*ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…* *ಬಿಜಾಪುರದ ಬೆಲ್ಲ*
ವಿಜಯ ದರ್ಪಣ ನ್ಯೂಸ್
*ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…*
*ಬಿಜಾಪುರದ ಬೆಲ್ಲ*
ಬಿಳಿ ಜುಬ್ಬಾ ಬಿಳಿ ಪೈಜಾಮ ಬಲಗೈಯಲ್ಲಿ ನವಿಲಿನ ಪುಕ್ಕಗಳ ಪೊರಕೆ, ಎಡಗೈಯಲ್ಲಿ ಹೊಗೆಯಾಡುತ್ತಿರುವ ಧೂಪದ ಬಟ್ಟಲು ಹಿಡಿದುಕೊಂಡು ಬಂದು ಅಲ್ಲಾನ ಕಲ್ಮಾ ಹೇಳಿಕೊಂಡು ನಿಂತರೆ ಪ್ರತಿ ಅಂಗಡಿಯವರೂ ಆತನಿಗೆ ಐದು, ಹತ್ತು, ಐವತ್ತು ಅಥವಾ ತಮ್ಮ ಶಕ್ತ್ಯಾನುಸಾರ ಕೊಟ್ಟೆ ಮುಂದೆ ಸಾಗಿಸುತ್ತಾರೆ. ಕೊಡದಿದ್ದರೆ ಆತ ಬಿಡಬೇಕಲ್ಲಾ ತನ್ನಲ್ಲಿರುವ ನವಿಲಿನ ಪುಕ್ಕಗಳ ಪೊರಕೆಯಿಂದ ಇಡೀ ಅಂಗಡಿಗೆ ಹೊಗೆ ಹಾಕಿ ಪೊರಕೆಯಿಂದ ಅಂಗಡಿಯವನ ತಲೆಗೆ ಮೊಟಕುತ್ತಾನೆ. ಇದೆಲ್ಲಾ ಬೇಡವೆನ್ನುವವರು ಆತನನ್ನು ಬಾಗಿಲಿನಿಂದಲೇ ಸಾಗಹಾಕುತ್ತಾರೆ.
ಇಡೀ ದೇಶದಾದ್ಯಂತ ಸಂಚಲನ ಮೂಡಿಸಿದ್ದು ಹುಲಿಯುಗುರಿನ ಬಗ್ಗೆ, ಪ್ರಾಣಿ ದಯಾ ಸಂಘದವರು, ಅರಣ್ಯಾ ಇಲಾಖೆ ಅಧಿಕಾರಿಗಳು, ಕೆಲವರನ್ನು ಅದರಲ್ಲೂ ಕೈಲಾಗದವರನ್ನು ದಸ್ತಗಿರಿ ಮಾಡಿ ಕೇಸು ಜಡಿದು ಕೋರ್ಟ್ಗೆ ಕಳಿಸಿದರೂ ಕೈಮೇಲಾದವರನ್ನು ಏನೂ ಮಾಡಲಾಗದೆ, ಅದು ಸಿಂಥಟಿಕ್‌ನಿಂದ ಮಾಡಿರೋದು ಎಂದು ತಾವೇ ಹೇಳಿ ಸಗಣಿ ಸಾರಿಸಿದರು. ರಾಷ್ಟ್ರೀಯ ಪಕ್ಷಿ ನವಿಲಿನ ಪುಕ್ಕಗಳನ್ನು ಜೋಡಿಸಿದ ಇವರನ್ನು ಪ್ರಶ್ನಿಸುವ, ಪ್ರಶ್ನಿಸಿ ಶಿಕ್ಷಿಸುವ ತಾಕತ್ತು ನಮ್ಮ ಅರಣ್ಯಾಧಿಕಾರಿಗಳಿಗೆ ಖಂಡಿತಾ ಇರಲ್ಲ. ಹಿಡಿದರೆ ಖುರ್ಬಾನಿ ಮಾಡುವ ಭಯ ಅವರಿಗೆ ಇದ್ದೇ ಇರುತ್ತೆ.
ಯಾವುದೇ ಏರಿಯಾಗಳಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡಿರುವ ಮುಸ್ಲಿಂ ಬಾಂಧವರ ಬಳಿ ಯಾವುದೇ ಹಿಂದೂ ಬಾಂಧವರು ಜಗಳ ಮಾಡುವುದಾಗಲಿ, ಕಾದಾಟ ಮಾಡುವುದಾಗಲಿ ಇರುವುದಿಲ್ಲ. ಇಬ್ಬರಿದ್ದರೆ ಇಪ್ಪತ್ತು ಜನರು ಇಪ್ಪತ್ತು ಜನರು ಇನ್ನೂರು ಜನರಾಗಿ ಬರ‍್ರ್ ಬರ‍್ರ್ ಅನ್ನುತ್ತಾ ಟೂ ವ್ಹಿಲರ್ ತಿರುಗಿಸಿಕೊಂಡು ಅಲ್ಲಿಗೆ ತಿರುಗಿಸಿಕೊಳ್ಳುತ್ತಾರೆ. ಅವರ ಗುಂಪು, ಗುಂಪಿನಲ್ಲಿ ಕೆಲವರ ಕಠೋರ ಮುಖ ನೋಡಿಯೇ ವ್ಯಾಪಾರಕ್ಕೆ ಬಂದ ಗಿರಾಕಿ ಹತ್ತು ರೂಪಾಯಿ ವಸ್ತುವಿಗೆ ನೂರು ರುಪಾಯಿ ಕೊಟ್ಟು ಬ್ಯಾನ್ ಆಗಿರುವ ಪ್ಲಾಸ್ಟಿಕ್ ಕವರಿನಲ್ಲೇ ಹಾಕಿಕೊಡುವ ವಸ್ತುವನ್ನು ಹಿಡಿದು ಮನೆ ಕಡೆ ನಡೆಯುತ್ತಾನೆ.
ಈ ರೀತಿ ಕಲ್ಮಾ ಹೇಳುವ, ದರ್ಗಾಗಳಲ್ಲೇ ವಾಸಿಸುವವರನ್ನು ಮುಸ್ಲಿಂ ಸಮುದಾಯದವರು ಗೌರವಿಸುತ್ತಾರೆ. ಅವರು ಪ್ರತಿ ದಿನ ಸೂರ್ಯೋದಯಕ್ಕೆ ಮುಂಚಿತವಾಗಿ ಎರಡು ಮೂರು ಜನರಿಂದ ಭಿಕ್ಷೆ ಪಡೆದು ಅದರಲ್ಲೇ ಜೀವಿಸುತ್ತಾರೆ. ಇವರ‍್ಯಾರೂ ಹಗಲು ಹೊತ್ತಿನಲ್ಲಿ ಹಿಂದೂ ಅಂಗಡಿಗಳಲ್ಲಿ ಮತ್ತು ಮುಸ್ಲಿಂ ಅಂಗಡಿಗಳ ಮುಂದೆ ನಿಂತು ಕೈಚಾಚುವುದಿಲ್ಲ. ಹೀಗೆ ಬರುವವರೆಲ್ಲಾ ಹೊಟ್ಟೆ ಪಾಡಿಗೆ, ಬಟ್ಟೆ ಪಾಡಿಗೆ, ಗಡಂಗಿಗಾಗಿ ಕಲೆಕ್ಷನ್ ಮಾಡುವವರು.
ಬಿ.ಆರ್. ನರಸಿಂಹಮೂರ್ತಿ
ಮೊ. : 9448174932