ಶ್ರೀ ಶಂಕರಚಾರ್ಯ ಜಯಂತಿ: ಸಾಧು-ಸಂತರ ಸಮಾಗಮ
ವಿಜಯ ದರ್ಪಣ ನ್ಯೂಸ್…
ಶ್ರೀ ಅನುಸೂಯ ಆಶ್ರಮದಲ್ಲಿ ಶ್ರೀ ಶಂಕರಚಾರ್ಯ ಜಯಂತಿ: ಸಾಧು-ಸಂತರ ಸಮಾಗಮ
ಬೆಂಗಳೂರು: ರಾಜಾಜಿನಗರ, ಕೈಗಾರಿನಗರದಲ್ಲಿ ಶ್ರೀ ಅನುಸೂಯ ಆಶ್ರಮದ ವತಿಯಿಂದ 82ನೇ ವರ್ಷದ ಶ್ರೀ ಶಂಕರಚಾರ್ಯರ ಜಯಂತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಯಿತು.
ಶಂಕರ ಜಯಂತಿ ಪ್ರಯುಕ್ತ ಸಾಧು-ಸಂತರ ಸಮಾಗಮ ಮತ್ತು ಹರಿಕಥೆ , ಉಪನ್ಯಾಸ ಹಾಗೂ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರವರು, ಶ್ರೀ ಅನುಸೂಯ ಆಶ್ರಮದ ಅಧ್ಯಕ್ಷ ತುಳಸಿರಾಮ್ ರವರು ಪದಾಧಿಕಾರಿಗಳು 200ಕ್ಕೂ ಹೆಚ್ಚು ರಾಜ್ಯ, ಹೊರರಾಜ್ಯದ ಸಾಧು-ಸಂತರು ಭಾಗವಹಿಸಿದ್ದರು.
ಶ್ರೀ ಶಂಕರರು ಸನಾತನ ಧರ್ಮ ಉಳಿವಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರಗೆ ಮೂರು ಬಾರಿ ಕಾಲ್ನಿಡಿಗೆಯಲ್ಲಿ ಸನಾತನ ಧರ್ಮ ಪ್ರಚಾರ ಮಾಡಿದರು.
ಅನೂಸೂಯ ಆಶ್ರಮದಲ್ಲಿ ಪವಾಡ ಪುರುಷ ಶ್ರೀ ಗಂಗಾಧರಸ್ವಾಮಿರವರ ಗದ್ದಿಗೆ ಇದೆ, ಇಲ್ಲಿ ಬರುವ ಭಕ್ತಾಧಿಗಳಿಗೆ ಸಕಲ ಸಂಕಷ್ಟ ನಿವಾರಣೆಗಾಗಿ ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸುತ್ತಾರೆ.
ಶ್ರೀ ಶಂಕರಚಾರ್ಯರು ಸಾರಿದ ಅದೈತ ಸಿದ್ದಾಂತ ಸಾರ್ವಕಾಲಿಕ ಸತ್ಯ. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಮಹಾಪುರುಷರಲ್ಲಿ ಶಂಕರಚಾರ್ಯರು ಪ್ರಮುಖರು,
ಶಂಕರಚಾರ್ಯರ ತತ್ವ ಸಿದ್ಧಾಂತಗಳು ಸಮಾಜದಲ್ಲಿರುವ ಪ್ರತಿಯೊಬ್ಬರು ಪಾಲಿಸಬೇಕು ಆಗ ಮಾತ್ರ ದೇಶದಲ್ಲಿ ಶಾಂತಿ ನೆಮ್ಮದ್ದಿಯಿಂದ ಜೀವನ ಸಾಗಿಸಬಹುದು.
ರಾಜ್ಯದಲ್ಲಿ ಮಳೆ, ಉತ್ತಮ ಬೆಳೆಯಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಅನುಸೂಯ ಆಶ್ರಮ ಶ್ರೀ ಶಂಕರಚಾರ್ಯರ ತತ್ವ, ಸಿದ್ದಾಂತ ಪಾಲಿಸಿಕೊಂಡು, ಸನಾತನಾ ಉಳಿಸಲು ಶ್ರಮಿಸುತ್ತಿದೆ.