ಡಾ.ಎ.ಪಿ.ಜೆ .ಅಬ್ದುಲ್ ಕಲಾಂರವರ ಪುಣ್ಯ ಸ್ಮರಣೆ

ವಿಜಯ ದರ್ಪಣ ನ್ಯೂಸ್, ವಿಜಯಪುರ.        ಬೆಂಗಳೂರು ಗ್ರಾ ಜಿಲ್ಲೆ  ಜುಲೈ 28

ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಡಿದ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ,ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿರವರ ಪಂಥಕ್ಕೆ ಸೇರಿದ ಡಾಎಪಿಜೆ ಅಬ್ದುಲ್ ಕಲಾಂ ರವರೆಂದು ವರ್ಣನೆ ಮಾಡುತ್ತಾ ವಿದ್ಯಾರ್ಥಿಗಳು ಸಹ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ವಿಶ್ರಾಂತ ಶಿಕ್ಷಕ ಕೆ.ಎಚ್ ಚಂದ್ರಶೇಖರ್ ರವರು ತಿಳಿಸಿದರು

ವಿಜಯಪುರ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಕರ್ನಾಟಕ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ವಿಶ್ರಾಂತ ಶಿಕ್ಷಕರ ಕೆಎಚ್ ಚಂದ್ರಶೇಖರ್ ರವರು ಡಾ. ಎಪಿಜೆ ಅಬ್ದುಲ್ ಕಲಾಂ ರವರ ಬಗ್ಗೆ ಉಪನ್ಯಾಸ ನೀಡುತ್ತಾ ಶ್ರೀಯುತರು 15 10 1931 ರಂದು ತಮಿಳುನಾಡಿನ ರಾಮೇಶ್ವರದಲ್ಲಿ ಜನಿಸಿದರು. ಇವರ ತಂದೆ ಜೈನೊಬ್ ದ್ದೀನ್ ತಾಯಿ ಅಶ್ಯೆಮಾ ಇವರು ಬಡ ಕುಟುಂಬದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಅವುಲ್ ಫಕೀರ್ ಜೈನೋ ಬುದ್ಧಿನ್ ಅಬ್ದುಲ್ ಕಲಾಂ. ವ್ಯಾಸಂಗ ಮಾಡುವಾಗ ದಿನಪತ್ರಿಕೆಯನ್ನು ಮನೆ ಮನೆಗೆ ಹಂಚಿ ತಮ್ಮ ವಿದ್ಯಾರ್ಥಿ ಜೀವನವನ್ನು ನಡೆಸಿದರು. ಇಸ್ಲಾಂ ಧರ್ಮಕ್ಕೆ ಸೇರಿದ್ದರು ಸಹ ಹಿಂದುತ್ವ ಧರ್ಮವನ್ನು ಪ್ರೀತಿಸುತ್ತಿದ್ದರು. ದೇವರಲ್ಲಿ ನಂಬಿಕೆ ಇಟ್ಟಿದ್ದರು ತಾಯಿಯಿಂದ ದಯೆಯನ್ನು ಕಲಿತರು. ಶಾಲೆಯಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಹುಡುಗ ಎಂದು ನಿಂದು ಹುಡುಗರ ಜೊತೆ ಕೂರಲು ಬಿಡುತ್ತಿರಲಿಲ್ಲ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಬರಬೇಕೆಂದು ಪ್ರೇರಣೆ ಮಾಡಿಕೊಂಡರು.

ಜುಲೈ 1992 ರಿಂದ 1999 ರವರೆಗೂ ಡಿಆರ್‌ಡಿಓ ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸಿದ್ದರು.. ಸುಮಾರು 40 ವರ್ಷಗಳ ಕಾಲ ಮಿಗಿಲಾಗಿ ರಕ್ಷಣಾತ್ಮಕ ಸಂಶೋಧನೆಯಲ್ಲಿ ತೊಡಗಿದರು . ಅಗ್ನಿ ರೆಕ್ಕೆಗಳು ಪುಸ್ತಕವನ್ನು ಬರೆದರು. 2002 ರಿಂದ 2007 ರ ವರೆಗೂ ಹನ್ನೊಂದನೇ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಶ್ರೇಷ್ಠ ವಿಜ್ಞಾನಿ ಶ್ರೇಷ್ಠ ವಿಜ್ಞಾನಿ, ಭಾರತದ ಹೆಮ್ಮೆಯ ಪುತ್ರ,ಭಾರತ ರತ್ನ ಪುರಸ್ಕೃತ ಪದ್ಮಭೂಷಣ್ ವೀರ ಸೇವರ್ಕರ್ ಮಿಸೈಲ್ ಮ್ಯಾನ್ ಇನ್ನು ಅನೇಕ ಪ್ರಶಸ್ತಿಗಳು ಡಾ. ಎಪಿಜೆ ಅಬ್ದುಲ್ ಕಲಾಂ ರವರಿಗೆ ಲಭಿಸಿದೆ.

ಶ್ರೀಯುತರು ಮಕ್ಕಳಿಗೆ ಬೋಧನೆ ಮಾಡುವಾಗ 27.7.2015 ರಂದು ಪರಿಷ್ಕರಣಿಗೊಂಡರು.
ನಮ್ಮ ದೇಶದಲ್ಲಿ ಅಂದಿನ ದಿನದಲ್ಲಿ ಕೇವಲ ಐದು ಪರ್ಸೆಂಟ್ ಸಾಕ್ಷರತಾ ಇತ್ತು ಆದರೆ ಇಂದು 85 ಪರ್ಸೆಂಟ್ ಸಾಕ್ಷರತರಾಗಿದ್ದಾರೆ ಎಂದು ಎಂದು ಸಂತಸ
ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಾದ ತಮಗೆ ಸರ್ಕಾರ ಎಲ್ಲಾ ವಿಧವಾದ ಸೌಕರ್ಯವನ್ನು ಒದಗಿಸಿದೆ . ಆ ಸೌಕರ್ಯಗಳನ್ನು ಬಳಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಕರೆ ನೀಡಿದರು.
ಪುಣ್ಯಸ್ಮರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯ ಅಧ್ಯಕ್ಷ ಚಿ. ಮಾ. ಸುಧಾಕರ್ ಅದ್ಯಕ್ಷತೆ ವಹಿಸಿದ್ದರು..

ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಕಾರ್ಯದರ್ಶಿ ಅರ್. ಮುನಿರಾಜು, ಕಾರ್ಯಾಧ್ಯಕ್ಷ ವಿ. ವಿಶ್ವನಾಥ್ ಮಾಮ, ಕೆ. ಮುರಳಿಧರ್ ಮಗು ಉಪಸ್ಥಿತರಿದ್ದರು.