ಡಾ.ರಾಜ್ ಕುಮಾರ್ ವಿಶ್ವ ಸಿನಿರಂಗದ ಮಾದರಿ ನಟರಾಗಿದ್ದರು
ವಿಜಯ ದರ್ಪಣ ನ್ಯೂಸ್…
ಡಾ. ರಾಜಕುಮಾರ್ ವಿಶ್ವ ಸಿನಿರಂಗದ ಮಾದರಿ ನಟರಾಗಿದ್ದರು
ಶಿಡ್ಲಘಟ್ಟ : ತಮ್ಮ ನಟನಾ ಶಕ್ತಿಯ ಕಲೆಯಿಂದ ಡಾ.ರಾಜ್‌ಕುಮಾರ್ ಅವರು ಸಮಾಜದ ಹೃದಯವನ್ನು ಮುಟ್ಟಿದ ಅವರು ಕನ್ನಡ ಚಲನಚಿತ್ರರಂಗದ ಮಾತ್ರವಲ್ಲದೆ ವಿಶ್ವ ಸಿನಿರಂಗದ ಮಾದರಿ ನಟರಾಗಿದ್ದರು ಎಂದು ವಾಸವಿ ಶಾಲೆಯ ಕಾರ್ಯದರ್ಶಿ ರೂಪಸಿ ರಮೇಶ್ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ವರನಟ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಹಾಗೂ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ರಾಜ್‌ಕುಮಾರ್ ಅವರು ತಮ್ಮ ಸಿನಿಮಾದ ಮೂಲಕ ಸಮಾಜಕ್ಕೆ ದಿಕ್ಕು ತೋರಿದವರು ಅವರ ಹಲವು ಪಾತ್ರಗಳು ಜನರಲ್ಲಿ ಚಿಂತನೆಯನ್ನು ಮೂಡಿಸಿದವು ಅವರ ಕೆಲವು ಚಿತ್ರಗಳ ಪರಿಣಾಮವಾಗಿ ಹಲವರು ಸರ್ಕಾರಿ ಕೆಲಸ ಬಿಟ್ಟು ಗ್ರಾಮೀಣ ಬದುಕು ಹಾಗೂ ಕೃಷಿಯನ್ನು ಆರಿಸಿಕೊಂಡರು ಎಂಬ ನಿಜಘಟನೆಗಳು ಇವೆ ಎಂದರು.
ಇದೇ ವೇಳೆ ವರನಟ ಡಾ.ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಲಾಯಿತು.
ಮುನಿರಾಜು,ನಾರಾಯಣಸ್ವಾಮಿ,ನಾಗಭೂಷಣ್, ಡಾ.ರಾಜ್‌ಕುಮಾರ್ ಅಭಿನಯದ ಹಿತಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ನಾರಾಯಣಸ್ವಾಮಿ,ಶ್ಯಾಮ್ ಸುಂದರ್, ಮಂಜುನಾಥ್,
ಮುನಿರಾಜು, ದೇವರಾಜ್,ಮುನಿನಾರಾಯಣಪ್ಪ, ಶ್ರೀನಿವಾಸ್ ಆಚಾರಿ ಮುಂತಾದವರು ಭಾಗವಹಿಸಿದ್ದರು.
**************************************
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಶ್ರೀ ಗಂಗಾದೇವಿ ದೇವಾಲಯದ ಬಳಿ ಕೇಕ್ ಕತ್ತರಿಸುವ ಮೂಲಕ ಡಾ.ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಮಾಡಲಾಯಿತು.
ವಿಶೇಷವಾದ ಹೆಸರು ಬೇಳೆ ಪಾಯಸ ಹಾಗು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀಗಂಗಾದೇವಿ ದೇವಾಲಯದ ಸಮಿತಿ ಅದ್ಯಕ್ಷ ಆರ್.ಕೆ.ರಾಮಕೃಷ್ಣಪ್ಪ,ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅದ್ಯಕ್ಷ ಎಸ್.ಆರ್.ಶ್ರೀನಿವಾಸ್, ಪದಾಧಿಕಾರಿಗಳಾದ ಎಂ.ಎನ್.ಧರ್ಮೇಂದ್ರಕುಮಾರ್ ಆರ್.ಎ.ಉಮೇಶ್,ಸುದರ್ಶನ್,ಗೋಪಾಲ್,ಪ್ರಭಾಕರ್,
ಸುರೇಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.