ಜಿಲ್ಲಾಡಳಿತ ಭವನದಲ್ಲಿ “ಶ್ರೀ ಕೃಷ್ಣ ಜಯಂತಿ ” ಆಚರಣೆ

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 06

(ಕರ್ನಾಟಕ ವಾರ್ತೆ):”ಶ್ರೀ ಕೃಷ್ಣ ಜಯಂತಿ”ಯನ್ನು ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಸರಳವಾಗಿ ಆಚರಿಸಲಾಯಿತು.
ಶ್ರೀ ಕೃಷ್ಣ ಭಾವಚಿತ್ರಕ್ಕೆ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದ‌‌ಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&

ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ , ಸೆಪ್ಟೆಂಬರ್ 06 ವಿಕಲಚೇತನರಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು (ಡಿ.ಬಿ.ಟಿ- ನೇರ ನಗದು ವರ್ಗಾವಣೆ) ತಂತ್ರಾಂಶದಡಿ ಅನುಷ್ಟಾನಗೊಳಿಸಲಾಗಿರುತ್ತದೆ. ಆಧಾರ ಯೋಜನೆ,
ಮೆರಿಟ್ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ ಯೋಜನೆ, ಮರಣ ಪರಿಹಾರ ನಿಧಿ,
ವೈದ್ಯಕೀಯ ಪರಿಹಾರ ನಿಧಿ,
ಪ್ರತಿಭೆ ಯೋಜನೆ, ಸಾಧನೆ ಯೋಜನೆ, ನಿರುದ್ಯೋಗ ಭತ್ಯೆ
ಶಿಶುಪಾಲನಾ ಭತ್ಯೆ
ಮೇಲಿನ 08 ಯೋಜನೆಗಳನ್ನು ಸೇವಾ ಸಿಂಧು ಮೂಲಕ ಲೈವ್ ಮಾಡಲಾಗಿದ್ದು, 2023-24ನೇ ಸಾಲಿಗೆ 08 ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ (https://sevasindhu.Karnataka.gov.in/Sevasindhu/Department Service) ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ವಿಸ್ತರಿಸಲಾಗಿದ್ದು, ಅರ್ಹ ವಿಕಲಚೇತನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.