ಹಳ್ಳಿಗಟ್ಟು ಗ್ರಾಮದ ವಾರ್ಷಿಕ ಬೋಡು ನಮ್ಮೆ… ಕೆಸರು ಎರಚಾಟ ಇಲ್ಲಿನ ಆಕರ್ಷಣೆ….. .

ಕೊಡಗು ಜಿಲ್ಲೆ 

ಸಾವಿರಾರು ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಗುಂಡ್ಯತ್ ದೇವರ ವಾರ್ಷಿಕ ಬೋಡ್ ನಮ್ಮೆ ದೇವರ ಉತ್ಸವ ಶನಿವಾರ ಭಾನುವಾರ ಶ್ರದ್ಧ ಭಕ್ತಿಯಲ್ಲಿ ಜರುಗಿತು.

ದೇವಾಲಯದ ಮುಂಭಾಗದ ಗದ್ದೆಯಲ್ಲಿ ವೇಷ ಧರಿಸಿದವರು ಪರಸ್ಪರ ಕೆಸರು ಎರಚಾಟ ಮಾಡಿಕೊಂಡು ವಾಲಗದೊಂದಿಗೆ ನೃತ್ಯ ಮಾಡಿ ನಂತರ ದೇವಾಲಯಕ್ಕೆ ಸಾಂಪ್ರದಾಯಿಕ ದೇವರ ಹಾಡುಗಳನ್ನು ಹಾಡುತ್ತಾ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಭಕ್ತಿ ಭಾವದಿಂದ ಶ್ರೀ ಭದ್ರಕಾಳಿ ದೇವರಿಗೆ ಪೂಜಿ ಸಲ್ಲಿಸಿದ ನಂತರ ಹಬ್ಬ ಕೊನೆಗೊಂಡಿತು.