ನಿವೃತ್ತಿಯಾದ ಇಂಜಿನಿಯರ್ ಪ್ರಭಾಕರ್ ಬಾಬುಗೆ ಬೀಳ್ಕೊಡುಗೆ
ವಿಜಯ ದರ್ಪಣ ನ್ಯೂಸ್
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್:01: ಸರಕಾರಿ ಕೆಲಸ ಸಿಕ್ಕಿದ್ದು ೨೨ನೇ ವಯಸ್ಸಿನಲ್ಲಿ ಆದರೂ ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ್ದವರು ೬೦ ವರ್ಷಗಳ ಕಾಲ ನಾನಾ ಹುದ್ದೆಗಳನ್ನು ನಿರ್ವಹಿಸಿದ ಕೀರ್ತಿ ಕಿರಿಯ ಇಂಜಿನಿಯರ್ ಪ್ರಭಾಕರ್ ಬಾಬು ನಿವೃತ್ತಿ ಹೊಂದಿದ್ದಾರೆ ಎಂದು ದೇವನಹಳ್ಳಿ ಸಹಾಯಕ ಕಾರ್ಯಪಾಲಕ ಇಂಜೀನಿಯರ್ ರವೀಂದ್ರ ಸಿಂಗ್ ಅಭಿಪ್ರಾಯಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಉಪ ವಿಭಾಗ ದೇವನಹಳ್ಳಿ ಕಚೇರಿಯಲ್ಲಿ ಕಿರಿಯ ಇಂಜಿನಿಯರ್ ಪ್ರಭಾಕರ್ ಬಾಬು ನಿವೃತ್ತಿ, ಎಇ.ಸುನೀಲ್ ಕುಮಾರ್ ಹಾಗೂ awe ಜಗದೀಶ್ ವರ್ಗವಣೆ ಅಂಗವಾಗಿ ಬೀಳ್ಕೊಡಿ ಆಯೋಜಿಸಿದ್ದು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಲೋಕೋ ಪಯೋಗಿ ಇಲಾಖೆ ಕಚೇರಿಯಲ್ಲಿ ಉತ್ತಮ ಒಡನಾಟ, ಯುವ ಅದಿಕಾರಿಗಳಿಗೆ ಮಾರ್ಗದರ್ಶಕರು, ಸೇವೆಯಲ್ಲಿ ಶಿಸ್ತು, ಸಮಯ ಪಾಲನೆಗೆ ಸಾಕ್ಷಿಯಾಗಿದ್ದರೆ ಅವರು ನಿವೃತ್ತಿ ಜೀವನ ಸುಖ, ಶಾಂತಿ, ನೆಮ್ಮದಿ ಕರುಣಿಸ ಲೆಂದು ಶುಭ ಹಾರಿಸಿದರು.
ನಾನು ನಿವೃತ್ತಿಗೆ ಪ್ರವೇಶಿಸುತ್ತಿದ್ದಂತೆ ಮುಂದೆ ಇರುವ ಹೊಸ ಅವಕಾಶಗಳಿಗಾಗಿ ನಾನು ಉತ್ಸುಕನಾಗಿದ್ದೇನೆ. ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು, ನನ್ನ ಹವ್ಯಾಸ ಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಮತ್ತು ಹೊಸ ರೀತಿಯಲ್ಲಿ ಕಲಿಯಲು ಮತ್ತು ಬೆಳೆಯಲು ನಾನು ಯೋಜಿಸು ತ್ತೇನೆಂದು ದೇವನಹಳ್ಳಿ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಯಲ್ಲಿ ಕಿರಿಯ ಇಂಜಿನಿಯರ್ ಪ್ರಭಾಕರ್ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ದೇವನಹಳ್ಳಿ ಸಹಾಯಕ ಕಾರ್ಯಪಾಲಕ ಇಂಜೀನಿಯರ್ ರವೀಂದ್ರ ಸಿಂಗ್, ಗುತ್ತಿಗೆದಾರರಾದ ಆರ್.ಪಿ.ಗೋಪಾಲ್ ಗೌಡ, ವಿಜಯಪುರ ಅಜೇಯ್, ಮುರಳಿ, ವೆಂಕಟೇಶ್, ಗೋಪಾಲ್,ದೊಡ್ಡಬಳ್ಳಾಪುರ ಮುರಳಿ, ನಿಕಿಲ್, ಜಗದೀಶ್, ಬೆಂಡಗಾನಹಳ್ಳಿ ದೇವರಾಜ್, ಲೋಕೋಪಯೋಗಿ ಇಲಾಖೆ ಕಚೇರಿ ಸಿಬ್ಬಂದಿಗಳಾದ ಮುರಳಿ, ಮನುತೇಜ, ಮದನ್ ಲಾಲ್, ಅನೀಲ್ ಕುಮಾರ್, ಬೀರಪ್ಪ ಪೂಜಾರಿ ಹಾಜರಿದ್ದರು.