ಶಿಕ್ಷಣ ತಜ್ಞೆ ಶ್ರೀಮತಿ ದೇವಿಕಾ ನಾಗರಾಜು ಅವರಿಗೆ ಒಲಿದ ‘ದಿಟ್ಟ ಮಹಿಳೆ’ ಪ್ರಶಸ್ತಿ.

ವಿಜಯ ದರ್ಪಣ ನ್ಯೂಸ್

ಪ್ರೈಡ್ ಆಫ್ ಕರ್ನಾಟಕವು ಶ್ರೀಮತಿ ದೇವಿಕಾ ನಾಗರಾಜು, ಶಿಕ್ಷಣೆ ತಜ್ಞೆ, ವಿಎಲ್‌ಎಸ್ ಇಂಟರ್‌ನ್ಯಾಶನಲ್ ಸ್ಕೂಲ್, ಬೆಂಗಳೂರು ಅವರಿಗೆ 2023ನೇ ವರ್ಷದ ವಿಶೇಷ ‘ದಿಟ್ಟ ಮಹಿಳೆ’ ಎಂದು ಗೌರವಿಸಿದೆ.

ಬೆಂಗಳೂರು, ಅಕ್ಟೋಬರ್ 3, 2023: ಪ್ರೈಡ್ ಆಫ್ ಕರ್ನಾಟಕವು (Pride of Karnataka) ಬೆಂಗಳೂರಿನ ಎನಿಹೆಲ್ಪ್ ಗ್ರೂಪ್‌ನ ಉಪಕ್ರಮವಾಗಿದೆ. ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗಳು ಕರ್ನಾಟಕದ ಹೆಮ್ಮೆಯ ದ್ಯೋತಕವಾಗಿವೆ ಮತ್ತು ಹಿಂದಿನ ವರ್ಷಗಳಲ್ಲಿ ಸ್ವಯಂ ಪ್ರವರ್ತಕರಾಗಿ, ಸಮಾಜದ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರು, ನಾಯಕರು, ಬ್ರಾಂಡ್‌ಗಳು ಹಾಗೂ ಕಂಪನಿಗಳಿಗೆ ಸಂಭ್ರಮದ ವಿಚಾರವಾಗಿದೆ.

ಕರ್ನಾಟಕದ ಎಲ್ಲ ಭಾಗಗಳಿಂದ ಆಗಮಿಸಿದ್ದ ನಿಜವಾದ ತಾರೆಗಳು ಬೆಂಗಳೂರಿನ ಆರ್‌ಜಿ ರಾಯಲ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 30, 2023ರಂದು ಸೇರಿ ಪ್ರೈಡ್ ಆಫ್ ಕರ್ನಾಟಕವನ್ನು ಸಂಭ್ರಮಿಸಿದರು.

ಪ್ರೈಡ್ ಆಫ್ ಕರ್ನಾಟಕ 2023 ದಿಟ್ಟ ಮಹಿಳೆ ಪ್ರಶಸ್ತಿಗಳನ್ನು 2023ನೇ ಸಾಲಿಗಾಗಿ `ಪ್ರೈಡ್ ಆಫ್ ಕರ್ನಾಟಕ -2023’ ಅನ್ನು ಶ್ರೀ ಮೊಹಮದ್ ಝಾಕೀರ್ ಹುಸೇನ್, ಚೇರ್ಮನ್, ಎನಿಹೆಲ್ಪ್ ಗ್ರೂಪ್ಸ್ ಮತ್ತು ಶ್ರೀಮತಿ ಪೂಜಾ, ವ್ಯವಸ್ಥಾಪಕ ನಿರ್ದೇಶಕರು, ಎನಿಹೆಲ್ಪ್ ಗ್ರೂಪ್ಸ್ ಅವರು ಮುಖ್ಯ ಅತಿಥಿಗಳಾದ ಶ್ರೀ ವಿಜಯಾನಂದ ಕಾಶಪ್ಪನವರ ಶಿವಶಂಕರಪ್ಪ ಶಾಸಕರು, ಶ್ರೀ ಸುಗುತ್ ಹೇವಾಪತ್‌ಬಾನ, ಅಧ್ಯಕ್ಷರು, ಪ್ರವಾಸೋದ್ಯಮ ಮಂಡಳಿ, ಶ್ರೀಲಂಕಾ, ಶ್ರೀ ಸುನೀಲ್‌ಕುಮಾರ್ ದೇಸಾಯಿ, ಕನ್ನಡ ಚಲನಚಿತ್ರ ನಿರ್ದೇಶಕರು, ಶ್ರೀ ಯೋಗರಾಜ ಭಟ್, ಕನ್ನಡ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನಟಿ ಸಿಂಧು ಲೋಕನಾಥ್ ಅವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಿದರು.

ಪ್ರೈಡ್ ಆಫ್ ಕರ್ನಾಟಕದಿಂದ 2023ನೇ ಸಾಲಿಗಾಗಿ `ವರ್ಷದ ದಿಟ್ಟ ಮಹಿಳೆ’ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀಮತಿ ದೇವಿಕಾ ನಾಗರಾಜು, ಶಿಕ್ಷಣೆ ತಜ್ಞೆ, ವಿಎಲ್‌ಎಸ್ ಇಂಟರ್‌ನ್ಯಾಶನಲ್ ಸ್ಕೂಲ್, ಬೆಂಗಳೂರು ಅವರು ಹೇಳಿದರು `ಶಿಕ್ಷಣ ತಜ್ಞೆಯಾಗಿ ಈ ಪ್ರತಿಷ್ಠಿತ ಪ್ರಶಸ್ತಿಯು ನನಗೆ ಕಠಿಣ ಸವಾಲುಗಳನ್ನು ಎದುರಿಸಲು ಪ್ರೇರಣೆ ನೀಡಿದೆ ಮತ್ತು ನನ್ನ ಪ್ರಯಾಣದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಫೂರ್ತಿ ನೀಡಿದೆ ಹಾಗೂ ಯುವನಾಯಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವರನ್ನು ಮುನ್ನಡೆಸಲು ವಿಶ್ವವಿದ್ಯಾಲಯ ಸ್ಥಾಪಿಸುವ ನನ್ನ ತಂದೆಯವರ ಕನಸನ್ನು ಈಡೇರಿಸಲು ಶಕ್ತಿ ತುಂಬಿದೆ. ಒಬ್ಬ ಮಹಿಳೆಯಾಗಿ ಈ ಪ್ರಶಸ್ತಿಯನ್ನು ದುರ್ಬಲರು ಎಂದು ತಮ್ಮಷ್ಟಕ್ಕೆ ತಾವೇ ನೊಂದುಕೊಳ್ಳುವ ಮಹಿಳೆಯರಿಗೆ ಸಾಧಿಸಲು ಯಾವುದೂ ಕಷ್ಟವಲ್ಲ ಎಂದು ಧೈರ್ಯ ತುಂಬಲು ಅರ್ಪಿಸುತ್ತೇನೆ. ದೂರದೃಷ್ಟಿಯನ್ನು ಹೊಂದುವುದು ಮತ್ತು ಆತ್ಮವಿಶ್ವಾಸದಿಂದ ಅನುಷ್ಠಾನಗೊಳಿಸುವುದು, ಸಕಾರಾತ್ಮಕ ಧೋರಣೆಗಳು ನನ್ನ ಬಲ ಮತ್ತು ಈ ಗುಣಗಳೇ ಇಂದು ನನಗೆ ಈ ಗೌರವ ಸಿಗಲು ಕಾರಣವಾಗಿವೆ ಎಂಬುದಾಗಿ ನಾನು ಭಾವಿಸುತ್ತೇನೆ’.