ಜೆಡಿಎಸ್ ಮಡಿಲಿಗೆ ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ.
ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ, ಬೆಂಗಳೂರು ಗ್ರಾ ಜಿಲ್ಲೆ ಜುಲೈ 31
ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವರಲಕ್ಷ್ಮಿ .ಕೆ ಅಧ್ಯಕ್ಷೆಯಾಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷೆ ರಿಜ್ವಾನ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಬೂದಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಜೆಡಿಎಸ್ ಮಡಿಲಿಗೆ ಬಂದಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್ ಮಾತನಾಡಿ ಸಂವಿಧಾನದ ಅಡಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶವಿದೆ, ಅದರಂತೆಯೇ ಆಯ್ಕೆಯಾದ ನಮ್ಮ ಪಕ್ಷದ ನೂತನ ಅಧ್ಯಕ್ಷೆವರಲಕ್ಷ್ಮೀ.ಕೆ ಅವರಿಗೆ ಅಭಿನಂದಿಸಿ ಬೂದಿಗೆರೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಗಣ್ಯರು ಹಾಗೂ ಮುಖಂಡರಿಂದ ಸನ್ಮಾನ ಸ್ವೀಕರಿಸಿ ನೂತನ ಅಧ್ಯಕ್ಷೆ ವರಲಕ್ಷ್ಮಿ .ಕೆ ಮಾತನಾಡಿ ಬೂದಿಗೆರೆ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಲ್ಲಾ ಸದಸ್ಯರನ್ನು ಒಳಗೊಂಡು ಗ್ರಾಮದ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ರಿಜ್ವಾನ ಮಾತನಾಡಿ ಗ್ರಾಮಸ್ಥರು ಹಾಗೂ ಸರ್ವ ಸದಸ್ಯರು ಕೊಟ್ಟಿರುವ ಅಧಿಕಾರವನ್ನು ಸುದುಪಯೋಗ ಪಡಿಸಿಕೊಂಡು ಗ್ರಾಮೀಣ ಭಾಗದ ಎಲ್ಲ ವರ್ಗದವರ ಅಭಿವೃದ್ದಿಗೆ ಶ್ರದ್ದೆವಹಿಸಿ ಕೆಲಸ ಮಾಡುವೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಶ್ರೀನಾಥ್ ಗೌಡ, ಜೆಡಿಎಸ್ ಮುಖಂಡರಾದ ವೆಂಕಟೇಶಪ್ಪ, ಅಂಬಿಕಾ ನಾರಾಯಣಸ್ವಾಮಿ, ಅನಿಲ್ ಕುಮಾರ್, ಇಕ್ಬಾಲ್ ಭಾಷಾ, ಹಿತ್ತರಹಳ್ಳಿ ತ್ಯಾಗರಾಜ್ , ಹಂದರಹಳ್ಳಿ ಶ್ರೀನಿವಾಸ್, ಕೃಷ್ಣಮ್ಮ ಬಾಬು, ಮಾಜಿ ಅಧ್ಯಕ್ಷ ಮುನಿರಾಜು ಬೂದಿಗೆರೆ ಮುಖಂಡರಾದ ಗಣೇಶಣ್ಣ, ಮಂಜುನಾಥ್,ವೆಂಕಟೇಶ್ , ಚಾನ್ ಬಾಷಾ, ರಾಮಾಂಜನೇಯ ದಾಸ್, ಎಸ್ ಟಿಡಿ ರಮೇಶ್, ಆನಂದ್ ಕುಮಾರ್, ಮಹೇಂದ್ರ ಕುಮಾರ್, ಲೋಕೇಶ್, ಮುರುಳಿ, ಹತ್ತವುಲ್ಲಾ, ಎಲೆಕ್ಟ್ರಾನಿಕ್ ಹನುಮಂತಪ್ಪ, ತಿಪ್ಪಣ್ಣ, ಯುವ ಮುಖಂಡ ವಿಕಾಶ್, ಉಮೇಶ್, ಶೇಖರ್, ಸುಮಂತ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಓ ಹಾಗೂ ಗ್ರಾಮ ಸಿಬ್ಬಂದಿಗಳು ಇದ್ದರು.