ಅಪ್ಪನ ಧ್ಯಾನ ಮತ್ತು ಮಗಳು ಶೈಲ ಕೃತಿಗಳು ಲೋಕಾರ್ಪಣೆ
ವಿಜಯ ದರ್ಪಣ ನ್ಯೂಸ್
ಬೆಂಗಳೂರು: ಗಾಂಧಿನಗರದಲ್ಲಿ ಇರುವ ಬಸಂತ್ ರೆಸಿಡೆಸ್ಸಿ ಸಭಾಂಗಣದಲ್ಲಿ ಶ್ರೀಮತಿ ರೇವತಿ ಉಪ್ಪಿನ ರವರ ವಿರಚಿತ ಅಪ್ಪನ ಧ್ಯಾನ , ಮಗಳು ಶೈಲ ಎರಡು ಕೃತಿ ಬಿಡುಗಡೆ ಮಾಡಿದವು.
ಯಾದಗಿರಿ ಜಿಲ್ಲೆಯ ಪೌರಯುಕ್ತ ಸಂಗಮೇಶ್ ಉಪಾಸೆ, ಹಿರಿಯ ಸಾಹಿತಿ ರಮೇಶ್ ಸುರ್ವೆ, ಕೃಷಿಕ ಸಾಹಿತಿ ಸಿದ್ದರಾಮು ಉಪ್ಪಿನ, ಲೇಖಕಿ ರೇವತಿ ಉಪ್ಪಿನ, ಪ್ರೋಫೆಸರ್ ರಾಗಂ, ಶ್ರೀಮತಿ ಪದ್ಮಶ್ರೀ, ಶ್ರೀಮತಿ ಹೇಮಾರವರು ಪುಸ್ತಕಗಳನ್ನು ಲೋಕರ್ಪಣೆ ಮಾಡಿದರು.
ಸಂಗಮೇಶ್ ಉಪಾಸೆರವರು ಮಾತನಾಡಿ ಅವಿಭಕ್ತ ಕುಟುಂಬಗಳು ಆಧುನಿಕ ಜೀವನ ಶೈಲಿಯಿಂದ ಕುಟುಂಬ ಒಡೆದು, ಮನೆಯ ವಾತವರಣ ಕಲುಷಿತವಾಗಿದೆ. ತಂದೆ, ತಾಯಿ ಮಕ್ಕಳ ನಡುವೆ ಇರುವ ಸಂಭಂದ ಎಂದು ಕಡಿಮೆಯಾಗುವುದಿಲ್ಲ. ಪ್ರಶಸ್ತಿ ಹುಡುಕಿಕೊಂಡು ಬರಬೇಕು, ಅದರ ಹಿಂದೆ ನಾವು ಹೋಗಬಾರದು, ಜನರ ಪ್ರೀತಿ, ವಿಶ್ವಾಸವೇ ಡೊಡ್ಡ ಪ್ರಶಸ್ತಿ.
ವಚನ ಸಾಹಿತ್ಯ, ದಾಸ ಸಾಹಿತ್ಯ ಕರ್ನಾಟಕ, ಕನ್ನಡ ಭಾಷೆಗೆ ವಿಶೇಷ ಕೂಡುಗೆ ನೀಡಿದೆ. ಬುದ್ದ,ಬಸವ ಅಂಬೇಡ್ಕರ್ ರವರ ಜೀವನ ಸಾಧನೆಗಳು ಇಂದಿಗೂ ಶಾಶ್ವತವಾಗಿ ನಮ್ಮ ಜೀವನದಲ್ಲಿ ಹಾಸುಹೊಕ್ಕಿದೆ ಎಂದು ಹೇಳಿದರು.
ಸಾಹಿತಿ ರಮೇಶ್ ಸುರ್ವೆ ಮಾತನಾಡಿ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಡೊಡ್ಡದು. ಕುಟುಂಬದಲ್ಲಿ ಸಾಹಿತ್ಯ ಮತ್ತು ಸಾಹಿತಿಗಳು ಇದ್ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಯುವ ಸಮುದಾಯ ಸಾಹಿತ್ಯ ಪುಸ್ತಕಗಳನ್ನು ಓದಬೇಕು, ದೇಶ ಸುತ್ತು ಅಥವಾ ಕೋಶ ಓದು ಎಂಬಂತೆ ಮೊಬೈಲ್ ಎಂಬ ಮಾಯಜಾಲದಿಂದ ಹೊರಬಂದು ಪುಸ್ತಕಗಳನ್ನು ಓದಿದರೆ ಜ್ಞಾನದ ಬೆಳವಣಿಗೆ ಜೊತೆಯಲ್ಲಿ ಮಾನಸಿಕವಾಗಿ ಇರಬಹುದು ಎಂದು ಹೇಳಿದರು.
ಶ್ರೀಮತಿ ರೇವತಿ ಉಪ್ಪಿನ ಮಾತನಾಡಿ ಡೊಡ್ಡ ಕುಟುಂಬ ನಮ್ಮದು 200ಎಕರೆ ಜಮೀದ್ದಾರರಾಗಿದ್ದೇವೆ ನಾನು ಮದುವೆಯಾದ ನಂತರ ನನ್ನ ಪತಿಯವರ ಸಹಕಾರದಿಂದ ಸಾಹಿತ್ಯದ ಕುರಿತು ಹವ್ಯಾಸ ಬೆಳಸಿಕೊಂಡೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಬರೆಯಲು ಆರಂಭಿಸಿದೆ ಇಂದು ಕಾದಂಬರಿ ಮತ್ತು ಕವನ ಸಂಕಲನ ಬರೆದ್ದಿದ್ದೇನೆ.
ಮಹಿಳೆಯರು ಸಾಹಿತ್ಯದಲ್ಲಿ ಅಭಿರುಚಿ ಬೆಳಸಿಕೊಳ್ಳಿ ಎಂದು ಹೇಳಿದರು.