ಅಖಿಲ ಕರ್ನಾಟಕ ಮಿತ್ರ ಸಂಘದಿಂದ ದೇವರಾಜ್ ಅರಸ್ ಜಯಂತಿ ಆಚರಣೆ.
ವಿಜಯ ದರ್ಪಣ ನ್ಯೂಸ್
ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ . ಆಗಸ್ಟ್ 21
ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ರಾಜ್ಯದ ಮೊದಲನೇ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಕಾಲದಿಂದ ಕಾಲದ ಇಲ್ಲಿಯವರಿಗೂ ಅವರದೇ ಆದ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಿಸಬೇಕಾದರೆ ಅನೇಕ ಕಷ್ಟಗಳನ್ನು ಅನುಭವಿಸಿ ಆ ಸುವರ್ಣ ಸೌಧವನ್ನು ಲೋಕಾರ್ಪಣೆ ಮಾಡಿದರು. ಎಂದು ಚಿ.ಮಾ ಸುಧಾಕರ್ ರವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿರುವ ಇಂದಿರಾ ನಗರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿಯ ಬಗ್ಗೆ ಉಪನ್ಯಾಸವನ್ನು ನೀಡಿದರು.
ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯಧ್ಯಕ್ಷ ಚಿ. ಮಾ. ಸುಧಾಕರ್ ಮಾತನಾಡುತ್ತಾ ದೇವರಾಜ್ ಅರಸ್ ರವರು ಮೈಸೂರು ಜಿಲ್ಲೆಯ ಕಲ್ಲಹಳ್ಳಿ ಗ್ರಾಮದಲ್ಲಿ 1915ರಲ್ಲಿ ತಂದೆ ದೇವರಾಜ್ ಅರಸ್ ಒಡೆಯರ್ ತಾಯಿ ದೇವಿಕ ಅಮಾಣ್ಣಿ ರವರ ಮಗನಾಗಿ ಜನಿಸಿದರು. ಅರಸುರವರು 1972 ರಿಂದ 1980 ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮವಾದ ಆಡಳಿತ ನೀಡಿದರು. ಅರಸುರವರು ಹಿಂದುಳಿದವರು ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ನಿಲಯ 16 ಸಾವಿರ ನಿರುದ್ಯೋಗಿಗಳಿಗೆ ಸ್ಟೈಪೆಂಡರಿ ವೇತನ ಬಡವರು ಮತ್ತು ಬಂದಿತ ಕಾರ್ಮಿಕರರಿಗೆ ರಾತ್ರಿ ಹೊತ್ತು ಮಣ್ಣು ಸಾಗಿಸುವುದು ನಿಷೇದ ಮಾಡಿದರು
1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿದರು. ಭೂ ಸುಧಾರಣೆ ಭೂಮಿ ಉಳ್ಳುವರೆಗೆ ಭೂಮಿ ಎಂದು ಮಾದರಿಯಾಗಿದೆ ಎಂದು ತಿಳಿಸಿದರು ಇದರಿಂದ ಶ್ರೀಮಂತ ಮತ್ತು ಬಡವರ ಮಧ್ಯೆ ಕಳಂಕ ಕಡಿಮೆ ಆಗುತ್ತದೆಎಂದು ತಿಳಿಸಿದರು. ಅವರು ರಾಜ್ಯ ಕಂಡ ಶ್ರೇಷ್ಠ ಮುಖ್ಯಮಂತ್ರಿ ಎಂದು ಬಣ್ಣಿಸುತ್ತಾ ಸರ್ಕಾರವು ಶ್ರೀ ದೇವರಾಜ ಅರಸು ನಿಗಮ ಸ್ಥಾಪನೆ ಮಾಡಿ ಹಿಂದುಳಿದವರಿಗೆ ಸಹಾಯಧನ ಮಕ್ಕಳಿಗೆ ವಿದ್ಯಾಭ್ಯಾಸ ಸಹಾಯಧನ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರದಾನ ಕಾರ್ಯದರ್ಶಿ ಆರ್. ಮುನಿರಾಜು, ಕಾರ್ಯಾಧ್ಯಕ್ಷ ವಿ. ವಿಶ್ವನಾಥ್ ,ಶಾಲಾ ಮುಖ್ಯೋಪಾಧ್ಯಾಯ ಮುನಿಪಾಪ ಶಿಕ್ಷಕರಾದ ಶೋಭಾ, ಪ್ರಸನ್ನ ಕುಮಾರಿ, ನಾಗವೇಣಿ, ತಸ್ಮೀಯಾ ಉಪಸ್ಥಿತರಿದ್ದರು.
&&&&&&&&&&&&&&&&&&&&&&&&&&##################################
ಅಕ್ಕನ ಬಳಗ ಸೇವಾ ಟ್ರಸ್ಟ್ ವತಿಯಿಂದ 343 ಶಿವಾನುಭವ ಪ್ರವಚನ.
ಬೆಂಗಳೂರು ಗ್ರಾ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ದಾನ ಧರ್ಮ ಶಿರೋಮಣಿ ಮೇಲೂರು ಪುಟ್ಟಯ್ಯ ಧಾರ್ಮಿಕ ಚಿಂತಕ ಸಿಎಂ ವೀರಣ್ಣ ಕುಮಾರಿ ಕಾಮಾಕ್ಷಮ್ಮ ಸಿ ಎನ್ ಬಸವರಾಜ್ ರವರ ಪರಿಶ್ರಮದಿಂದ 60 ವರ್ಷದ ಹಿಂದೆ ಅಕ್ಕನ ಬಳಗ ಸ್ಥಾಪನೆಗೊಂಡು ನಿರಂತರವಾಗಿ ಇಂದಿಗೂ ಸಾಗುತ್ತಿದೆ ಎಂದು ಧಾರ್ಮಿಕ ಮುಖಂಡ ಎಸ್ ಪಿ ಕೃಷ್ಣಾ ನಂದವರು ತಿಳಿಸಿದರು.
ವಿಜಯಪುರ ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವೀರಭದ್ರ ಸ್ವಾಮಿ ಅಕ್ಕನ ಬಳಗ ಸೇವಾ ಟ್ರಸ್ಟ್ ರವರ ಆಶ್ರಯದಲ್ಲಿ 343ನೆಯ ಮಾಸಿಕ ಶಿವಾನುಭವ ಗೋಷ್ಠಿ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿ ಮತ್ತು ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಆರತಿ ಪತ್ತಾರ್ ರವರು ಅನುಭವಿಗಳ ಅನುಭವ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡುತ್ತಾ* ಧ್ಯಾನ ತಾಂಬೂಲ * ನಿಮ್ಮ ಕೈಯಲ್ಲಿದೆ * ತಾಂಬೂಲ* ಎಂದ ತಕ್ಷಣ ಮಂಗಳ ದ್ರವ್ಯಗಳೆಂದರೆ ಅರಿಶಿನ ಕುಂಕುಮ ಎಲೆ ಅಡಿಕೆ ಎಂದು ವ್ಯಾಖ್ಯಾನ ಮಾಡುತ್ತಾ * ಧ್ಯಾನ ತಾಂಬೂಲ* ಪರಿಪೂರ್ಣವಾದ ಆರೋಗ್ಯ ಶಾಂತಿ ನೆಮ್ಮದಿ ಜ್ಞಾನ ಆನಂದ ಸತ್ಯ ಚೈತನ್ಯ ಮುಂತಾದ ಅನೇಕ ಮಂಗಳ ದ್ರವ್ಯಗಳಿಂದ ಕೂಡಿದೆ. ಧ್ಯಾನ ಮಾಡಿದರೆ ನಮ್ಮ ದೇಹಕ್ಕೆ ಮಧುಮೇಹ ರಕ್ತದ ಒತ್ತಡ ಇನ್ನು ಮುಂತಾದ ಕಾಯಿಲೆಗಳು ಬರುವುದಿಲ್ಲ. ಆದ್ದರಿಂದ ಧ್ಯಾನ ಮಾಡಬೇಕು. ನಮ್ಮ ಮನಸ್ಸಿನಲ್ಲಿ ಏಕಾಗ್ರತೆ ಮೂಡಲು ಭಗವದ್ಗೀತೆ ಬಸವಣ್ಣನವರ ವಚನಗಳು ಆಧ್ಯಾತ್ಮಿಕ ಚಿಂತಕ ರಾಮಕೃಷ್ಣ ಪರಮಹಂಸ ಯೋಗಿ ವೇಮಣ್ಣ ರಮಣ ಮಹರ್ಷಿ ಉತ್ತರ ಗೀತೆ(ಕೃಷ್ಣ) ಹಾಗೂ ಅವರ ಆದರ್ಶಗಳನ್ನು ಅಧ್ಯಯನ ಮಾಡಬೇಕೆಂದು ಕರೆ ನೀಡುತ್ತಾ ಧನ ಶಕ್ತಿಗಿಂತ ಧ್ಯಾನ ಶಕ್ತಿ ಒಳ್ಳೆಯದು ಕೊಡೆ ನಮ್ಮ ಹತ್ತಿರ ಇದ್ದರೆ ಬಿಸಿಲು ಮಳೆಯಿಂದ ರಕ್ಷಿಸುತ್ತದೆ. ಧ್ಯಾನ ನಮ್ಮ ಹತ್ತಿರವಿದ್ದರೆ ರೋಗ ದುಃಖ ಎರಡರಿಂದಲೂ ರಕ್ಷಿಸುತ್ತದೆ. ಮಾಯಾಜಲ ಗಟ್ಟಿಯಾದುದು ಅದನ್ನು ಧ್ಯಾನದಿಂದ ಕಡಿಮೆ ಮಾಡಿಕೊಳ್ಳಬಹುದೆಂದು ತಿಳಿಸಿದರು.
ಸೇವಾ ಟ್ರಸ್ಟಿನ ಉಪಾಧ್ಯಕ್ಷೆ ಶ್ರೀಮತಿ ಅಂಬಾ ಭವಾನಿ ಪ್ರಭುಲಿಂಗಲೀಲೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಲಿಂಗೈಕ್ಯ ಅಕ್ಕಯಮ್ಮ ಮತ್ತು ವಿ ಎನ್ ದೇವಪ್ಪಯ್ಯ ನವರ ಸ್ಮರಣೆ ಕಾರ್ಯಕ್ರಮವನ್ನು ಶ್ರೀಮತಿ ಮೀನಾ ಸುರೇಶ್ ಬಾಬುರವರು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಆಧ್ಯಾತ್ಮಿಕ ಚಿಂತಕರಾದ ಶ್ರೀಮತಿ ಆರತಿ ಪತ್ತಾರ್ ರವರನ್ನು ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಶ್ರೀಮತಿ ಭಾನುಮತಿ ಮತ್ತು ಅರಿವಿನ ಮನೆಯವರು ವಚನ ಗಾಯನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಪಟ್ಟಣ ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಿ. ಪುಟ್ಟರಾಜಣ್ಣ ಹಿರಿಯರಾದ ಪಿ ಚಂದ್ರಪ್ಪ ಗೌರವ ಕಾರ್ಯದರ್ಶಿ ಮ.ಸುರೇಶ್ ಬಾಬು ಅರಿವಿನ ಮನೆಯ ತಾಯಂದಿರು ಉಪಸ್ಥಿತರಿದ್ದರು
ಈ ದಿನದ ಭಕ್ತಿ ಸೇವೆಯನ್ನು ಬೆಂಗಳೂರಿನ ಸತೀಶ್ ಕುಮಾರ್ ಮತ್ತು ಕುಟುಂಬದವರು ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಭಾರತಿ ವಿಶ್ವನಾಥ್ ಸ್ವಾಗತ ಎಸ್‌ಪಿ ಕೃಷ್ಣಾನಂದ ನಿರೂಪಣೆ ಶ್ರೀಮತಿ ವಿಮಲಾಂಬ ಅನಿಲ್ ಕುಮಾರ್ ಶ್ರೀಮತಿ ಭಾರತಿ ಪ್ರಭುದೇವ್ ವಂದಿಸಿದರು.