ಐತಿಹಾಸಿಕ ಇತಿಹಾಸ ಇರುವ ಸಾರಕ್ಕಿ ಊರಹಬ್ಬ.
ವಿಜಯ ದರ್ಪಣ ನ್ಯೂಸ್…
ಬೆಂಗಳೂರು: ಜಯನಗರ ಸಾರಕ್ಕಿ ಗ್ರಾಮದಲ್ಲಿ ಐತಿಹಾಸಿಕ ಇತಿಹಾಸವಿರುವ ಸಾರಕ್ಕಿ ಊರ ಹಬ್ಬ ಮತ್ತು ಶ್ರೀ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ .
ಶ್ರೀ ಸಪಾಲಮ್ಮ, ಶ್ರೀ ಅಣ್ಣಮ್ಮ, ಶ್ರೀ ಪಟ್ಟಾಲಮ್ಮ ದೇವಿಗೆ ಸುಮಂಗಲಿಯರಿಂದ ಬೆಲ್ಲದ ದೀಪಾ ಮತ್ತು ಹೂವಿನ ಕಳಸ ಹೊತ್ತು ಸಾವಿರಾರು ಮಹಿಳೆಯರು ಸಾರಕ್ಕಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಸಾರಕ್ಕಿ ಊರ ಹಬ್ಬ ಒಂದು ವಾರಗಳ ಕಾಲ ಜರುಗುತ್ತದೆ .
ವಿವಿಧ ಸಾಂಸ್ಕೃತಿಕ ಕಲಾ ಉತ್ಸವ ಮತ್ತು ಸಾರಕ್ಕಿಯಲ್ಲಿ ಗ್ರಾಮ ದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ಒಂದು ವಾರದ ಕಾಲ ಜರುಗಲಿದೆ.
ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್ ಮಾತನಾಡಿ ಸಾರಕ್ಕಿ ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸಾರಂಗಧರ ಮಹಾರಾಜರು ನೆಲ ನಿಂತ ಕ್ಷೇತ್ರವಾಗಿದೆ. 9ನೇ ಶತಮಾನದಲ್ಲಿ ಸಾರಕ್ಕಿ ಗ್ರಾಮದ ಕುರಿತು ಶಿಲಾಶಾಸನಗಳಲ್ಲಿ ಉಲ್ಲೇಖವಿದೆ ,ಸಾರಕ್ಕಿ ಗ್ರಾಮ ಊರ ಹಬ್ಬ ಪ್ರತಿ ಎರಡು ವರ್ಷಕ್ಕೆ ಅದ್ದೂರಿಯಾಗಿ ಅಚರಿಸಲಾಗುತ್ತದೆ ಎಂದರು.
ಗುರುವಾರ ರಾತ್ರಿ 43ಪಲ್ಲಕ್ಕಿಗಳು ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆಯಲ್ಲಿ ಶುಕ್ರವಾರ ಬೆಳಗ್ಗೆ ಸಹ ನಡೆಯುತ್ತದೆ.
ಜನರು ತಮ್ಮ ಜೀವನದಲ್ಲಿ ಸುಖ,ಶಾಂತಿ ನೆಮ್ಮದಿಯಿಂದ ಬದುಕಲು ದೇವರ ಆಶೀರ್ವಾದ ಮುಖ್ಯ, ಸಕಲ ಇಷ್ಟಾರ್ಥ ನೇರವೆರಲಿ ಹಾಗೂ ಸಿರಿ ಸಂಪತ್ತು ಎಲ್ಲರಿಗೂ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸಾರಕ್ಕಿ ಗ್ರಾಮದ ಮುಖಂಡರುಗಳಾದ ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಲಕ್ಷ್ಮೀನಟರಾಜ್, ಮಂಜುನಾಥ್ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ನಾರಾಯಣಗೌಡ, ಡಿ.ಎಂ.ಗೋಪಾಲ್ , ಸಚಿವರಾದ ರಾಮಲಿಂಗಾರೆಡ್ಡಿ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು.