ಮಾವು ಬೆಳೆಯನ್ನು ರೋಗದಿಂದ ಸಂರಕ್ಷಿಸುವ ವಿಧಾನ
ವಿಜಯ ದರ್ಪಣ ನ್ಯೂಸ್
ಮಾವು ಬೆಳೆಯನ್ನು ರೋಗದಿಂದ ಸಂರಕ್ಷಿಸುವ ವಿಧಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 2 : ಮಾವಿನ ಬೆಳೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಡಿಸೆಂಬರ್ ಮಾಹೆಯಿಂದ ಪ್ರಾರಂಭವಾಗಿ ಫೆಬ್ರವರಿ ಮಾಹೆಯ ಅಂತ್ಯದವರೆಗೂ ಸಹ ಹೂ ಬಿಡುವ ಪ್ರಕ್ರಿಯೆ ಕಾಣ ಬರುತ್ತದೆ. ಹೂ ಬಿಡುವ ಅವಧಿಯಲ್ಲಿ ಉಪದ್ರವ ಕೀಟಗಳಾದ ಜಿಗಿಹುಳು, ಹೂತೆನೆ/ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಓಟೆ ಕೊರಕ ಹಾಗೂ ರೋಗಗಳಾದ ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ, ಎಲೆಚಿಬ್ಬು ರೋಗಗಳು ಹೆಚ್ಚಿನ ಹಾನಿ ಉಂಟು ಮಾಡುತ್ತದೆ.
ಈ ಕೀಟ ಮತ್ತು ರೋಗಗಳು ಹೂ ಬಿಡುವ ಪೂರ್ವ ಅವಧಿಯಲ್ಲಿ ಕಡಿಮೆ ಸಂಖ್ಯೆ/ಪ್ರಮಾಣದಲ್ಲಿ ಉಪಸ್ಥಿತವಿದ್ದು, ಈ ಹಂತದಲ್ಲಿ ಇವುಗಳನ್ನು ಯೋಗ್ಯ ಸಸ್ಯ ಸಂರಕ್ಷಣೆ ಕ್ರಮಗಳಿಂದ ನಿಯಂತ್ರಿಸಿದರೆ ಮುಂಬರುವ ಹೂ ಬಿಡುವ ಹಂತದಲ್ಲಿ ಇವುಗಳ ನಿಯಂತ್ರಣ ಪರಿಣಾಮಕಾರಿಯಾಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸಕ್ತ ಮಾವು ಹೂ ಬಿಡುವ ಅವಧಿ ಈ ಕೆಳಕಂಡಂತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆಯಿಂದ ಜನವರಿ ಮಧ‍್ಯಭಾಗದವರೆಗೆ
ಡಿಸೆಂಬರ್ ಕೊನೆಯ ವಾರದಿಂದ ಫೆಬ್ರವರಿ ಮಾಹೆಯ ಅಂತ್ಯದವರೆಗೂ ರೈತರು ತಮ್ಮ ತೋಟದ ಮಾವಿನ ಮರಗಳ ಹಂತಗಳಿಗೆ ಅನುಗುಣವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು.
ಹೂ ಬಿಡುವ ನಿಕಟ ಪೂರ್ವ ಸಸ್ಯ ಸಂರಕ್ಷಣಾ ಕ್ರಮಗಳು
ಹೂ ಬಿಡುವ ನಿಕಟ ಪೂರ್ವ ಮತ್ತು ಹೂತೆನೆ ಹೊರ ಹೊಮ್ಮುವ ಹಂತ (Pre – flowering and inflorescence inititation stage) ಜಿಗಿ ಹುಳು, ಹೂತೆನೆ ಬುಡ, ಕೊರಕ, ಥ್ರೀಪ್ಸ್, ನುಸಿ ಬೂದಿ ರೋಗ, ಕಾಡಿಗೆ ರೋಗದ ಶೇಷ, ಚಿಬ್ಬು ರೋಗ, ಹಿಟ್ಟು ತಿಗಣೆ, ಓಟೆ ಕೊರಕ ರೋಗಗಳು ಬಾಧಿಸುತ್ತದೆ. ಈ ರೋಗಗಳಿಗೆ ಸಿಂಪರಣಾ ಔಷಧಿಗಳು ಥೈಯೋಮೆಥೋಕ್ಸಾಮ್ (Thaimethoxam) 25% WG – 0.25 ಗ್ರಾಂ/ಲೀ. + ನೀರಲ್ಲಿ ಕರಗುವ ಗಂಧಕ (Wettable Silphur) 80 WP-3 ಗ್ರಾಂ./ಲೀ ಅಥವಾ ಇಮಿಡಾಕ್ಲೋಪ್ರಿಡ್ (Imidacloprid) 17.8% SL-0.3 ಮಿ.ಲಿ/ಲೀ. + ನೀರಲ್ಲಿ ಕರಗುವ ಗಂಧಕ (Wettable Silphur) 80 WP-3 ಗ್ರಾಂ./ಲೀ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್
(Lambdacyhalothrin) SEC – 0.6ಮಿ.ಲಿ/ಲೀ + ನೀರಲ್ಲಿ ರಕಗುವ ಗಂಧಕ (Wettable Silphur) 80 WP-3 ಗ್ರಾಂ./ಲೀ ಅಥವಾ ಅಸಿಪೇಟ್ (Acephate) 75 SP 1.0 ಗ್ರಾಂ/ಲೀ + ನೀರಲ್ಲಿ ಕರಗುವ ಗಂಧಕ (Wettable Silphur) 80 WP-3 ಗ್ರಾಂ./ಲೀ
ಅಥವಾ ಟಾಲ್ ಫೆನ್ ಪೈರಾಡ್ (Tolfenpyrad ) 15 EC 1.0 ಮಿ.ಲಿ/ಲೀ. + ನೀರಲ್ಲಿ ಕರಗುವ ಗಂಧಕ (Wettable Silphur) 80 WP-3 ಗ್ರಾಂ./ಲೀ
ಈ ಹಂತದಲ್ಲಿ ಔಷಧೀಗಳ ಸಿಂಪರಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.
ಹೂ ತೆನೆ ಹೊರಡುವ ಹಾಗೂ ಹೂ ಅರಳುವ ಹಂತದಲ್ಲಿ (Inflorescence initiation and flower opening stage) ಜಿಗಿ ಹುಳು, ಹೂತೆನೆ ಒಣಗುವ ರೋಗ (Blossom Blight),
ಥ್ರೀಪ್ಸ್, ಬೂದಿ ರೋಗ ಬಾಧಿಸುತ್ತದೆ.
ಈ ಸಂದರ್ಭದಲ್ಲಿ ಸಿಂಪರಣಾ ಮಾಡಬೇಕಾದ ಔಷಧಿಗಳು
ಡೆಲ್ಬಾಮೆಥ್ರಿನ್ (Deltamethrin) 2.08 EC 1.ಮಿ.ಲಿ/ಲೀ + ಹೆಕ್ಸಕೋನಜೋಲ್ (Hexaconazole) 5% EC – 1.0 ಮಿ.ಲಿ/ಲೀ ಅಥವಾ ಅಜಾದಿರ್ಯಾಕ್ಟೀನ್ (Azadirachtin) 10,000 PP/1% 1.00 ಮಿ.ಲಿ./ಲೀ + ಡೈಫೆಂಕೊನಜಾಲ್ (Difenconazole ) 25 EC 0.5 ಮಿ.ಲಿ./ಲೀ ಅಥವಾ ಬೂಪ್ರೊಪೆಜಿನ್ (Buprofezin)25 EC 2.0 ಮಿ.ಲಿ/ಲೀ + (ಕಾರ್ಬನ್ ಡೈಜಿಂ 12% + ಮ್ಯಾಂಕೋಜಬ್ 63%) Carbendazim 12% + Mancozeb 63%) WP 2.0 ಗ್ರಾಂ/ಲೀ. ಅಥವಾ ಡಯಾಫೆಂತಿಯುರಾನ್ (Diafenthiuron) 75WP – 1.0 ಗ್ರಾಂ/ಲೀ.+
ಡೈಫೆಂಕೊನಜಾಲ್ (Difenconazole ) 25 EC 0.5 ಮಿ.ಲಿ./ಲೀ ಅಥವಾ ಇಂಡಾಕ್ಸಕಾರ್ಬ (Indoxacarb) 14.8 SC 1.0 ಮಿಲಿ/ಲೀ + ಟೆಬೊಕೋನಜಾಲ್ (Tebuconazole) 25 EC 0.5 ಮಿ.ಲಿ./ಲೀ.
ಅಥವಾ ಬೂಪ್ರೊಪೆಜಿನ್ (Buprofezin)25 EC 2.0 ಮಿ.ಲಿ/ಲೀ + ಟೆಬೊಕೋನಜಾಲ್+ಟ್ರೈಪ್ಲಾಕ್ಸಿಸ್ಟ್ರೋಬಿನ್)
(Tebuconazole + Trifloxystrobin) 0.5 ಮಿ.ಲಿ/ಲೀ. ಈ ಔಷಧಿ ಸಿಂಪರಣೆಯಿಂದ ಹೂ ತೆನೆ ಒಣಗುವ ರೋಗ ಬೂದಿ ರೋಗ ಮತ್ತು ಎಲ್ಲಾ ರಸ ಹೀರುವ ಕೀಟಗಳು ನಿಯಂತ್ರಿಸಲ್ಪಡುತ್ತವೆ.
ಈ ಅವಧಿಯಲ್ಲಿ ಮುಖ್ಯವಾಗಿ ಭಾದಿಸುವ ಕೀಟಗಳಲ್ಲಿ ಜಿಗಿಹುಳು, ಥ್ರೀಪ್ಸ್, ಮೈಟ್ಸ್, ಹೂತೆನೆ ಕ್ಯಾಟರ್ ಪಿಲ್ಲರ್ ಇತ್ಯಾದಿಗಳು ಮತ್ತು ರೋಗಗಳಲ್ಲಿ ಪ್ರಮುಖವಾದವುಗಳು ಹೂತೆನೆ ಒಣಗುವ / ಕಪ್ಪಾಗುವ ರೋಗ (Blossom Blight) ಎಲೆ ಚಿಬ್ಬು ರೋಗ, ಬೂದಿ ರೋಗ, ಕಾಡಿಗೆ ರೋಗ ಇತ್ಯಾದಿಗಳು. ಈ ಹಂತದಲ್ಲಿ ಹೂತೆನೆ ಮತ್ತು ಹೂಗಳನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಂಡರೆ ಕಾಯಿ ಕಚ್ಚುವ ಪ್ರಮಾಣ ಮತ್ತು ನಂತರದ ಇಳುವರಿ ಹೆಚ್ಚಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಶಿಫಾರಸ್ಸು ಮಾಡಿದ ಸಿಂಪರಣಾ ಕ್ರಮಗಳನ್ನು ಅನುಸರಿಸುವುದು.
ಕಾಯಿ ಕಚ್ಚುವ ಹಂತ ಮತ್ತು ನಂತರದ ಹಂತಗಳು (Fruit Set stage) ಹೂ ಸಂಪೂರ್ಣ ಅರಳಿದ ಮತ್ತು ಪರಾಗ ಸ್ಪರ್ಷ ಹಂತ, ಕಾಯಿ ಕಚ್ಚುವ ಹಂತದಲ್ಲಿ (Pollination and fruit set stage) ಜಿಗಿ ಹುಳು, ಹೂ ಗೂಡು ಕಟ್ಟುವ ಹುಳು, ಹೂ ಒಣಗುವ ರೋಗ, ಚಿಬ್ಬು ರೋಗ ಬೂದಿ ರೋಗ, ಕಾಡಿಗೆ ರೋಗ (ಜಿಗಿ ಹುಳು ಬಾಧಿಸುತ್ತದೆ.
ಈ ಸಂದರ್ಭದಲ್ಲಿ ಸಿಂಪಡಿಸಬೇಕಾದ ಔಷಧಿಗಳು
ಲಾಂಬ್ಡಾಸೈಹ್ಯಾಲೋಥ್ರಿನ್ (Lambdacyhalothrin) 5EC – 0.6ಮಿ.ಲಿ/ ಲೀ + (ಕಾರ್ಬನ್ ಡೈಜಿಂ 12% + ಮ್ಯಾಂಕೋಜಬ್ 63%) (Carbendazim 12% + Mancozeb 63% ) WP 2.0 ಗ್ರಾಂ./ಲೀ ಡೆಲ್ಬಾಮೆಥ್ರಿನ್ (Deltamethrin) 2.08 EC 1.ಮಿ.ಲಿ/ಲೀ + ಕಾರ್ಬನ್ ಡೈಜಿಯಂ 12 (ಟೆಬೊಕೋನಜಾಲ್ + ಟ್ರೈಪ್ಲಾಕ್ಸಿಸ್ಟ್ರೋಬಿನ್) (Tebuconazole + Trifloxystrobin) 0.5 ಮಿ.ಲಿ./ಲೀ. ಅಥವಾ ಇಂಡಾಕ್ಸಕಾರ್ಬ (Indoxacarb) 14.8 SC 1.0 ಮಿ.ಲಿ./ಲೀ + ಡೈಥೇನ್ ಎಂ45 (Dithane M45) 2.5 ಗ್ರಾಂ/ಲೀ. ಅಥವಾ ಟಾಲ್ ಫೆನ್ ಪೈರಾಡ್ (Tolfenpyrad) 15 EC 1.0 ಮಿ.ಲಿ./ಲೀ. + (ಕಾರ್ಬನ್ ಡೈಜಿಂ 12% + ಮ್ಯಾಂಕೋಜಬ್ 63%) (Carbendazim 12% + Mancozeb 63% ) WP 2.0 ಗ್ರಾಂ./ಲೀ. ಸಿಂಪರಣೆ ಮಾಡಬೇಕು.
ಸಾಮಾನ್ಯವಾಗಿ ಹೂ ಬಿಡುವ ಹಂತದಲ್ಲಿ ಯಾವುದೇ ಕೀಟನಾಶಕ ಉಪಯೋಗಿಸಬಾರದು. ಕಾರಣ ಪರಾಗ ಸ್ಪರ್ಷ ಮಾಡುವ ಕೀಟಗಳಾದ ಜೇನು, ಇತರೆ ಉಪಯುಕ್ತ ಕೀಟಗಳು ನಾಶವಾಗುವ ಸಾಧ್ಯತೆ ಇರುತ್ತದೆ. ಅದಾಗ್ಯೂ ಪರಿಸ್ಥಿತಿಯ ಅನಿವಾರ್ಯತೆಯನ್ನು ಗಮನಿಸಿ ಶಿಫಾರಸ್ಸು ಮಾಡಿದ ಸಿಂಪರಣಾ ಕ್ರಮಗಳನ್ನು ಅನುಸರಿಸಬಹುದಾಗಿದೆ.
ಮೇಲಿನ ಅನುಸರಣಾ ಕ್ರಮಗಳನ್ನು ಪಾಲಿಸುವುದರಿಂದ ಈಗಾಗಲೇ ತಿಳಿಸಿರುವ ಕೀಟ /ರೋಗಗಳಲ್ಲದೇ ಹೂ ಬಿಡುವ ಮತ್ತು ಕಾಯಿ ಕಚ್ಚುವ ಅವಧಿಯಲ್ಲಿ ಕಾಣಬರುವ ಓಟೆ ಕೊರಕ, ಊಜಿ ಹುಳು, ಕಾಡಿಗೆ ರೋಗ, ಚಿಬ್ಬು ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಅಲ್ಲದೇ ಕೊಯ್ಲಿನ ನಂತರ ಕಾಣುವ ರೋಗಗಳನ್ನು ಸಹ ಹತೋಟಿಗೆ ತಂದು ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಮೇಲ್ಕಂಡ ಮೂರು ಹಂತದ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ ಶಾಂಪೂ ಅಥವಾ ಅಂಟನ್ನು ಬೆರೆಸಿ ಸಿಂಪರಿಸಬೇಕು. ಇದರಿಂದ ಸಿಂಪಡಿಸಿದ ದ್ರಾವಣ ಎಲೆ/ಹೂ ಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ.
ಸೂಚನೆ- ಒಂದೇ ರೀತಿಯ ಕೀಟ / ರೋಗ ನಾಶಕಗಳನ್ನು ಪದೇ ಪದೇ ಪುನರಾವರ್ತಿಸಿದಲ್ಲಿ ಕೀಟ/ರೋಗಕಾರಕ ಸೂಕ್ಷ್ಮ ಜೀವಿಗಳು ಕೀಟ/ರೋಗ ನಾಶಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಆದುದರಿಂದ ಅನುಕ್ರಮವಾಗಿ ಕೀಟ/ರೋಗ ನಾಶಕಗಳ ಬದಲಾವಣೆ ಮಾಡುವುದು ಅವಶ್ಯಕ.