ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದೇವರಾಜ್ ಉಪಾಧ್ಯಕ್ಷರಾಗಿ ಮಮತಾ ಮಂಜುನಾಥ್.

ವಿಜಯ ದರ್ಪಣ ನ್ಯೂಸ್, ಪಿರಿಯಾಪಟ್ಟಣ

ಮೈಸೂರು ಜಿಲ್ಲೆ. ಆಗಸ್ಟ್ 02

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಎರಡನೇ ಅವಧಿಗೆ ಬುಧವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೋಗನಹಳ್ಳಿ ಪಿ. ದೇವರಾಜು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ. ಎಸ್.ಸದಾನಂದ ನಾಮಪತ್ರ
ಸಲ್ಲಿಸಿದರು.


ಜೋಗನಹಳ್ಳಿ. ಪಿ. ದೇವರಾಜ್ 12 ಮತಗಳನ್ನು ಪಡೆದು ಅಧ್ಯಕ್ಷರಾದರು. ಪ್ರತಿಸ್ಪರ್ಧಿ ಕೆ. ಎಸ್.ಸದಾನಂದ ರವರು 9 ಮತಗಳನ್ನು ಪಡೆದು ಪರಾಭವ ಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಮತಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್ ಸೋಮಯ್ಯ ಘೋಷಣೆ ಮಾಡಿದರು.

ಗೆಲುವು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಹಿಸಿದರು.

ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ  ಶುಭ ಹಾರೈಸಿದರು.

ನೂತನ ಅಧ್ಯಕ್ಷ ಜೋಗನಹಳ್ಳಿ ಪಿ. ದೇವರಾಜ್ ಮಾತನಾಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಗ್ರಾಮ ಪಂಚಾಯತಿ ಸದಸ್ಯರಿಗೆ ಪರೋಕ್ಷವಾಗಿ ಸಹಕಾರ ನೀಡಿದ ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಸೇವಾ ಅವಧಿಯಲ್ಲಿ ಸದಸ್ಯರ ಸಹಕಾರ ಪಡೆದು ಪಂಚಾಯಿತಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಸದಸ್ಯರಾದ ದೀಪೂ, ಶಿವಕುಮಾರ್, ನಂದಿನಿ, ಬಸವರಾಜು, ಮಂಜುನಾಥ್, ಪವಿತ್ರ, ರಂಜಿತಾ, ಜಗದೀಶ್, ಜ್ಯೋತಿ, ರುಕ್ಕಣ್ಣ, ರಮೇಶ್, ಸರೋಜಾ, ಮಾನಸಾ, ಸರಿತಾ, ಚಂದ್ರ, ರಾಣಿ, ತೋಪೆಗೌಡ, ಪಿಡಿಒ ದೇವರಾಜೇಗೌಡ, ಸಿಬ್ಬಂದಿ ಸೀನಾ, ಸತ್ಯಣ್ಣ, ಮುಖಂಡರಾದ ರಹಮದ್ ಜಾನ್ ಬಾಬು, ಪುಟ್ಟರಾಜು, ಬಿ.ಟಿ ಸಣ್ಣಸ್ವಾಮಿಗೌಡ, ಈರೇಗೌಡ, ಲೋಕೇಶ್, ರಮೇಶ್, ರಾಜಶೇಖರಯ್ಯ, ಗೋವಿಂದೇಗೌಡ, ಸೋಮೇಗೌಡ, ಮಲ್ಲೇಶ್, ಕುಮಾರ್, ರುಕ್ಮಗಂದಾಚಾರ್, ಶಂಕರ್,ವೆಂಕಟೇಶ್ ಇದ್ದರು.