ರಂಗಭೂಮಿಯಲ್ಲಿ ಕಲಿತದ್ದನ್ನು ನೇರವಾಗಿ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯ .

ವಿಜಯ ದರ್ಪಣ ನ್ಯೂಸ್. ಬೆಂಗಳೂರು
ರಂಗಭೂಮಿ ನಿಜವಾದ ವಿಶ್ವವಿದ್ಯಾಲಯ, ಇಲ್ಲಿನ ಕಲಿಕೆಯ ಪಾಠಗಳು ಬದುಕನ್ನು ರೂಪಿಸುತ್ತವೆ. ಇಲ್ಲಿ ಕಲಿತದ್ದನ್ನು ಜೀವನಕ್ಕೆ ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಸಂಘಟನೆ, ಬಂಧುತ್ವ, ಸಹಬಾಳ್ವೆ ಧರ್ಮ, ರಾಜಕೀಯ, ಸಾಚಾತನ ಇತ್ಯಾದಿ ಜೀವನ ಮೌಲ್ಯಗಳು ಇಲ್ಲಿ ಅಪಾರವಾಗಿರುತ್ತವೆ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಹೇಳಿದರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಗರದ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಓದಿನರಮನೆಯಲ್ಲಿ ತಿಂಗಳ ಒನಪು ಎಂಬ ವಿಶಿಷ್ಟ ಕಾರ್ಯಕ್ರಮ ಸರಣಿಯ 180ನೇ ಸಂಚಿಕೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಹೊಸಮನಿ ಅವರ ಗ್ರಂಥಾಲಯ ಡಿಜಿಟಲೀಕರಣದ ಸಾಧನೆಗಾಗಿ ಸನ್ಮಾನಿಸಿ ಮಾತನಾಡಿದರು.
ವರ್ತಮಾನದ ಎಲ್ಲ ತಲ್ಲಣಗಳು, ರಾಜಕಾರಣ, ಧರ್ಮದ ದುರುಪಯೋಗ, ಅಧಿಕಾರದ ದರ್ಪ ಇತ್ಯಾದಿ ಬಹುವಿಷಯಗಳನ್ನು ಗಿರೀಶ್ ಕಾರ್ನಾಡರು ತಮ್ಮ ತುಘಲಕ್ ನಾಟಕದಲ್ಲಿ ಅಳವಡಿಸಿ ಪ್ರಸ್ತುತತೆಯನ್ನು ಮೆರೆದಿದ್ದಾರೆ ಎಂದರು.
ಗೌರವ ಸ್ವೀಕರಿಸಿದ ಸತೀಶ್‌ಕುಮಾರ್ ಹೊಸಮನಿ ಅವರು ಮಾತನಾಡಿ ಗ್ರಂಥಾಲಯವೆಂದರೆ ಕೇವಲ ಪುಸ್ತಕ, ನಿಯತಕಾಲಿಕೆಗಳ ಓದು ಎಂಬ ನಿಗದಿತ ಚಟುವಟಿಕೆಗಳ ಜೊತೆಗೆ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮದ ಭಾಗವಾಗಿ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಗ್ರಂಥಾಲಯ ಚಟುವಟಿಕೆಗಳಿಗೆ ಹೊಸ ಆಯಾಮ. ಅದನ್ನು ಇಪ್ಪತ್ತೆರಡು ವರ್ಷಗಳಿಂದಲೂ ಪ್ರತಿ ತಿಂಗಳು ನಿಯಮಿತವಾಗಿ ನಡೆಸಿಕೊಂಡು ಬಂದು ಬಡಾವಣೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ. ಓದಿನ ಕುತೂಹಲಕ್ಕೆ ಇದು ದಾರಿಯಾಗಲಿದೆ ಎಂದರು.
ಸಮುದಾಯ ತಂಡ ಗಿರಿಶ್ ಕಾರ್ನಾಡ್ ಅವರ ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶಿಸಿರುವ ತುಘಲಕ್ ನಾಟಕ ಪ್ರದರ್ಶನವಾಯಿತು. ಸಮುದಾಯದ ಅಧ್ಯಕ್ಷ ಶಶಿಧರ್, ಪಶ್ವಿಮ ವಲಯ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಸಿ. ಪಾರ್ವತಮ್ಮ, ರಂಗಕರ್ಮಿ ಕೆ.ಎಸ್.ಡಿ.ಎಲ್. ಚಂದ್ರು ಮುಂತಾದವರು ಉಪಸ್ಥಿತರಿದ್ದರು.
@@@@@@@@@@@@@@@@@@@@

ನಿಜಕ್ಕೂ ನಿನ್ನ ಮೇಲೆ ತುಂಭಾ ಮನಸಾಗಿದೆ
ಹೇಗೇ ಹೇಳಲಿ.                                          ನೀನೊಪ್ಪದೆ ಬಯ್ದರೆ ತಿರಸ್ಕರಿಸಿದರೆ

ಆ ನೋವ ಹೇಗೆ ಸಹಿಸಲೀ
ಈ ಮನದಾಳದೊಲವಿಗೆ
ಏನೆಂದು ಹೆಸರಿಡಲಿ.
ನಿದ್ದೆಗಳಿಲ್ಲದ ರಾತ್ರೀ
ಇರುಳ ನಿಶೆಯೂ ನಿನ್ನ ಮುಗುಳ್ನಗೆಯ
ಹೊನಲಲ್ಲಿ ಬೆಳಕಾಗಿ ಕಾಡುತ್ತದೆ
ನೀ ನನ್ನ ಒಲವು ತಾನೆ.
ಹೇಳೇ
ಕಾವ್ಯವನೆ ಉಲಿವ ಜಾಣೆ
ಹೃದಯ ಕುದಿವ ಕುಲುಮೆ ಕೆಂಡ
ವಿರಹದುರಿಯ ಹೊಂಡ..
ಅಗ್ನೀಕುಂಡವಾಗಿದೆ.
ಸವೆಸಿ ಬಂದ ದಾರಿಯಲ್ಲೆಲ್ಲಾ..
ನಿನ್ನ ಗುರುತಿನ ನೆನಪುಗಳ ಬಳ್ಳಿ…
ವೃಕ್ಷ… ಘಮಲಿನ ಪುಷ್ಪ
ಹೇಗೆ ದಾಟಲಿ ಈ ಬದುಕ.. ಪ್ರೀತಿಯದೆಯಲ್ಲರಳಿದ ಉತ್ಥಾನದ ನೆನಪ
ಹೇಗೆ ಬಂದರೂ.. ಸುತ್ತಿ ನಿಂತರೂ
ಬಳಸಿ ಬಂದರೂ ಕಾಡುವುದು…
ನಿಜಕ್ಕೂ ನಿನ ಮೇಲೆ ಮನಸಾಗಿದೆ
ಕನಸುಗಳಲ್ಲಿ ಕಾಡದೆ ಬಂದು ಮುದ್ದಿಸಿಬಿಡೆ

ನಿನದೇ ನೆನಪು ಹೊತ್ತು ಗೊತ್ತಿಲ್ಲದೆ ಕಾಡುವುದು. ಹಾಡುವುದು ನಿನದೇ ನೆನಪ
ಮಂಜುಮಾತಿನ ಮಲ್ಲಿಗೆ ನಿನ ಸೂಗಸ

ಹೇಳೇ ಕಿನ್ನರಿ.. ನನ್ನೊಲವ ಸುಂದರಿ
ನೀ.. ನನ್ನ ಪ್ರೀತಿಸುವ ತಾನೆ.. ನಾ ಕಾರ್ಮುಗಿಲ ಕಪ್ಪಾದರೂ ನೀನು ಹೊಳೆವ ಬಿಳಿ ಮುಗಿಲು
ಅಂದುಕೊಳ್ಳಲೇ ಇನ್ನು ನನಗಿಲ್ಲಾ ದಿಗಿಲು
ನೀನು ಅಪ್ರತಿಮ ಸುರಸುಂದರಿಗೂ ಮಿಗಿಲು
ತೆರೆದಿದೆ ನಿನ ಸ್ವಾಗತಕೆ
ಎಂದೂ ನನ್ನ ತೆರೆದೆದೆಯ ಬಾಗಿಲು

ಹೊತ್ತು ಗೊತ್ತಿನ ಪರಿವೇ ಏತಕೆ ಪರಿಮಳ
ನೀ ಬರದಿದ್ದರೆ ಮನ ತಾಳದು ತಳಮಳ
ಬಂದು ಬೀಡೆ ನಲ್ಲೆ ನಸು ನಾಚಿ ನಿಲ್ಲೆ
ನನ್ನೆದೆಯ ಅಂಗಳದಿ ಆಡೋಣ ನಾವಿಬ್ಬರು ಕುಂಟೋಬಿಲ್ಲೆ
ಹೇಳಿಬಿಡಲೇ.. ನಿನ ಮೇಲೆ ಮನಸಾಗಿದೆ..
ಮುನಿಸು ತೋರದೆ..
ಮುಖ ಮುತ್ತಿದ ಮುಂಗುರುಳೊಳಗೆ
ನಕ್ಕು ರಮಿಸಿಬಿಡೇ. ಒಮ್ಮೆ..
ಹಾಗೇ. ಕ್ಷಮಿಸಿ ಬಿಡೆ ನನ್ನ ಸುಮ್ನೆ
(ನೀನು)

ಎಚ್. ಕೆ. ನಟರಾಜ