ತಕ್ಷಣವೇ ಅಭಿವೃದ್ಧಿ ನಿಗಮ ಜಾರಿಮಾಡಲು ಅದೇನು ತರಕಾರಿ ತಾಯಮ್ಮನ ಅಂಗಡಿಯಲ್ಲಿ ಸಿಗುವ ತರಕಾರಿಯೇ?
ವಿಜಯ ದರ್ಪಣ ನ್ಯೂಸ್
ಮಡಿಕೇರಿ: ಚುನಾವಣೆ ಪೂರ್ವದಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾದ ಪ್ರಣಾಳಿಕೆಯನ್ನು ಕಾಂಗ್ರೆಸ್ ಸಿದ್ದಪಡಿಸಿ ಅದನ್ನು ಎ.ಎಸ್ ಪೊನ್ನಣ್ಣ ನವರು ಬಿಡುಗಡೆ ಮಾಡಿದ್ದರು.ನಂತರ ಡಾ ಮಂತರ್ ಗೌಡ ರವರ ಪ್ರಣಾಳಿಕೆಯಲ್ಲಿ ಕೂಡ ಅವುಗಳಿಗೆ ಆದ್ಯತೆ ನೀಡಿದ್ದರು.ಒಟ್ಟು ಇಪ್ಪತ್ತೆಂಟು ಭರವಸೆಗಳಿದ್ದು ಅವುಗಳಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕೂಡ ಒಂದು.
ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಯ ಜವಾಬ್ದಾರಿ ಶಾಸಕದ್ವಯರ ಹೊಣೆಗಾರಿಕೆಯಾಗಿದೆ.ಅದನ್ನು ಖಂಡಿತವಾಗಿ ಅವರು ಮಾಡಲು ಸಿದ್ದರಿದ್ದು ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದೆ.
ಅಭಿವೃದ್ಧಿ ನಿಗಮ ಸ್ಥಾಪನೆ ಎನ್ನುವುದು ತಕ್ಷಣದಲ್ಲಿ ಆಗುವುದಿಲ್ಲ.ಅದೇನು ಕೇಳಿದ ತಕ್ಷಣ ಆಗಲು ತರಕಾರಿ ತಾಯಮ್ಮನ ಅಂಗಡಿಯಲ್ಲಿ ತಕ್ಷಣವೇ ಖರೀದಿಸುವ ತರಕಾರಿಯಲ್ಲಾ,
ಕಂಪೆನಿ ಕಾಯ್ದೆ 2013 ,ನಿಯಮ 7 ಕ್ಕೆ ಅನುಗುಣವಾಗಿ ಪ್ರಕ್ರಿಯೆ ನಡೆಯಬೇಕು.ಆರ್ಥಿಕ ಇಲಾಖೆ ಯ ಒಪ್ಪಿಗೆ ಪಡೆದು ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ಪಡೆಯಬೇಕು.ಅದರ ಕಛೇರಿ ,ಸಿಬ್ಬಂದಿ ವೇತನ ಇನ್ನಿತರ ವೆಚ್ಚಗಳೇ 10 ಕೋಟಿ ರೂಗಳಿಗೂ ಮೇಲಾಗುತ್ತದೆ. ಹಾಗಾಗಿ ಕನಿಷ್ಠ 50 ಕೋಟಿ ಯಾದರೂ ವಾರ್ಷಿಕ ಅನುದಾನ ಬೇಕು.ಪೊನ್ನಣ್ಣ ನವರು ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಡಾ ಮಂತರ್ ಗೌಡ ರವರು ಕೂಡ ಕೈ ಜೋಡಿಸಿದ್ದಾರೆ.ಮುಂದಿನ ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಣೆಯಾಗಲು ನಾವೂ,ನೀವೂ ಎಲ್ಲರೂ ಕೈ ಜೋಡಿಸೋಣ.ಅದು ಬಿಟ್ಟು ಈಗ ತಾನೆ ಅಧಿಕಾರ ವಹಿಸಿಕೊಂಡ ಶಾಸಕರನ್ನು ಆರೋಪಿಸುವುದು ಸರಿಯಲ್ಲ.
ಎರಡು ವರ್ಷಗಳಿಂದ ಆಗಿನ ಶಾಸಕರಿಗೆ ಮನವಿ ಸಲ್ಲಿಸಿ,ಬೆಳಗಾಂವಿ ಅಧಿವೇಶನದಲ್ಲಿ ಮನವಿ ಸಲ್ಲಿಸಿ ಬೋಗಸ್ ಆದೇಶ ಪಡೆದಿರುವಾಗ ಅಧಿಕೃತ ಆದೇಶದೊಂದಿಗೆ ನಿಗಮ ಸ್ಥಾಪನೆಗೆ ಮುಂದಿನ ಬಜೆಟ್ ವರೆಗೆ ಕಾಯಲು ಸಾಧ್ಯವಿಲ್ಲವೇ?
ಜೊತೆಗೆ ಮುಖ್ಯಮಂತ್ರಿಗಳ ಬಳಿ ಎಲ್ಲರೂ ಸೇರಿ( ಕೊಡವ ಸಮಾಜಗಳು,ಕೊಡವ ಸಂಘಟನೆಗಳು, ಆರಂಭಿಕವಾಗಿ ಪ್ರಸ್ತಾವನೆಯನ್ನು ಯುಕೋ ಸಂಘಟನೆಗೆ ಆದ್ಯತೆ ನೀಡಿ) ಶಾಸಕದ್ವಯರೊಂದಿಗೆ ನಿಯೋಗ ತೆರಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ.
ನೀವೆಲ್ಲರೂ ಬನ್ನಿ.ಆಗ ಶಾಸಕರುಗಳಿಗೆ ಹೆಚ್ಚಿನ ಬಲ ಬರುತ್ತದೆ.ನಿಗಮಕ್ಕೆ ಗರಿಷ್ಠ ಅನುದಾನ ಪಡೆಯಲು ಸಹಕಾರವಾಗುತ್ತದೆ.
( ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಿದ್ದೇನೆ.ಕಳೆದ ಸರ್ಕಾರ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ್ದು ಬೋಗಸ್ ಆದೇಶ)
✍️ತೆನ್ನಿರ ಮೈನಾ….