ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ ರಕ್ಷಣೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್


ವಿಜಯ ದರ್ಪಣ ನ್ಯೂಸ್

ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ  ರಕ್ಷಣೆ ಮಾಡುವುದರೆ ಬರಗಾಲದಲ್ಲಿಯೂ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್

2023-24ನೇ ಸಾಲಿನಲ್ಲಿ ಮಾವು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು ಅದನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸೀನಿಯರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ರವರು ರೈತರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಎಂದು ಬಣ್ಣಿಸುತ್ತ, ಉತ್ತಮವಾದ ರೀತಿಯಲ್ಲಿ ನೀರಿನಲ್ಲಿ ನಿರ್ವಹಣೆ ಕೀಟಗಳಿಂದ ಸೂಕ್ತ ರಕ್ಷಣೆ ನೀಡುವುದರಿಂದ ಬರಗಾಲದಲ್ಲಿಯೂ ಉತ್ತಮ ಫಸಲಿನ ಇಳುವರಿ ಪಡೆಯಲು ಸಾಧ್ಯ ಎಂದು  ವಿಜ್ಞಾನಿ ಡಾ. ಅಬ್ರಹಾಂ ವರ್ಗಿಸ್ ರೈತರಿಗೆ ಸಲಹೆ ನೀಡಿದರು.


ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಆಶ್ರಯದಲ್ಲಿ ಬೀಡಿಗಾನಹಳ್ಳಿ ಗೇಟ್ ಬಳಿ ಸೀನಿಯರ್ ಕೆ ವೆಂಕಟೇಶ್ ರವರ ಸಭಾಭವನದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನಗಳ ಮಾವು ದ್ರಾಕ್ಷಿ ದಾಳಿಂಬೆ ಬೆಳೆಗಳ ಫಸಲಿನ ಇಳುವರಿ ಕುರಿತು ತರಬೇತಿ ಕಾರ್ಯಗಾರದಲ್ಲಿ ಡಾಕ್ಟರ್ ರಶ್ಮಿ ಮಾತನಾಡುತ್ತಾ
ರೈತರು ಬೆಳೆಗಳನ್ನು ಮಕ್ಕಳಂತೆ ಪೋಷಿಸಬೇಕು ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವ ಮುಖೇನ ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಮಾತನಾಡುತ್ತಾ ದಾಳಿಂಬೆ ಬೆಳೆ ರೈತರಿಗೆ ಚಿನ್ನದ ಬೆಳೆ ಇದ್ದ ಹಾಗೆ ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ಪೋಷಿಸುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇಲಾಖೆಯವರು ನೀಡುವ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಕಾಲಕಾಲಕ್ಕೆ ಪಡೆದು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಿರಿ ಎಂದರು 

ಸೀನಿಯರ್ ಚೇಂಬರ್ ಅಧ್ಯಕ್ಷ ಕೆ ವೆಂಕಟೇಶ್ ಮಾತನಾಡುತ್ತಾ ಈ ಕಾರ್ಯಕ್ರಮ ಆಯೋಜನೆ ಮಾಡಲು ಸಲಹೆ ಮತ್ತು ಮಾರ್ಗದರ್ಶನ ನೀಡಿದ ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ನಾರಾಯಣಸ್ವಾಮಿರವರಿಗೆ ಕೃತಜ್ಞತೆಗಳನ್ನು ಸಮರ್ಪಿಸುತ್ತಾ ಭಾಗವಹಿಸಿದ ಎಲ್ಲಾ ರೈತರು ಉತ್ತಮ ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಉತ್ತಮ ಫಸಲಿನ ಇಳುವರಿಯನ್ನು ಪಡೆಯಿರಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಿಕೆವಿಕೆಯ ನಿವೃತ್ತ ಡಿನ್  ವೆಂಕಟೇಶಯ್ಯ, ಬೀಡಿಗಾನಹಳ್ಳಿ ಮಾಜಿ ಚೇರ್ಮನ್ ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಬಿ. ಚಿದಾನಂದ ಮೂರ್ತಿ ಜೇಸಿಐ ಅಧ್ಯಕ್ಷ ಎಂ. ಭೈರೇಗೌಡ, ಡಾಕ್ಟರ್ ಡಿ ಕೆ ನಾಗರಾಜ್, ವಿಶೇಷ ಅತಿಥಿಗಳಾಗಿ ಜೇಸಿಐ ಅಲ್ಯೂಮಿನಿ ಕ್ಲಬ್ ನ ಸಂಯೋಜಕ ಎಂ ಮುನಿ ಕೃಷ್ಣಪ್ಪ ಭಾಗವಹಿಸಿದ್ದರು.