ರೇಪ್ ಮಾಡಿ, ಮರ್ಡರ್ರೂ ಮಾಡಿ ಬೇಜಾನ್ ದುಡ್ ಮಾಡುದ್ರೆ ಎಂಎಲ್ಎ ಆಗಬಹುದಾ…?
ಎಲೇಕ್ಷನ್ ಕಮಿಷನ್ನವರು ದಯವಿಟ್ಟು ಓಟ್ ಹಾಕಿ ಮತದಾನ ಪವಿತ್ರವಾದುದು ಅಂತಾ ಹೇಳ್ತಾ ಇದ್ದಾರೆ. ಆದ್ರೆ ಈ ಅಪವಿತ್ರ ಅಭ್ಯರ್ಥಿಗಳಲ್ಲಿ ಯಾರಿಗ್ ಓಟ್ ಹಾಕೋದು ಅಂತ ಮತದಾರ ತಲೆ ಮೇಲೆ ಕೈ ಹೊತ್ಕೊಂಡ್ ಕೂತಿದ್ದಾನೆ. ಅವ್ರು ಸುಮ್ನೆ ಕೂತಿದ್ರೂ ಪಕ್ಷಗಳು ಬಿಡಬೇಕಲ್ಲ. ಕಾಂಗ್ರೆಸ್ನೋರ್ ಕೋಡುತಾರ್ರೆ್ ಎರಡು ಸಾವ್ರ ಕೊಡ್ತಾರೆ. ಬಿಜೆಪಿಯವ್ರು ರ್ತಾರೆ ಮೂರ್ ಸಾವ್ರ ಕೊಡ್ತಾರೆ. ಜೆಡಿಎಸ್ ನೋರ್ ರ್ತಾರೆ ನಮ್ದು ಬಡವರ ಪಕ್ಷ ಅಂತ ಒಂದ್ ಸಾವ್ರ ಕೊಡ್ತಾರೆ. ಇತರೆ ಪಕ್ಷಗಳೆಲ್ಲಾ ಗುಡ್ಡೆ ಹಾಕುದ್ರೂ ಒಂದ್ ಸಾವ್ರ ಬರುತ್ತೆ. ಏಳು ಸಾವ್ರ ಆಯ್ತು. ಯಾರಿಗಾನಾ ಓಟ್ ಹಾಕೋಣ ಅಂದ್ರೇ ಯಾರೂ ಸಭ್ಯ, ಜನರ ಬಗ್ಗೆ ಕಾಳಜಿ ಇರೋ ಅಭ್ಯರ್ಥಿನೇ ಕಾಣಲ್ಲ. ಈಗ ನೋಡಿ ಎಲ್ಲಾ 224 ಕ್ಷೇತ್ರಗಳಿಗೆ ನ್ಯಾಷನಲ್ ಪಕ್ಷ, ಪ್ರಾದೇಶಿಕ ಪಕ್ಷ, ಇಂಡಿಪೆಂಡೆಂಟ್ ಅಭ್ಯರ್ಥಿಗಳು ಅಂತ 2615 ಜನ ಎಲೆಕ್ಷನ್ಗೆ ನಿಂತಿದ್ದಾರೆ. ಅದರಲ್ಲಿ 404 ಅಭ್ಯರ್ಥಿಗಳು ಯಾವತ್ತಾದ್ರೂ ಒಳಗೆ ಹೋಗಲೇಬೇಕಾದ ಸೀರಿಯಸ್ ಕೇಸ್ ಇರೋರು ಅದರಲ್ಲಿ ನಾನ್ ಬೈಲೆಬಲ್ ಅಪರಾಧ. ಇದರಲ್ಲಿ ರಾಜಕೀಯ ಪ್ರೇರಿತ ಕೇಸ್ಗಳು ಹಲ್ಲೆ, ಕೊಲೆ, ಕಿಡ್ನಾಪ್, ರೇಪ್ ನಂತಹ ಕೇಸ್ಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ನ್ಯಾಷನಲ್ ಪಕ್ಷವಾದ ಕಾಂಗ್ರೆಸ್ನಿAದ 122 ಜನ, ಬಿಜೆಪಿಯಿಂದ 90 ಜನ, ಜೆಡಿಎಸ್ ನಿಂದ 30 ಜನ, ಆಮ್ ಆದ್ಮಿ ಪಕ್ಷದಿಂದ 48 ಜನ ಕ್ರಿಮಿನಲ್ ಮೊಕದ್ದಮೆ ಇರುವ ಅಭ್ಯರ್ಥಿಗಳಿದ್ದಾರೆ.
ಈ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ಪಕ್ಷಗಳಿಗೂ ಒಂದು ನಿರ್ದೇಶನ ನೀಡಿತ್ತು. ಆದರೇ ಯಾವುದೇ ಪಕ್ಷಗಳು ಅದನ್ನು ಪಾಲಿಸಿಲ್ಲ. ಹಳೇ ಪದ್ಧತಿಯಲ್ಲೇ ಹಳೆ ಕ್ರಿಮಿನಲ್ಗಳ ಜತೆ ಹೊಸ ಕ್ರಿಮಿನಲ್ಗಳಿಗೂ ಮಣೆ ಹಾಕಿವೆ. ಅದಕ್ಕೆ ಕೊಡುವ ಕಾರಣವೂ ಬಾಲಿಷವಾಗಿರುತ್ತದೆ. ಆತ ತುಂಬಾ ತುಂಬಾ ಸಮಾಜ ಸೇವೆ ಮಾಡಿದ್ದಾನೆ. ಆತನಿಗೆ ಆ ಪ್ರದೇಶದಲ್ಲಿ ತುಂಬಾ ಪಾಪುಲ್ಯಾರಿಟಿ ಇದೆ. ಅವನ ಪಾಪುಲ್ಯಾರಿಟಿಗೆ ಕರುಬೋ ಜನ ಸುಖಾಸುಮ್ಮನೆ ಆಪಾದನೆ ಮಾಡಿ ರಾಜಕೀಯ ಪ್ರೇರಿತ ಕೇಸ್ಗಳಲ್ಲಿ ಫಿಟ್ ಮಾಡಿದ್ದಾರೆ. ಈ ರೀತಿಯ ಹತ್ತುಹಲವು ಕಾರಣಗಳನ್ನು ಕೊಡುತ್ತಾರೆ.
ಎಲ್ಲಾ ರಾಜಕೀಯ ಪಕ್ಷಗಳೂ ಕ್ರಿಮಿನಲ್ಸ್ಗಳಿಗೆ ಈ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿದೆಯೆಂದರೆ ರಾಜಕೀಯವೆಂದರೆ ಹಣ, ಅಧಿಕಾರ, ಅಹಂಕಾರ ಮತ್ಸರವಿರುವ ವ್ಯಕ್ತಿಗಳಿಗಷ್ಟೇ ಚುನಾವಣೆ ಅನ್ನುವ ಅನುಮಾನ ಮತದಾರನಿಗೆ ಬರುವುದು ಸಹಜ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪೈಪೋಟಿಯಲ್ಲಿವೆ. ಇರುವ 224 ಕ್ಷೇತ್ರಗಳಲ್ಲಿ ಈ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆರ್ಥಿಕ ಮೌಲ್ಯ ಕೋಟಿಗಳಲ್ಲಿದೆ ಯಾವೊಬ್ಬ ಅಭ್ಯರ್ಥಿಯೂ ಸಾವಿರ, ಲಕ್ಷಗಳ ಲೆಕ್ಕದಲ್ಲಿ ಇಲ್ಲ. ಮಿನಿಮಮ್ 10 ಕೋಟಿ, ಮ್ಯಾಕ್ಸಿಮಮ್ 1600 ಕೋಟಿ. ಇದು ರಾಮನ ಲೆಕ್ಕ. ಕೃಷ್ಣನ ಲೆಕ್ಕ ಅವರಿಗೇ ಗೊತ್ತಿರುತ್ತೆ. ಆದರೇ ರಾಜಕೀಯ ಪಕ್ಷಗಳ ಹೈಕಮಾಂಡ್ ಮಾತ್ರ ಹಣಬಲ, ತೋಳ್ಬಲ ಇದ್ದವನಿಗೆ ಟಿಕೆಟ್ ಕೊಟ್ಟಿದೆ. ರಾಜಕೀಯ ಪಕ್ಷವೊಂದು ಟಿಕೆಟ್ ಹಂಚಿಕೆಯಲ್ಲೇ ಸಾವಿರಾರು ಕೋಟಿ ಪಡೆದುಕೊಂಡಿದೆಯೆಂದು ಮತದಾರ ಮಾತನಾಡುತ್ತಾನೆ. ಆ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾನಾ…? ಸಾಧ್ಯವೇ ಇಲ್ಲ.
ಇದೇ 10 ರಂದು ಮತದಾನ ನಡೆಯಲಿದೆ. 13 ರಂದು ಮತ ಎಣಿಕೆ ಪ್ರಾರಂಭವಾಗಿ ಅದೇ ದಿನ ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶ ಹೊರಬಿದ್ದ ತಕ್ಷಣದಿಂದ ಜಾರಿಗೆ ಬರುವಂತೆ ಗೆದ್ದ ಪ್ರತಿನಿಧಿಗಳಿಗೆ ಇರುವ ಎರಡು ಕೋಡಿನ ಜತೆ ಇನ್ನೆರಡು ಕೋಡು ತತ್ಕ್ಷಣ ಬೆಳೆಯಲಿದೆ. ಈಗ ಮತದಾರನ ಮನೆ ಬಾಗಿಲಿಗೆ ಬಂದಿರುವ ಅಭ್ಯರ್ಥಿಗಳು ಫಲಿತಾಂಶ ಹೊರಬಿದ್ದ ತಕ್ಷಣ ಅಂತರ್ದಾನರಾಗುತ್ತಾರೆ.
ಎಲ್ಲಾ ಪಕ್ಷಗಳ ಹೈಕಮಾಂಡ್ ತಮ್ಮ ಬಾವುಟದಡಿ ಸ್ಪರ್ಧಿಸಿ ಗೆದ್ದ ಪ್ರತಿನಿಧಿಗಳನ್ನು ರೇಸಾರ್ಟ್ಗಳಿಗೆ ಶಿಫ್ಟ್ ಮಾಡುತ್ತಾರೆ. ಯಾಕೆಂದರೆ ಕುದುರೆ ವ್ಯಾಪಾರದ ಸಾಧ್ಯತೆಗಳಿರುವುದರಿಂದ 14 ರಿಂದ ರೆಸಾರ್ಟ್ನಲ್ಲೇ ಮೋಜು, ಮಸ್ತಿ, 15 ರಂದು ಪ್ರಮಾಣವಚನ ಮತದಾರರೆಲ್ಲ ಜನಪ್ರತಿನಿಧಿಗಳ ಗೇಟ್ ಬಳಿ ಕಾವಲುಗಾರರಿಂದ ಹಚಾ ಹಚಾ ಅನ್ನಿಸಿಕೊಳ್ಳುತ್ತಿರುತ್ತಾರೆ.
-ಬಿ.ಆರ್. ನರಸಿಂಹಮೂರ್ತಿ