ಹಾಲು ಉತ್ಪಾದಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ: ಬಮೂಲ್ ಪ್ರಭಾರ ಅಧ್ಯಕ್ಷ ಕೆಎಂ ಮಂಜುನಾಥ್.

ವಿಜಯ ದರ್ಪಣ ನ್ಯೂಸ್,  ಜುಲೈ 14

ದೇವನಹಳ್ಳಿ ,  ಬೆಂಗಳೂರು ಗ್ರಾ ಜಿಲ್ಲೆ

ಗ್ರಾಮೀಣ  ಭಾಗದಲ್ಲಿರುವ ರೈತರ ಜೀವನ ಆಧಾರ ಹೈನುಗಾರಿಕೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5/- ರೂ ಏರಿಕೆ ಮಾಡುವ ಭರವಸೆ ನೀಡಿದ್ದರು ಆದಷ್ಟು ಬೇಗ ಈಡೇರಿದರೆ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ಪ್ರಭಾರ ಅದ್ಯಕ್ಷ ಕೆ ಎಂ ಮಂಜುನಾಥ್ ( KMM) ಅಭಿಪ್ರಾಯಪಟ್ಟರು. 

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ಮೊದಲನೇ ಅಂತಸ್ಥಿನ ಕಟ್ಟಡ  ಮತ್ತು ನೂತನ ಸಭಾಂಗಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೇ ನೀಡಿ ಮಾತನಾಡಿ, ಸರ್ಕಾರ ಈಗಾಗಲೇ 85 ಪೈಸೆಯನ್ನು ಸರ್ಕಾರ ಕಡಿತ ಮಾಡಿದೆ ಪಶು ಆಹಾರದ ಬೆಲೆಗಳು ಗಗನಕ್ಕೇರಿರುವ ಕಷ್ಟಕಾಲದಲ್ಲಿ ಹಾಲಿನ ಬೆಲೆ ಇಳಿಕೆಯಿಂದ ರೈತರಿಗೆ ಬರೆ ಎಳೆದಂತಾಗಿದೆ.

ಬೆಂಗಳೂರು ಹಾಲು ಒಕ್ಕೂಟ ಸಭೆಯಲ್ಲಿ ಹೈನುಗಾರಿಕೆ ಅವಲಂಬಿತ ರೈತರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಬೀರಸಂದ್ರದ ಡೈರಿ ನಿರ್ಮಾಣಗೊಂಡು 73 ವರ್ಷದ ಜತೆಗೆ ಬೆಳ್ಳಿ ಹಬ್ಬದ ಆಚರಣೆಗೆ 2 ವರ್ಷ ಬಾಕಿ ಉಳಿದಿದೆ, ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.

ಡೈರಿ ಅದ್ಯಕ್ಷ ಮುರಳಿ ಮಾತನಾಡಿ, ಬೀರಸಂದ್ರ ಗ್ರಾಮದಲ್ಲಿ 1975 ರಲ್ಲಿ ಡೈರಿ ಪ್ರಾರಂಭವಾದರು, ಕಟ್ಟಡ ಮಾತ್ರ 1993ರಲ್ಲಿ ಸ್ಥಾಪನೆಯಾಗಿದೆ. ಈ ಹಿಂದೆ 100 ಲೀಟರ್ ನಿಂದ 800 ಕ್ಕೂ ಹೆಚ್ಚು ಲೀಟರ್ ಹಾಲು ಶೇಖರಣೆಯಾಗಿದೆ.

ಬೆಂಗಳೂರು ಡೈರಿಯಿಂದ 3 ಲಕ್ಷ ರೂ ಹಾಗೂ ಡೈರಿ ಉಳತಾಯ ಖಾತೆಯಿಂದ 8 ಲಕ್ಷರೂ ಸೇರಿ 11.65 ಲಕ್ಷ ರೂ ವೆಚ್ಚದಲ್ಲಿ ಪಿಠೋಪಕರಣಗಳು, ಮೊದಲನೇ ಅಂತಸ್ಥಿನ ಸಭಾಂಗಣದ ಕಟ್ಟಡ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ನಮ್ಮ ಗ್ರಾಮದಲ್ಲೇ ಸುಮಾರು 860ಕ್ಕೂ ಹೆಚ್ಚು ಹಸು, ಎಮ್ಮೆ, ಕುರಿ, ಮೇಕೆ ಮುಂತಾದ ಸಾಕುಪ್ರಾಣಗಳಿದ್ದು, ಜಾನುವಾರುಗಳ ಅಗತ್ಯ ಚಿಕಿತ್ಸೆಗೆ ದೂರದೂರಿನ ಕೊಯಿರ ಗ್ರಾಮಕ್ಕೆ ತೆರಳಬೇಕಿದ್ದು ಪಶುಚಿಕಿತ್ಸ ಆಸ್ಪತ್ರೆ ಗ್ರಾಮದಲ್ಲಿ ತೆರೆದರೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.
ಈ ಹಿಂದೆ 8 ರಿಂದ 10 ಗ್ರಾಮಗಳಿಂದ ರೈತರು ಬೀರಸಂದ್ರ ಡೈರಿಗೆ  ಹಾಲು ಸರಬರಾಜು ಮಾಡುತಿದ್ದರು, ನಮ್ಮ ಡೈರಿ ಲಾಭದಾಯಕ ಹಾಗೂ ಗುಣಮಟ್ಟದ ಹಾಲು ಶೇಖರಿಸಿ ಬೆಂಗಳೂರು ಹಾಲು ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಜಿ.ಪಂ. ಮಾಜಿ ಅದ್ಯಕ್ಷ ಬೀರಪ್ಪ, ಕಾಂಗ್ರೇಸ್ ಮುಖಂಡ ರವಿ ಕುಮಾರ್,  ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ  ಎಸಿ.ನಾಗರಾಜು, ನಿರ್ದೇಶಕರಾದ  ಮಂಡಿಬೆಲೆ ರಾಜಣ್ಣ  , ಸಂಪಂಗಿ ಗೌಡ, ಬಿಡಿಸಿಸಿ  ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ತಾಲ್ಲೂಕು ಸೂಸೈಟಿ ನಿರ್ದೇಶಕ ಕಾಮೇನಹಳ್ಳಿ ರಮೇಶ್,, ಗ್ರಾ.ಪಂ. ಅದ್ಯಕ್ಷೆ ಗೌರಮ್ಮ ರಾಮಣ್ಣ, ಉಪಾದ್ಯಕ್ಷೆ ಕಾಂತಮುನಿರಾಜು, ಸದಸ್ಯರಾದ ಬೈರೇಗೌಡ, ಕೃಷ್ಣಮ್ಮ ಯಲ್ಲಪ್ಪ,  ಹೊಸೂರು ರವಿಕುಮಾರ್, ಸಿದ್ದಲಿಂಗಮೂರ್ತಿ, ಡೈರಿ ಅದ್ಯಕ್ಷ ಮುರಳಿ,  ಮುಖ್ಕ ಕಾರ್ಯನಿರ್ವಾಹಕ  ನಾಗರಾಜು, ನಿರ್ದೇಶಕರಾದ ಮುರಳಿ, ಸಿದಪ್ಪ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಮುನೇಗೌಡ, ಲೋಕೇಶ್, ಕಾಂತರಾಜು, ಕೆಂಪೇಗೌಡ, ಚನ್ನಕೃಷ್ಣಪ್ಪ. ಕೆಂಪಮ್ಮ, ಆಂಜಿನಮ್ಮ ಹಾಗೂ ಹಾಲು ಉತ್ಪಾಧಕರು, ಗ್ರಾಮಸ್ಥರಿದ್ದರು.