ಕೆ ಎಸ್‍ ಆರ್ ಟಿ ಸಿ ಯಲ್ಲಿ ಡಿಜಿಟಲ್ ಇಂಡಿಯಾ ಕ್ಯಾಶ್ ಲೇಸ್ ವ್ಯವಸ್ಥೆ ಜಾರಿಗೆ ತರಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒತ್ತಾಯ.

ವಿಜಯ ದರ್ಪಣ ನ್ಯೂಸ್                                   ಬೀದರ ಜೂ. 16,

ಇಡೀ ದೇಶವೆ ಡಿಜಿಟಲ್ ಇಂಡಿಯಾ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಕ್ಯಾಶಲೆಸ್ ವ್ಯವಹಾರ ನಡೆಸುತ್ತಿದೆ. ಆದರೆ ಕೆಎಸ್‍ಆರ್‍ಟಿಸಿಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಇತರೆ ಭಾಗದ ಸಂಸ್ಥೆಗಳು ಡಿಜಿಟಲ್ ಇಂಡಿಯ ಬಳಕೆ ಮಾಡದೇ ಪ್ರಯಾಣಿಕರಿಗೆ ಟಿಕೇಟ್ ಮೀಸಲಿರಿಸಲು ಮತ್ತು ಕೌಂಟರ್ ಮೂಲಕ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲಿಯವರಿಗೂ ನಗದು ಹಣದ ರೂಪದಲ್ಲಿಯೇ ಇರಿಸಿರುವುದು ವಿಷಾದಕರ ಸಂಗತಿಯಾಗಿದೆ.

ಪ್ರತಿಯೊಂದು ವ್ಯಾಪಾರ ವ್ಯವಹಾರದ ಅಂಗಡಿ ಮುಗ್ಗಟ್ಟುಗಳಲ್ಲಿ ಹೋಟೆಲ್ ತರಕಾರಿ, ಹಣ್ಣು-ಹಂಪಲು, ದಿನಸಿ ಅಂಗಡಿಗಳು ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳಿಗೆ ಗ್ರಾಹಕರ್ಯಿಂದ ಹಣ ಪಡೆಯಲು ಯುಪಿಎ ಅಡಿಯಲ್ಲಿ ಫೋನ್-ಪೇ, ಪೇಟಿಎಂ, ಗೂಗಲ್-ಪೇ, ಭೀಮ್ ಆ್ಯಪ್ ಸೇರಿದಂತೆ ಇತರೆ ಡಿಜಿಟಲ್ ಕ್ಯಾಶಲೆಸ್ ಹಣ ಪಾವತಿಸಲಾಗುತ್ತಿದೆ. ಈ ಕ್ಷಣದವರೆಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಗದು ಹಣದ ರೂಪದಲ್ಲಿ ವ್ಯವಹಾರ ನಡೆಸುತ್ತಿರುವುದು ದುರ್ದೈವದ ವಿಷಯವಾಗಿದೆ. ಬೀದರನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಯಾವುದೇ ಬ್ಯಾಂಕಿನ ಎಟಿಎಂ ವ್ಯವಸ್ಥೆಯೂ ಕೂಡ ಇಲ್ಲದಿರುವುದು ತೀವ್ರ ನಿರ್ಲಕ್ಷ್ಯಕ್ಕೊಳಪಟ್ಟಿರುವ ಸಂಸ್ಥೆಯಾಗಿದೆ.

ತಕ್ಷಣವೇ ಸಂಬಂಧಿತ ವ್ಯವಸ್ಥಾಪಕ ನಿರ್ದೇಶಕರು, ಸಂಸ್ಥೆಯ ರಾಜ್ಯಾಧ್ಯಕ್ಷರು ಮತ್ತು ಸಾರಿಗೆ ಇಲಾಖೆಯ ನೂತನ ಸಚಿವ ರಾಮಲಿಂಗಾರೆಡ್ಡಿಯವರು ತಕ್ಷಣವೇ ಕ್ರಮ ಕೈಕೊಂಡು ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕ್ಯಾಶಲೆಸ್ ವ್ಯವಸ್ಥೆ ಜಾರಿಗೊಳಿಸಿ ಆಯಾ ಪಟ್ಟಣ/ನಗರಗಳಿಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಟಿಕೆಟ್ ಮೀಸಲಿರಿಸಲು ಹಣ ಪಾವತಿಗಾಗಿ ಯುಪಿಎ ಕಲ್ಪಿಸಬೇಕೆಂದು ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನ (ರಿ) ದ ಅಧ್ಯಕ್ಷ ನಾಗಶೆಟ್ಟಿ ಧರಮಪುರ, ಪ್ರಗತಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಥ್ವರಾಜ ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.