ದೇವನಹಳ್ಳಿಯಲ್ಲಿ ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿಗ ಆಚರಣೆ
ವಿಜಯ ದರ್ಪಣ ನ್ಯೂಸ್
ದೇವನಹಳ್ಳಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 17 ,
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ತಾಲ್ಲೂಕು ಆಡಳಿತ ಸೌಧದ ಒಳಾಂಗಣದಲ್ಲಿ “ಶ್ರೀ ವಿಶ್ವಕರ್ಮ ಜಯಂತಿ”ಯನ್ನು ಆಚರಿಸಲಾಯಿತು.
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಡಿ.ಎಂ.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ.ಕೃಷ್ಣಪ್ಪ, ವಿಶ್ವಕರ್ಮ ಸಂಘದ ತಾಲ್ಲೂಕು ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ವಿಶ್ವ ಕರ್ಮ ಜಯಂತಿ ಆಚರಣೆ
ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆಪ್ಟೆಂಬರ್ 17.ಸೃಷ್ಟಿಕರ್ತ ಬ್ರಹ್ಮನಾದರೆ ಅವನು ವಂಶಸ್ಥ ಭಗವಾನ್ ವಿಶ್ವಕರ್ಮ . ವಿಶ್ವಕರ್ಮ ಇಡಿ ಸೃಷ್ಟಿಯ ತಯಾರಕ ಎಂದು ತಿಳಿಯಪಡಿಸುತ್ತಾ ಈ ವಿಶ್ವದಲ್ಲಿ ಕುಶಲಕರ್ಮಿಗಳು ದೇವಶಿಲ್ಪಿ ವಿಶ್ವಕರ್ಮ ರನ್ನು ಸ್ಮರಿಸದೆ ಆರಾದಿಸದೆ ಪೂಜಿಸದೆ ಯಾವ ಕೆಲಸವನ್ನು ಆರಂಭಿಸುವುದಿಲ್ಲ ಎಂದು ಕಾರ್ಯದರ್ಶಿ ಪುರುಷೋತ್ತಮ್ ಬಾಬು ತಿಳಿಸಿದರು.
ವಿಜಯಪುರ ಪಟ್ಟಣದಲ್ಲಿರುವ ವಿಶ್ವಕರ್ಮದ ಸಮಾಜದ ಕುಲದೇವ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಾಜಶೇಖರಾಚಾರಿ ರವರು ಮಾತನಾಡುತ್ತಾ ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿ ಸಮುದ್ರ ಮಂಥನದ ವೇಳೆ ಹುಟ್ಟಿದ ಕಾಮಧೇನು ಕಲ್ಪವೃಕ್ಷ 14 ರತ್ನ ಅತ್ಯ ಮೂಲ್ಯ ರತ್ನಗಳಲ್ಲಿ ವಿಶ್ವಕರ್ಮರು ಒಬ್ಬರು ಎಂದು ತಿಳಿಯಪಡಿಸುತ್ತಾ ಪಂಚ ಕರ್ಮರಿಗೆ ಐವರು ಮಕ್ಕಳು. ಮನು **( ಕಮ್ಮಾರ) ಮಾಯ (ಬಡಿಗ) ತ್ವಸ್ತರ (ಕಂಚಗಾರ) ವಿಶ್ವಜ್ಞ (ಅಕ್ಕ ಸಾಲಿಗ) ಶಿಲ್ಪಿ (ಶಿಲ್ಪಕಾರ) ಈ ಪಂಚಕರ್ಮರನ್ನು ಪಂಚ್ಚಾಳರು ವಿಶ್ವ ಬ್ರಾಹ್ಮಣರು ಎಂದು ಕರೆಯುತ್ತಾರೆ.
ನಮ್ಮ ಸಮಾಜ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಸಂಘಟನೆಯಲ್ಲಿ ಪ್ರಗತಿಯಲ್ಲಿದೆ. ಆದರೆ ರಾಜಕೀಯ ಪ್ರಾತಿನಿಧ್ಯದ ಜೊತೆ ವಿದ್ಯಾ ಕ್ಷೇತ್ರದಲ್ಲಿ ಮುಂದುವರಿಸಲು ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಪ್ರತ್ಯೇಕವಾಗಿ ಮೀಸಲಾತಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕಾಗಿ ಒತ್ತಾಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಚಿನ್ನ ಬೆಳ್ಳಿ ತಯಾರಕದ ದೇವಿ ನಾಗಭೂಷಣ ಆಚಾರ್ ಶಿಲ್ಪಿಗಳಾದ ಗಿರೀಶ್ ಕಬ್ಬಿಣದ ಕೆಲಸಗಾರ ವೆಂಕಟೇಶಾಚಾರ್ ರಾಷ್ಟ್ರಪ್ರಶಸ್ತಿ ನಿವೃತ್ತ ಶಿಕ್ಷಕ ನಂದೀಶ್ ಜಿಎಸ್ ಅಶ್ವತಮ್ಮ
ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಆಚಾರ್ ಸುದರ್ಶನ್ ಬಾಬು ವೈ.ಕೆ ಮುರುಳೀಧರ್ ಜನಾರ್ಧನ ಚಾರ್ ಸತೀಶ್ ಕುಮಾರ್ ಮಹಿಳಾ ಪದಾಧಿಕಾರಿಗಳಾದ ರಾಜೇಶ್ವರಿ ಶ್ವೇತಾ ಉಮಾಮಹೇಶ್ವರಿ ಶೋಭಾದೇವಿ ಲೀಲಾವತಿ ರತ್ನಮ್ಮ ಶಶಿಕಲಾ ಮಂಜುಳಾ ರವರು ಉಪಸ್ಥಿತರಿದರು.
ದೇವನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವರಿಂದ ಸೆಪ್ಟೆಂಬರ್ 20 ರಂದು ಸಾರ್ವಜನಿಕ ಸಂಪರ್ಕ ಸಭೆ
ಬಿಜಿಎಸ್ ನಗರ,ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 16 , ಮಾನ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 20 ರಂದು ದೇವನಹಳ್ಳಿಯ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಶಿವಶಂಕರ್ ಎನ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರ ಉಪಸ್ಥಿತಿಯಲ್ಲಿ ದೇವನಹಳ್ಳಿ ಟೌನ್, ಅಂಬೇಡ್ಕರ್ ಭವನದಲ್ಲಿ ಸೆಪ್ಟೆಂಬರ್ 20ರಂದು ಬೆಳಗ್ಗೆ 11-00 ಗಂಟೆಗೆ *ಸಾರ್ವಜನಿಕ ಸಂಪರ್ಕ ಸಭೆಯನ್ನು* ಏರ್ಪಡಿಸಲಾಗಿರುತ್ತದೆ.
ಈ ಸಭೆಯಲ್ಲಿ ದೇವನಹಳ್ಳಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಆಲಿಸುವುದಲ್ಲದೇ ಸ್ಥಳದಲ್ಲಿಯೇ ಪರಿಹಾರವನ್ನು ನೀಡಲು ಕ್ರಮ ವಹಿಸಲಾಗುವುದು.
ಆದ್ದರಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಸಾರ್ವಜನಿಕರು ತಮ್ಮ ಕುಂದು ಕೊರತೆಗಳು/ಅಹವಾಲುಗಳು ಏನಾದರು ಇದ್ದಲ್ಲಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ