ಮನೋ ನಿಗ್ರಹ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ
ವಿಜಯ ದರ್ಪಣ ನ್ಯೂಸ್
ರಾಮನಗರ ಅಕ್ಟೋಬರ್ 02
ಮನೋ ನಿಗ್ರಹ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ
ದಿನಾಂಕ 2/10/23 ರಂದು ರಾಮನಗರ ಜಿಲ್ಲಾ ಕಾರಾಗೃಹ ನಿವಾಸಿಗಳಿಗೆ ಹಸನ್ಮುಖಿ ಸೇವಾ ಟ್ರಸ್ಟ್ ರಾಮನಗರ ಹಾಗೂ ರಾಮನಗರ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮನಃ ಪರಿವರ್ತನೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಮಾಜಿ ಲೋಕಾಯುಕ್ತ ಅಭಿಯೋಜಕರು ಆದ ಅಂಬರೀಶ ರವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಮನೋ ನಿಗ್ರಹದಿಂದ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ,ಗಾಂಧಿ ತತ್ವಗಳ ಪಾಲನೆ ಯಿಂದ ಶಾಂತಿ,ನೆಮ್ಮದಿ ಹಾಗೂ ಅವರ ಸಾಹಿತ್ಯ ತಿಳಿಯುವುದರಿಂದ ಮನಃ ಪರಿವರ್ತನೆ ಸಾಧ್ಯ,ಮನುಷ್ಯ ಸಂಘ ಜೀವಿ ಸಹನೆ,ತಾಳ್ಮೆ ಬೆಳೆಯುವ ವ್ಯಕ್ತಿಗೆ ವಜ್ರಕವಚದಂತೆ, ದ್ವೇಷ ಅಸೂಯೆಗಳ ನಿಗ್ರಹ ದಿಂದ ನೆಮ್ಮದಿ ಜೀವನ ನಡೆಸಬಹುದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆರವರು ಸ್ವ ಪರಿವರ್ತನೆಯಿಂದ ಗೌರವಾನ್ವಿತ ವ್ಯಕ್ತಿಯಾಗಿ ಬಾಳಬಹುದು,ಗಾಂಧೀಜಿ ರವರ ಜೀವನ ಚರಿತ್ರೆ ನಮ್ಮ ಮುಂದಿರುವ ಸತ್ಯ ಮನ ಸ್ಟೇರ್ಯ ತುಂಬುತ್ತದೆ ಇವರು ಪರಿವರ್ತನೆ ಆಗಿ ಬಿಡುಗಡೆ ಹೊಂದಿ ತಮ್ಮಜೀವನ ಒಳ್ಳೆಯ ರೀತಿಯಲ್ಲಿ ನಡೆಸಲು ನಾವು ಇಂತಹ ಕಾರ್ಯಕ್ರಮ ಗಳ ಜೊತೆಯಲ್ಲಿ ಯೋಗ ಸಂಗೀತ ಕಾನೂನು ಅರಿವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಇಂದು ಹಸನ್ಮುಖಿ ಸೇವಾ ಟ್ರಸ್ಟ್ ಇಂತಹ ಒಳ್ಳೆಯ ರೀತಿಯ ಕಾರ್ಯಕ್ರಮ ನಡೆಸಿ ಕೊಟ್ಟಿರುವುದು ಶ್ಲಾಗನಿಯ ಎಂದು ನುಡಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಸನ್ಮುಖಿ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷೆ ಹೇಮಾವತಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಕಾರ್ಯಕ್ರಮ ಯಶಸ್ಸಿಗೆ ಅಧೀಕ್ಷಕರು ಕಾರಣ ಇದರ ಸದುಪಯೋಗವನ್ನು ಪಡೆದು ಒಳ್ಳೆಯ ವ್ಯಕ್ತಿ ಗಳಾಗಿ ಎಂದು ಹೇಳಿದರು
ಕಲಾಪ್ರಿಯ ಪತ್ರಿಕೆ ಸಂಪಾಧಿಕಿ ಹಾಗೂ ಲಯನ್ಸ್ ಸಿಲ್ಕ್ ಸಿಟಿ ಸಮಸ್ಥೆ ಅಧ್ಯಕ್ಷೆ ಸುಧಾರಾಣಿ ಇಂತಹ ಕಾರ್ಯಕ್ರಮ ಅಗತ್ಯವಾಗಿ ಬೇಕು ಯಾವ್ದೋ ಆವೇಶ ದಲ್ಲಿ ಮಾಡಿದ ತಪ್ಪನ್ನು ತಿದ್ದಿ ಕೊಂಡು ಪಶ್ಚಾತಾಪ ಪಟ್ಟು ಜೀವನವನ್ನು ಸರಿದಾರಿಗೆ ತರುವುದು ತಮ್ಮ ಕೈಯಲ್ಲಿಯೇ ಇದೆ ಸರಿಪಡಿಸಿಕೊಂಡು ಜೀವನ ಸಾಗಿಸಿ ಎಂದರು
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಮೇಶ್ ಸಿ ಹೊಸದೊಡ್ಡಿ ಅವರು ಮಾತನಾಡುತ್ತಾ. ಮಹಾತ್ಮ ಗಾಂಧೀಜಿ ಎಂಬ ವ್ಯಕ್ತಿಯು ರಕ್ತ ಮಾಂಸಗಳಿಂದ ತುಂಬಿದ ವ್ಯಕ್ತಿ . ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ ಎಂದು ಗಾಂಧೀಜಿಯವರ ಬಗ್ಗೆ ಆಲ್ಬರ್ಟ್ ಐನ್ಸ್ಟೀನ್ ಹೇಳಿದ ಮಾತು… 1869ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರ ಬಂದರ್ ನಲ್ಲಿ ಜನಿಸಿದ ಮೋಹನ್ ದಾಸ್ ಕರಮಚಂದ ಗಾಂಧಿ ಮಹಾತ್ಮ ಗಾಂಧಿಯಾಗಿ ರಾಷ್ಟ್ರಪಿತನಾಗಿ ಗುರುತಿಸಿಕೊಂಡರು.
ಅಂಥವರ ಜನ್ಮದಿನ ಇಂದು ರಾಷ್ಟ್ರೀಯ ಹಬ್ಬವಾಗಿ ಆಚರಣೆಯಾಗುತ್ತಿದೆ. ಉಪವಾಸ ಸತ್ಯಾಗ್ರಹ ಅಸಹಕಾರ ಚಳುವಳಿ ಭಾರತ ಬಿಟ್ಟು ತೊಲಗಿ ,ಮಾಡು ಇಲ್ಲವೇ ಮಡಿ, ಮುಂತಾದ ಹೋರಾಟಗಳನ್ನು ನಡೆಸಿದ ಗಾಂಧೀಜಿಯವರಿಗೆ ಸ್ಪೂರ್ತಿ ನೀಡಿದ ವಿಚಾರಗಳೆಂದರೆ ಭಗವದ್ಗೀತೆ, ಲಿಯೋಟಾಸ್ಟೈ ಬರೆದ ಬರಹಗಳು, ಹರಿಶ್ಚಂದ್ರ ನಾಟಕ, ಶ್ರವಣನ ಪಿತೃ ಭಕ್ತಿ, ಮುಂತಾದವುಗಳು, ಇಂಥವುಗಳಿಂದ ಮಹಾತ್ಮ ಗಾಂಧೀಜಿಯವರು ಸತ್ಯ ಅಹಿಂಸೆ ಇವುಗಳನ್ನು ರೂಡಿಸಿಕೊಂಡು ಬಂದರು. ಜೀವನದುದ್ದಕ್ಕೂ ಸಸ್ಯಹಾರವನ್ನೇ ಹೆಚ್ಚು ಪ್ರೀತಿ ಪಟ್ಟವರು.
ಆಫ್ರಿಕದಲ್ಲಿ ಅನುಸರಿಸುತ್ತಿದ್ದ ಪಾಶ್ಚತ್ಯ ಜೀವನ ಶೈಲಿ ತ್ಯಜಿಸಿ ಸರಳ ರೀತಿಯಾಗಿ ಬದುಕಿದವರು. ಮಹಾತ್ಮ ಗಾಂಧೀಜಿ. ತಮ್ಮ ಬಟ್ಟೆ ತಾವೇ ತಯಾರಿಸಿಕೊಳ್ಳುತ್ತಿದ್ದರು ಜೀವನದಿದ್ದಕ್ಕೂ ಧೋತಿಯನ್ನು ಧರಿಸುತ್ತಿದ್ದರು . ಹಿಂದೂ ಧರ್ಮದಲ್ಲಿ ಜನಿಸಿದ ಇವರು ಎಲ್ಲಾ ಧರ್ಮವನ್ನು ಪ್ರೀತಿಸಿದರು.. ಸಪ್ತಪಾತಕಗಳಿಂದ ದೂರವಿರಬೇಕೆಂದು ತಮ್ಮ ಮಾತುಗಳಲ್ಲಿ ತಿಳಿಸಿಕೊಟ್ಟರು.
ವಾಲ್ಮೀಕಿ ಮಹಾಕಾವ್ಯ ಬರದಂತಹ ವ್ಯಕ್ತಿ ದೇವರು ಮತ್ತು ದೇವತೆಗಳಿಂದ ಅನುಗ್ರಹ ಪಡೆದು ದರೋಡೆಕಾರನಾಗಿದ್ದಂತ ವಾಲ್ಮೀಕಿಯು ಮುಂದೆ ಒಳ್ಳೆಯವರಾಗಿ ತನ್ನ ಬದುಕನ್ನು ಕಟ್ಟಿಕೊಂಡವರು. ಒಂದೊಮ್ಮೆ ದರೋಡೆ ಮಾಡುತ್ತಿದ್ದ ವಾಲ್ಮೀಕಿಯು ನಾರದರನ್ನು ಅಡ್ಡಗಟ್ಟಿದಾಗ ನಾರದರು ಇಂಥ ದರೋಡೆಯು ಸರಿಯೇ ಇಂಥ ಪಾಪಕರ್ಮವು ಸರಿಯೇ ಎಂದು ಪ್ರಶ್ನಿಸಿ ನಿನ್ನ ಪಾಪಕರ್ಮಗಳನ್ನು ಯಾರಾದರೂ ಹೊತ್ತುಕೊಳ್ಳುತ್ತಾರೆಯೇ ಎಂದು ಹೇಳಿ ಮನೆಗೆ ಕಳಿಸಿದರು ಹೆಂಡತಿ ಮಕ್ಕಳನ್ನು ಕೇಳಿಕೊಂಡು ಬರುವಂತೆ ಆಗ ವಾಲ್ಮೀಕಿಯು ಅಲ್ಲಿ ಹೋಗಿ ವಿಚಾರವನ್ನು ಪ್ರಸ್ತಾಪಿಸಿದಾಗ ಯಾರೂ ತಮ್ಮ ತಲೆಯ ಮೇಲೆ ಈ ಪಾಪ ಕರ್ಮಗಳನ್ನು ಹಾಕಿಕೊಳ್ಳಲು ಒಪ್ಪಲಿಲ್ಲ.. ಆಗ ನಾರದರೂ ಕೇಳಿ ತಿಳಿದುಕೊಂಡು ರಾಮ ಮಂತ್ರವನ್ನು ಜಪಿಸುವಂತೆ ಹೇಳಿ, ರಾಮ ನಾಮಸ್ಮರಿಸುವುದರ ಮುಖಾಂತರ ಮುಂದೆ ವಾಲ್ಮೀಕಿ ರಾಮಾಯಣವನ್ನೇ ಬರೆಯುವಷ್ಟು ಬುದ್ಧಿ ಪಡೆದರು. ನದಿ ದಡದಲ್ಲಿ ಜೋಡಿ ಕ್ರಾೌಂಚಪಕ್ಷಿ ವಿಹರಿಸುತ್ತಿದ್ದಾಗ ಬೇಡನೊಬ್ಬ ಒಂದು ಹಕ್ಕಿಯನ್ನು ಕೊಂದಾಗ ವಾಲ್ಮೀಕಿಯ ಬಾಯಿಂದ ಮಾ ನಿಷಾದ ಎಂಬ ಮಾತು ಬಂತು. ಆಗ ನನ್ನ ಬಾಯಿಂದ ಎಂತಹ ಮಾತುಗಳು ಬಂದವು ಎಂದು ವಾಲ್ಮೀಕಿ ಅಂದು ಕೊಂಡರು.
ಅಷ್ಟ್ರಲ್ಲಿ ನಾರದರು ಬಂದು ಇದು ನಿನ್ನಿಂದ ಬಂದ ಮೊದಲ ಪದ್ಯ, ನೀನು ರಾಮಾಯಣವನ್ನೇ ರಚಿಸುವೆ ಎಂದು ತಿಳಿಸಿದರು… ಮುಂದೆ ವಾಲ್ಮೀಕಿಯು ರಾಮಾಯಣವನ್ನೇ ರಚಿಸಿದರು ಸೀತೆಗೆ ಆಶ್ರಮದಲ್ಲಿ ಜಾಗ ಕೊಟ್ಟು ಲವಕುಶರಿಗೆ ವಿದ್ಯಾಭ್ಯಾಸವನ್ನು ಮಾಡಿಸಿಕೊಟ್ಟರು..
ವೇಮನ ಸರ್ವಜ್ಞ ತಿರುವಳ್ಳುವರು ಇಂತಹ ಉದಾಹರಣೆಗಳನ್ನು ನೀಡಿ ಜೈಲಿನ ನಿವಾಸಿಗಳಿಗೆ ಅವರ ಬಗ್ಗೆ ತಿಳಿಹೇಳಿದರು. ವೇಮನ ದುಶ್ಚಟಗಳಿಗೆ ಬಲಿಯಾಗಿದ್ದು ಕೊನೆಗೆ ತಂದೆ ತಾಯಿಗಳೆ ಬಂಧುಗಳೇ ಅವನನ್ನು ಅನಾದರವಾಗಿ ಕಂಡಿದ್ದು, ಕೊನೆಗೆ ಅವರ ಅತ್ತಿಗೆ ಬೆಳವಡಿ ಮಲ್ಲಮ್ಮ ಅವನ ದುಶ್ಚಟಗಳನ್ನು ಬಿಡಿಸಲು ಮಾಡಿದ ಉಪಾಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಜೈಲರ್ ಶ್ರೀ ಈರಪ್ಪ ಸದಾಲಪುರ, ಹಸನ್ಮುಖಿ ಸೇವಾ ಟ್ರಸ್ಟ್ ನ ಶ್ರೀ ಡಾಕ್ಟರ್ ಲಿಖಿತೇಶ್,ಕಾಜಾಂಚಿ ಅನಂತನಾಗ್, ಕಾರ್ಯಕ್ರಮ ಸಂಯೋಜಕರಾದ ಡಾಕ್ಟರ್ ಹೇಮಂತ್ ಗೌಡ, ಸಹ ಕಾರ್ಯದರ್ಶಿ ಶ್ರೀಪ್ರಭು ಅಂಜನಾಪುರ, ಸಬ್ ಜೈಲರ್ ಬಾಬು ಹಾಜರಿದ್ದರು. ಕಾರಾಗೃಹದ ಜೈಲರ್ ಆದ ಶ್ರೀ ಇಮಾಮ್ ಖಾಸಿಂ ಕಾರ್ಯಕ್ರಮ ನಿರೂಪಣೆ ಮಾಡಿದರು.