*“ತಣ್ಣೀ”ರ್ “ತಣ್ಣೀ”ರ್**

ವಿಜಯ ದರ್ಪಣ ನ್ಯೂಸ್ 

*“ತಣ್ಣೀ”ರ್ “ತಣ್ಣೀ”ರ್**

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹನಿ ನೀರಿಗೆ ಅಭಾವ ಸೃಷ್ಟಿಯಾಗಿದೆ. ಸಾಲ ಮಾಡಿ, ಬ್ಯಾಂಕಿಗೆ ಸೈಟನ್ನು ಅಡವಿಟ್ಟು ಹಣ ಸುರಿದು ಬಾಡಿಗೆಯಿಂದಲೇ ಇ.ಎಂ.ಐ’ ಬಾಡಿಗೆಯಿಂದಲೇ ಹೆಂಡತಿಗೆ ಶಾಪಿಂಗ್ ಖರ್ಚು ಮಕ್ಕಳ ದುಬಾರಿ ಫೀಸುಗಳನ್ನು ಕಟ್ಟಲು ಯೋಚಿಸಿದ್ದ ಮನೆಮಾಲೀಕರು ಈಗ ಬಾಯಿ ಬಾಯಿ ಬಿಡುತ್ತಿದ್ದಾರೆ. ಕಾರಣ ಬಾಡಿಗೆಗೆ ಬಂದವರು ಕಟ್ಟಡದಲ್ಲಿ ನೀರಿಲ್ಲವೆಂದು ಮನೆ ಖಾಲಿ ಮಾಡುತ್ತಿದ್ದಾರೆ. ನೀರು ಸಮೃದ್ಧವಾಗಿ ಸಿಗುವ ಮನೆಗಳಿಗೆ ಗುಳೆ ಹೋಗುತ್ತಿದ್ದಾರೆ. ಬೆಂಗಳೂರು ನಗರವೊಂದೇ ಅಲ್ಲ ಇಡೀ ಕರ್ನಾಟಕದಲ್ಲೇ ನೀರಿಗೆ ಹಾಹಾಕಾರ ಶುರುವಾಗಿದೆ.

ಕಾಂಗ್ರೆಸ್ ಸರಕಾರ ಅಧಿಕಾರ ನಡೆಸುವಾಗ ಅನಾವೃಷ್ಟಿ ಶತಃಸಿದ್ಧ, ಹಾಗಂತ ಬಿಜೆಪಿ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ. ಆಗ ಅತೀವೃಷ್ಟಿ. ಕೊಡಗು ಜಿಲ್ಲೆ, ನಾರ್ಥ್ ಕರ್ನಾಟಕ ಮುಳುಗಡೆಯಾಗಿತ್ತು. ಇಲ್ಲಿ ಮನೆಯಿತ್ತು ಈಗಿಲ್ಲ. ಇಲ್ಲಿ ಜಮೀನು, ತೋಟ ಇತ್ತು ಈಗಿಲ್ಲ ಎನ್ನುವಷ್ಟು ಮಳೆ ಮಳೆಯೆಂದರೆ ಅಂತಿoಥ ವೃಷ್ಟಿಯಲ್ಲ. ಎಲ್ಲವನ್ನು, ಎಲ್ಲರನ್ನು ಕೊಚ್ಚಿಕೊಂಡು ಹೋಗುವಂಥ ಮಳೆ. ಈಗ ಮಳೆನೂ ಇಲ್ಲ. ನೀರೂ ಇಲ್ಲ.
ಎಲ್ಲಿಂದ ಬರುತ್ತದೆ ಮಳೆ. ಇದ್ದ ಮರಗಳಿಗೆ, ದನಕರುಗಳಿಗೆ ನೀರುಣಿಸುತ್ತಿದ್ದ ಕೆರೆಕಟ್ಟೆಗಳನ್ನು ನುಂಗಿ ನೀರು ಕುಡಿದಾಗಿದೆ. ಈಗ ಅವರ ಮಕ್ಕಳ ಬಾಯಿಯನ್ನು ತೋಯಿಸಲು ಹನಿ ನೀರಿಲ್ಲ.

ಕಾವೇರಿ ನೀರಿಗೆ ಕನ್ನ ಕೊರೆದ ಖದೀಮರು, ರಾಜಕಾರಣಿಗಳು, ಹಣವಂತರು ಮಾಡಬಾರದ ಅನಾಚಾರ ಮಾಡಿಯಾಗಿದೆ. ಕಾವೇರಿ ಕೊಳ್ಳಗಳಿಗೆ ಅನಧಿಕೃತ ಪಂಪ್‌ಸೆಟ್ಗಳು, ಕಾವೇರಿ ಮಡುವಿನಲ್ಲೇ ಅಪಾರ್ಟ್ಮೆಂಟ್‌ಗಳು, ಕಟ್ಟಡಗಳು, ಕಾವೇರಿ ನದಿ ಹರಿಯಲು ಜಾಗವೇ ಇಲ್ಲದಂತೆ ಮಾಡಿದ್ದಾರೆ.
ಬೆಂಗಳೂರು ನಿರ್ಮಾತೃಗಳು ಸುಸಜ್ಜಿತ, ವ್ಯವಸ್ಥಿತ ನಗರ ಮಾಡುವ ಹುನ್ನಾರ ಮಾಡಿದ್ದರು. ಅಲ್ಲಲ್ಲಿ ಕೆರೆಯನ್ನು ನಿರ್ಮಿಸಿ ಇಡೀ ನಗರಕ್ಕೆ ನೀರನ್ನು ಕೊಡಲು ಯೋಚನೆ ಮಾಡಿದ್ದರು. ಆದರೆ ಭೂಮಾಫಿಯಾ ಬೆಂಗಳೂರಿನ 70ರಷ್ಟು ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಂಡಿತು. ಬೆಂಗಳೂರಿನ ಕೆರೆಗಳ ಮಾರಣ ಹೋಮವಾಗಿ ಕೆರೆಗಳ ಜಾಗದಲ್ಲಿ ಮನೆಕಟ್ಟುವ ನಿವೇಶನಗಳಾಯಿತು. ಉದಾಹರಣೆಗೆ ಸಾರಕ್ಕಿ ಅಗ್ರಹಾರ ಕೆರೆ ಈಗ ಜಿಪಿನಗರ 4ನೇ ಹಂತವಾಗಿದೆ. ಹಾಗೆಯೇ ಚಿನಗಾರ ಕೆರೆ ಈಜಿಪುರ, ಚಲ್ಲಪ್ಪಟ್ಟ ಕೆರೆ ಕರ್ನಾಟಕ ಗಾರ್ಡನ್ ಅಸೋಸಿಯೋಷನ್, ದೊಮ್ಮಲೂರು ಕೆರೆ ದೊಮ್ಮಲೂರು 2ನೇ ಹಂತ, ಕಡಿರೇನ ಹಳ್ಳಿಕೆರೆ ಬನಶಂಕರಿ 2ನೇ ಹಂತ, ರಾಮಶೆಟ್ಟಿಪಾಳ್ಯ ಕೆರೆ ಮಿಲ್ಕ್ ಕಾಲೋನಿ, ಅಗಸನಕೆರೆ ಗಾಯಿತ್ರಿದೇವಿ ಪಾಕ್, ಕೇತ್‌ಮಾರನಹಳ್ಳಿ ಕೆರೆ ರಾಜಾಜಿನಗರ, ಧರ್ಮಾಂಬುಧಿಕೆರೆ ಕೆಂಪೇಗೌಡ ಬಸ್ ಸ್ಟಾಂಡ್, ಸಂಪಿಗೆಕೆರೆ ಕಂಠೀರವ ಸ್ಟೇಡಿಯಂ, ಕೋರಮಂಗಲಕೆರೆ ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಸೊನ್ನೇನಹಳ್ಳಿ ಕೆರೆ ಆಸ್ಟಿನ್ ಟೌನ್, ಹೆಣ್ಣೂರು ಕೆರೆ ನಾಗವಾರ, ಕೊಟ್ಟೂರು ಕೆರೆ ರಾಜರಾಜೇಶ್ವರಿಲೇಔಟ್, ಪರಂಗಿ ಪಾಳ್ಯ ಕೆರೆ ಹೆಚ್‌ಎಸ್‌ಆರ್ ಲೇಔಟ್, ಕುರುಬರಹಳ್ಳಿ ಕೆರೆ ಬಸವೇಶ್ವರ ನಗರ ಬಡಾವಣೆ. ಹೀಗೆ ಒಂದೊoದು ಏರಿಯಾಗಳು ಒಂದೊoದು ಕೆರೆಗಳನ್ನು ಮುಳುಗಿಸಿ ಲಕ್ಷ ಲಕ್ಷ ಕೊಟ್ಟವರಿಗೆ ನಿವೇಶನ ಹಂಚಿದ್ದಾರೆ.

ಕಾವೇರಿ ನದಿಯನ್ನು ಬೆಂಗಳೂರು ವಸತಿಗಳಿಗೆ ಕುಡಿಯುವುದಕ್ಕೆ ಹರಿಸುತ್ತಿದ್ದಾರೆ. ಆದರೆ ಹಣವಿದ್ದವರು ಇಲ್ಲದಿದ್ದವರು ಕುಡಿಯುವುದಕ್ಕಷ್ಟೇ ಉಪಯೋಗಿಸುತ್ತಿಲ್ಲ.
ಕಾವೇರಿ ನದಿಯನ್ನು ತಮಿಳುನಾಡಿಗೆ ಹರಿಸಿ ಮೆಟ್ಟೂರು ಡ್ಯಾಂ ತುಂಬಿವೆ. ಅಲ್ಲಿ ತುಂಬಿದ ನಂತರ ಸಮುದ್ರಕ್ಕೆ ಚೆಲ್ಲಿ ಬೆಂಗಳೂರಿನವರು ನೀರಿಗಾಗಿ “ತಣ್ಣೀ “ರ್ “ತಣ್ಣೀ”ರ್ ಎನ್ನುವಂತೆ ಮಾಡುತ್ತಿರುವ ಅಧಿಕಾರಸ್ತರಿಗೆ ಧಿಕ್ಕಾರ.


ಬಿ. ಆರ್. ನರಸಿಂಹ ಮೂರ್ತಿ
9448174932