ಪಿ.ಎಂ ಮಣ್ಣೂರ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

ಪಿ.ಎಂ ಮಣ್ಣೂರ ನಿಧನಕ್ಕೆ
ಕೆಯುಡಬ್ಲ್ಯೂಜೆ ಸಂತಾಪ

ಬೆಂಗಳೂರು:ಹಿರಿಯ ಪತ್ರಕರ್ತ, ಸತ್ಯಕಾಮ ಪತ್ರಿಕೆ ಸಂಪಾದಕ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಬುರ್ಗಿಯ ಪಿ.ಎಂ.ಮಣ್ಣೂರ (78)ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸುತ್ತದೆ.

ಆರು ದಶಕಗಳ ಕಾಲ ಪತ್ರಕರ್ತರಾಗಿದ್ದ ಮಣ್ಣೂರ ಅವರು ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ.

ಪತ್ರಕರ್ತರಾಗಿ 371(ಜೆ) ಹೋರಾಟದಲ್ಲಿ ತೊಡಗಿಸಿಕೊಂಡಿದ್ದನ್ನು KUWJ ಸ್ಮರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

 

&&&&&&&&&&&&&&&&&&&&:

ಪಿಂಚಣಿದಾರರು ಅಕ್ಟೋಬರ್ 20 ರೊಳಗೆ ಇ.ಕೆ.ವೈ.ಸಿ ಮಾಡಿಸುವುದು ಕಡ್ಡಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 12(ಕರ್ನಾಟಕ ವಾರ್ತೆ):- ದೊಡ್ಡಬಳ್ಳಾಪುರ ತಾಲ್ಲೂಕು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ 2215 ಫಲಾನುಭವಿಗಳು ಕಡ್ಡಾಯವಾಗಿ ಇ.ಕೆ.ವೈ.ಸಿ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡುವಂತೆ ತಹಶೀಲ್ದಾರ್ ಗ್ರೇಡ್ -2 ಪ್ರಕಾಶ್ ಹೆಚ್.ಎಸ್ ಅವರು ತಿಳಿಸಿದ್ದಾರೆ

ದೊಡ್ಡಬಳ್ಳಾಪುರ ತಾಲ್ಲೂಕಿನ  ವೃಧ್ಯಫ್ಯವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾವೇತನ, ಸಂಧ್ಯಾಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಯಲ್ಲಿ ಮಾಸಾಶನ ಮಂಜೂರಾಗಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್‌ ಖಾತೆಗೆ ಮಾಶಾಸನ ಜಮೆ ಮಾಡಲಾಗುವುದು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2215 ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ತಮಗೆ ಮಾಸಾಶನ ಪಾವತಿ ಮಾಡುವ ಬ್ಯಾಂಕ್ ಖಾತೆಗೆ ಲಿಂಕ್‌ ಮಾಡಿರುವುದಿಲ್ಲ.
ಈ ಫಲಾನುಭವಿಗಳು ಇ-ಕೆವೈಸಿ /ಎನ್.ಪಿ.ಸಿ.ಐ ಮ್ಯಾಪಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸ್ಥಳಿಯವಾಗಿ ರೆವೆನ್ಯೂ ಇನ್ಪೆಕ್ಟರ್ ಅಥವಾ ಗ್ರಾಮ ಆಡಳಿತ ಅಧಿಕಾರಿ ರವರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡು (ಫಲಾನುಭವಿ ಪಟ್ಟಿ ರಾಜಸ್ವ ನಿರೀಕ್ಷಕರ ಬಳಿ ಪರಿಶೀಲಿಸತಕ್ಕದ್ದು) ಇ-ಕೆವೈಸಿ /ಎನ್.ಪಿ.ಸಿ.ಐ ಮಾಡಿಸಿಕೊಳ್ಳುವುದು. 2023 ರ ಅಕ್ಟೋಬರ್ 20 ರೊಳಗೆ ಇ-ಕೆವೈಸಿ/ಎನ್.ಪಿ.ಸಿ.ಐ ಮಾಡಿಸದೇ ಇದ್ದಲ್ಲಿ ಮಾಶಾಸನವು ಸ್ಥಗಿತವಾಗುವುದರಿಂದ ಈ ವಿಷಯದಲ್ಲಿ ತಾಲೂಕು ಆಡಳಿತ ಯಾವ ರೀತಿಯಲ್ಲಿ ಹೊಣೆಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.