ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು

ವಿಜಯ ದರ್ಪಣ ನ್ಯೂಸ್…

ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು

ಶಿಡ್ಲಘಟ್ಟ : ಉತ್ತಮ ಸಮಾಜದ ನಿರ್ಮಾಣವನ್ನು ಗುರಿಯನ್ನಾಗಿಸಿಕೊಂಡು ಮುಂದಿನ ಪೀಳಿಗೆಯ ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು ಎಂದು ಉಡುಪಿ ಜಿಲ್ಲೆ ಸಾಲಿಗ್ರಾಮದ ವಿವೇಕ ಜಾಗೃತ ಬಳಗದ ಆರ್ತ ಸೇವಕ ಡಿ.ಎಸ್.ಯಶ್ವಂತ್ ತಿಳಿಸಿದರು.

ಶಿಡ್ಲಘಟ್ಟ ನಗರದ ಬಿಜೆಪಿ ಕಚೇರಿಯ ಸೇವಾಸೌಧ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾಕ, ವಿವೇಕ ಜಾಗೃತ ಬಳಗ ಹಾಗು ಆರ್‌ಸಿಜಿ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜೀವನದ ಮೇಲೆ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.

ಸಮಾಜಕ್ಕೆ ಜ್ಞಾನವಂತ,ಬುದ್ದಿವಂತರಷ್ಟೆ ಅಲ್ಲ ದೇಶ ಭಕ್ತರನ್ನು ನೀಡುವ ಕೆಲಸ ನಮ್ಮೆಲ್ಲ ತಾಯಂದಿರಿಂದಲೂ ಆಗಬೇಕಿದೆ ಎಂದು ಹೇಳಿದರು. ಜೀವನದಲ್ಲಿ ಎಲ್ಲರೂ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ವಿಜ್ಞಾನ ಕಾಲದಲ್ಲೂ ಭಕ್ತಿಯೂ ಕೂಡ ವೈಜ್ಞಾನಿಕವಾಗಿದೆ ಭಕ್ತಿಯನ್ನು ಮರೆತು ದಾರಿ ತಪ್ಪುತ್ತಿದ್ದು, ಯುವ ಪೀಳಿಗೆಯು ಉತ್ತಮವಾಗಬೇಕು ಎಂದರು.

ಆರ್‌ಸಿಜಿ ಫೌಂಡೇಷನ್ ಅಧ್ಯಕ್ಷ ಹಾಗು ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ,ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜತೆಗೆ ಉದ್ಯೋಗ, ಕೆಲಸ, ವ್ಯಾಪಾರ ,ವ್ಯವಹಾರವನ್ನು ಮಾಡುತ್ತಾ ದೇಶ ಭಕ್ತಿ, ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ದೇಶವನ್ನು ಇನ್ನಷ್ಟು ಸುಭದ್ರವಾಗಿ ಕಟ್ಟುವ ಕೆಲಸವನ್ನು ಮಾಡೋಣ ಎಂದು ಅವರು ನುಡಿದರು.
ಸಮಾಜಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಸಂದೇಶವನ್ನು ನೀಡಿದ್ದಾರೆ ಅವರ ತತ್ವ ಸಿದ್ದಾಂತಗಳಿಂದ ನಾವೆಲ್ಲರೂ ಜಾಗೃತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸೀಕಲ್ ಆನಂದಗೌಡ ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.