ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆಗೆ ಆದೇಶ *.
ವಿಜಯ ದರ್ಪಣ ನ್ಯೂಸ್
*ಮಡಿಕೇರಿ ನಗರದಲ್ಲಿ ಒಟ್ಟು 282. 50 ಎಕರೆ ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆ ಆದೇಶ. ತಡವಾಗಿ ಸಂಪೂರ್ಣ ಸರ್ವೆಗೆ ಮುಂದಾದ ಅರಣ್ಯ ಇಲಾಖೆ*.
ಮಡಿಕೇರಿ ನಗರದ, ಚೈನ್ ಗೇಟ್, ಅರಣ್ಯ ಭವನ ಸುತ್ತಮುತ್ತ, ಮೆನ್ಸ್ ಕಾಂಪೌಂಡಿನ ಮೇಲ್ಭಾಗ, ಕನ್ನಂಡಬಣೆ ಗಡಿಭಾಗ ಸೋಮವಾರಪೇಟೆ ರಸ್ತೆ ಚೌಕ, ಕರಣಂಗೇರಿ ವ್ಯಾಪ್ತಿ ಸೇರಿದಂತೆ ಒಟ್ಟು 282. 50 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ಹಾಗೂ ಕಟ್ಟಡವನ್ನು ನಿರ್ಮಿಸಿಕೊಂಡಿರುವ ಬಗೆ 2022 ರಲ್ಲಿ ಸರ್ವೋಚ್ಚಯ ನ್ಯಾಯಾಲಯದಲ್ಲಿ ಕಾವೇರಿ ಸೇನೆಯ ರವಿಚಂಗಪ್ಪ ನವರು ಸಲ್ಲಿಸಿದ ಮನವಿ ಅನ್ವಯ ಅರಣ್ಯ ಇಲಾಖೆ ಸಂಪೂರ್ಣ ಪರಿಶೀಲಿಸಿ ವರದಿ ನೀಡುವಂತೆ ಆದೇಶ ಹೊರಡಿಲಾಗಿತ್ತು.
ಅದರ ಅನ್ವಯ ಗುರುವಾರ ಸರ್ವೆ ಇಲಾಖೆಯ ಮೂಲಕ ಹದ್ದುಬಸ್ತು ಗುರುತಿಸುವ ಕಾರ್ಯ ನಡೆದಿದೆ ಶುಕ್ರವಾರ ಕೂಡ ಮುಂದುವರಿಯಲಿದೆ. ಸರ್ವೆ ಸಂದರ್ಭ ಎ. ಡಿ. ಎಲ್ ಆರ್ ಆರ್, ಅರಣ್ಯ ಇಲಾಖೆಯ ಡಿಎಫ್ಓ ಎ ಸಿ ಎಫ್ ಒ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಹದ್ದುಬಸ್ತು ಗುರುತಿಸಿದ ನಂತರ ಸಂಪೂರ್ಣ ಸರ್ವೆ ನಡೆಸಿ ಅರಣ್ಯ ಭೂಮಿಯನ್ನು ಗುರುತಿಸುವ ಕೆಲಸ ನಡೆಯಲಿದ್ದು 1974 ರಲ್ಲಿ ಒಟ್ಟು 90 ಮನೆಗಳು ನಿರ್ಮಿಸಿ ಒತ್ತುವರಿಯಾಗಿದ್ದು ಇದೀಗ 300ಕ್ಕೂ ಹೆಚ್ಚು ಮನೆಗಳು ಈ ಭಾಗದಲ್ಲಿ ನಿರ್ಮಾಣಗೊಂಡು ಅರಣ್ಯ ಭೂಮಿಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿ ಕಾಡು ನಾಶವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪರಿಸರವಾದಿ ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪನವರು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರವಿ ಚoಗಪ್ಪ ಅರಣ್ಯ ಭೂಮಿಯನ್ನು ಕಾಪಾಡುವುದು ಇಲಾಖೆ ಜವಾಬ್ದಾರಿ, ನಮ್ಮ ಜನಪ್ರತಿನಿಧಿಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಪರಿಸರದ ನಾಶವನ್ನು ಮಾಡುತ್ತಿದ್ದಾರೆ.
ಅರಣ್ಯ ಪ್ರದೇಶವನ್ನು ಮನುಷ್ಯ ಕಬಳಿಸುವುದರಿಂದ ಪ್ರಾಣಿಗಳೆಲ್ಲ ದಿಕ್ಕಪಾಲಾಗಿ ನಾಡಿಗೆ ಬರುವಂತಾಗಿದೆ. ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ಅಲ್ಲ ಬದಲಾಗಿ, ಮಾನವ ವನ್ಯಪ್ರಾಣಿಯ ಪ್ರದೇಶವನ್ನು ಕಬಳಿಸಿ ಸಂಘರ್ಷಕ್ಕೆ ಎಡೆ ಉಂಟು ಮಾಡುತ್ತಿದ್ದಾರೆ.
ಮಡಿಕೇರಿಯಲ್ಲಿ ಪ್ರತಿಷ್ಠಿತರು, ಸಮಾಜ ಸೇವಕರು, ರಾಜಕಾರಣಿಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾದರಿಂದ ಸಂಪೂರ್ಣ ಸರ್ವೆ ನಡೆಸಿ ಮಾಹಿತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.
ಈ ಆದೇಶ ಬಂದ ನಂತರ ಅರಣ್ಯ ಇಲಾಖೆ ಅರಣ್ಯ ಭವನದ ಹಿಂಭಾಗದಲ್ಲಿರುವ ಅರಣ್ಯವನ್ನು ಹೆಚ್ಚಾಗಿ ನಮೂದಿಸಿ ಉಳಿದ ಭಾಗದಲ್ಲಿ ಶೇಕಡಾ 60ರಷ್ಟು ಒತ್ತುವರಿ ಆದದ್ದನ್ನು ಸರಿಸಮ ಮಾಡಲು ಹೊರಟಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಆದರೆಯಾವುದೇ ರೀತಿಯ ಅಕ್ರಮ ನಡೆಯಲು ನಾವು ಬಿಡುವುದಿಲ್ಲ ಎಂದು ರವಿಚಂಗಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಒತ್ತುವರಿಯಲ್ಲಿ ಪ್ರತಿಷ್ಠಿತ ಸಮಾಜದ ಕಟ್ಟಡಗಳು ಕೂಡ ಸೇರಿಕೊಂಡಿವೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಮಡಿಕೇರಿಯ ಪ್ರತಿಷ್ಠಿತ ಕೆಲವು ಭಾಗಗಳು ಸರ್ವೋಚ್ಚ ನ್ಯಾಯಾಲಯ ವರದಿ ತರಿಸಿಕೊಂಡು ಮುಂದೆ ಸಂಪೂರ್ಣವಾಗಿ ತೆರವುಗೊಳಿಸುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ಹೀಗಾದರೆ ಮಡಿಕೇರಿಯ ಶೇಕಡ 30ರಷ್ಟು ಭಾಗ ಕಾಡು ಸೇರಲಿದೆ.