ಕೈವಾರ ನಾರೇಯಣ ತಾತಯ್ಯ ಯತೀಂದ್ರರ ಸ್ಮರಣೆ.
ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ
ಬೆಂಗಳೂರು ಗ್ರಾ ಜಿಲ್ಲೆ ಆಗಸ್ಟ್ 05
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣ ಕಸಾಪ ನಗರ ಘಟಕ ಉದ್ಘಾಟನೆ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಮನಸ್ಸುಗಳಿಗೆ ಕಂಪನ್ನು ಅರಳಿಸುತ್ತಿರುವ ಬಗ್ಗೆ ತುಂಬಾ ಶ್ಲಾಘನೀಯ ಎಂದು ಪುರಸಭಾ ಉಪಾಧ್ಯಕ್ಷ ಎಂ ಕೇಶವಪ್ಪ ತಿಳಿಸಿದರು.
ಅವರು ವಿಜಯಪುರ ಪಟ್ಟಣದ ಕೆರೆಕೋಡಿ ರಸ್ತೆಯಲ್ಲಿರುವ ವೇಮಣ್ಣ ನವರ ಸ್ವಗೃಹದಲ್ಲಿ ಶ್ರೀ ಕ್ಷೇತ್ರ ಕೈವಾರ ನಾರೇಯಣ ತಾತಯ್ಯ ಯತೀಂದ್ರ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್ಎಸ್ ರುದ್ರೇಶ್ ಮೂರ್ತಿ ರವರು ಮಾತನಾಡುತ್ತಾ ಸಾವಿರಾರು ವರ್ಷಗಳ ಹಿಂದೆ ಮಹಾಕವಿ ರನ್ನ ರವರು ಬಳೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಒಂದು ಬಾರಿ ಗುರುಗಳ ಪಾಠ ಪ್ರವಚನ ಮಾಡುತ್ತಿದ್ದನ್ನು ನೋಡಿಕೊಂಡು ಮಹಾಕವಿಗಳಾದರು. ಅದೇ ರೀತಿ ಬಲಿಜ ಜನಾಂಗದ ಆರಾಧ್ಯ ದೈವ ನಾರೇಯಣ ಯತೀಂದ್ರ ತಮ್ಮ ತಂದೆಯ ಜೊತೆಗೂಡಿ ಬಳಿ ವ್ಯಾಪಾರ ಮಾಡುತ್ತಿದ್ದರು. ಬಳೇ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾಗ ಹಣ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು ಇಲ್ಲದಿದ್ದರೆ ವಾಪಸ್ಸು ಬರುತ್ತಿದ್ದರು. ಮನೆಯಲ್ಲಿ ವಿರಸಗೊಂಡಾಗ ಹೊರಗಡೆ ಬಂದು ತಮ್ಮ ತಪಸ್ಸಿನ ಶಕ್ತಿಯಿಂದ ಆದ್ಯಾತ್ಮಿಕವಾಗಿ ಮತ್ತು ಕಾಲ ಜ್ಞಾನಿಯಾಗಿ ವರಕವಿಗಳಾಗಿ ಪ್ರಜ್ವಲಿಸಿದರು.ತಾತಯ್ಯನವರ ಬಗ್ಗೆ ಪೀಠವನ್ನು ರಚಿಸಿ ಅಧ್ಯಯನ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಪುರಸಭಾ ಸದಸ್ಯ ಹನಿಫುಉಲ್ಲಾ ರವರು ಕೈವಾರ ತಾತಯ್ಯ ರವರ ಬಗ್ಗೆ ಉಪನ್ಯಾಸ ನೀಡುತ್ತಾ ಕೈವಾರ ಕ್ಷೇತ್ರವು ರಾಮಾಯಣ ಮಹಾಭಾರತಕ್ಕೆ ಪ್ರಸಿದ್ಧಿಯಾಗಿದೆ. ಭೀಮನು ಬಂದು ಬಕಾಸುರನ ಮೇಲೆ ಬಂಡೆ ಮುಚ್ಚಿದನೆಂದು ನಿರ್ದೇಶನವಿದೆ . ಸೀತಾಮಾತೆಯು ಇಲ್ಲಿ ಬಂದಿದ್ದಾರೆಂದು ಪುರಾಣಗಳು ಹೇಳುತ್ತವೆ.. ಕೈವಾರ ತಾತಯ್ಯನವರು ಅಂದಿನ ವಡಿಗೇನಹಳ್ಳಿ ತೀವ್ರ ಕ್ಷಾಮ ಬಂದಾಗ ಅವರ ಶಿಷ್ಯನಾದ ಪೂವಯ್ಯ ನವರು ಮನವಿ ಮೇರೆಗೆ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ತಪಸ್ಸು ಮಾಡಿದಾಗ ವರುಣನ ಕೃಪೆಯಿಂದ ಮಳೆ ಬಂದಿತ್ತು. ತಿರುಪತಿಯಲ್ಲಿ ಅರ್ಚಕರ ತಪ್ಪನ್ನು ಮನ್ನಿಸಿ ಬಾಲಾಜಿಯ ತೇರನ್ನು ಚಲಿಸುವಂತೆ ಮಾಡಿದರು. ಕಲಿಯುಗದಲ್ಲಿ ಮುಂದೆ ನಡೆಯುವ ದೃಶ್ಯಾವಳಿಗಳನ್ನು ಕಾಲಜ್ಞಾನದಲ್ಲಿ ರಚಿಸಿದರು . ಇವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಗೀತ ನಿರ್ದೇಶಕ ಎಂ ವಿ ನಾಯ್ಡು ಮತ್ತು ಸಂಗಡಿಗರು ತಾತಯ್ಯ ರವರ ಗೀತೆಗಳು ಹಾಡಿದರು.
ಪರಿಷತ್ತಿನ ಅಧ್ಯಕ್ಷ ಜೆ ಎನ್ ಶ್ರೀನಿವಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದ ಪ್ರಾಯೋಜಕರು ವೇಮಣ್ಣ ಮತ್ತು ಕುಟುಂಬದವರು ನೆರವೇರಿಸಿದರು . ಪುರಸಭಾ ಸದಸ್ಯರಾದ ಸಿಎಂ ರಾಮು ಬೈರೇಗೌಡ ಎಂ ರಾಜಣ್ಣ ಶ್ರೀ ರಾಮಣ್ಣ ಮತ್ತು ಪರಿಷತ್ತಿನ ಪದಾಧಿಕಾರಿಗಳು ಜನಾಂಗದ ಮುಖಂಡರುಗಳು ಉಪಸ್ಥಿತರಿದ್ದರು