ಶಿಕ್ಷಕರೋಬ್ಬರಲ್ಲಿ ತಂದೆ ತಾಯಿ ಇಬ್ಬರನ್ನೂ ಕಾಣಬಹುದು: ನಾಗೇಶ್.

ವಿಜಯ ದರ್ಪಣ ನ್ಯೂಸ್ 

ದೇವನಹಳ್ಳಿ ನವೆಂಬರ್ 18: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು. ತಂದೆ  ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯವೆಂದು ಸೋಲೂರು ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ನಾಗೇಶ್ ಅಭಿಪ್ರಾಯಿಸಿದರು.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಸೋಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಶನಿವಾರ ಹಮ್ಮಿಕೊಂಡಿದ್ದು , ಸಮಾರಂಭವನ್ನು ಉದ್ದೇಶಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥ ವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು. ನನ್ನ ಜೀವನದಲ್ಲಿ ಗುರುಗಳ, ಆದರ್ಶ, ಮಾರ್ಗದರ್ಶನ ಏಳಿಗೆಯನ್ನು ಬಯಸಿದ್ದೇನೆ. ವರ್ಗಾವಣೆಗೊಂಡ ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸಿ ನಮ್ಮೆಲ್ಲ ಸ್ನೇಹಿತರ ಸಹಕಾರದಿಂದ ಇಂತಹದೊಂದು ಕಾರ್ಯಕ್ರಮ ನಡೆಯಲು ಸಹಕಾರಿ ಯಾಗಿದೆ. ನಾನಿರುವಷ್ಟು ಕಾಲ ಗುರುಗಳಿಗೆ ಚಿರಋಣಿ ಯಾಗಿರಲಿ ಬಯಸುತ್ತೇನೆ ಎಂದರು.

ಶಿಕ್ಷಕ ಗೋವಿಂದರಾಜು ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಟವಾದದ್ದು, 1997 ರಲ್ಲಿ ಸೋಲೂರು ಶಾಲೆ ಬಂದಿದ್ದು, ಎಲ್ಲವನ್ನು ಕಲಿಸಿದೆ, ಬೆಳೆಸಿದೆ,ಇಲ್ಲಿನ ಎಲ್ಲ ಮಕ್ಕಳು ನಮ್ಮ ಮಕ್ಕಳು ಎಂದು ಭಾವಿಸಿ ಅವರ ಶಿಕ್ಷಣ ಪ್ರಗತಿಗೆ ಹೆಚ್ಚಿನ ಕಾಳಜಿವಹಿಸಿ ಶಿಕ್ಷಣ ಸಂಸ್ಥೆಗೆ ಮತ್ತು ಗ್ರಾಮಕ್ಕೆ ನನ್ನ ಕೈಲಾದ ಸೇವೆ ಸಲ್ಲಿಸಿರುವೆ ಎಂದು ತಿಳಿಸಿದರು.

ಶಿಕ್ಷಕಿ ವಸಂತಕುಮಾರಿ ಮಾತನಾಡಿ, ದೇವನಹಳ್ಳಿಯ ದಿವಂಗತ ಗಾಳಪ್ಪ ನವರು ಇದೇ ಶಾಲೆ ಶಿಕ್ಷಕರಾಗಿದ್ದರು ನನ್ನ ಅತ್ಯತ್ತಮ ಮಾರ್ಗದರ್ಶಕರು, ಎಂಚ್ಚಿನಲ್ಲಿದ ಶಾಲೆ ಇಂದು ಹಲವಾರು ಧಾನಿಗಳ ಸಹಾಯದಿಂದ ಆರ್ ಸಿ ಸಿ ಕಟ್ಟಡದ ಮಾದರಿಯಲ್ಲಿ ಶಾಲೆ ಹಂತ-ಹಂತವಾಗಿ ನಿರ್ಮಾಣವಾಗಿದೆ.ಇಲ್ಲಿನ ಪೋಷಕರು, ಸಮಾಜ ಸೇವಕರಿಗೆ ಚಿರರುಣಿ, ಹಿಂದೆ 150 ಮಕ್ಕಳ ಸಂಖ್ಯೆ ಇತ್ತು. ಶಾಲೆಯಲ್ಲಿ ವರ್ಗವಣೆ ಆದ ನಮ್ಮೆಲ್ಲ ಶಿಕ್ಷಕರನ್ನು ಕರೆದು ಅಭಿನಂದಿಸಿದ್ದು ಹೆಮ್ಮೆಯವಿಚಾರ, ಸತತ 20ವರ್ಷ ಪೂರೈಕೆಸಿದ ಸೇವೆ ಸಾರ್ಥಕವೆಂದು ಭಾವಿಸುತ್ತೇನೆ. ಕತ್ತಲಿನಿಂದ ಬೆಳಕಿಗೆ ಸಾಗಲು ಶಿಕ್ಷಣವೆಂಬ ದಿವ್ಯ ಜ್ಯೋತಿ ಪ್ರತಿಯೊಬ್ಬರಲ್ಲು ಅತ್ಯವಶ್ಯಕ ವೆಂದು ಹಳೇ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸೋಲೂರು ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಆನಂದ ಮೂರ್ತಿ, ಶಿಕ್ಷಕರಾದ ಗೋವಿಂದ್, ಮುನಿಯಮ್ಮ, ವಸಂತಕುಮಾರಿ, ಚನ್ನರೆಡ್ಡಿ, ಕೃಷ್ಣಪ್ಪ, ಹಿರಿಯ ವಿದ್ಯಾರ್ಥಿ ಆರ್. ನಾಗೇಶ್, ಹರ್ಷಿತ, ವಿಜಯಲಕ್ಷ್ಮೀ, ಲಲು ಪ್ರಸಾದ್, ಮದು, ನಿಕೀಲ್, ಮಧನ್, ವಿನಯ್, ಗ್ರಾಮಸ್ಥರಾದ ಸೊಣ್ಣೇಗೌಡ, ಶಿವಕುಮಾರ್, ಮನೋಜ್ ಕುಮಾರ್ ಇದ್ದರು.