ಕೃತಕ ಬುದ್ದಿಮತ್ತೆಯಿಂದ ಮಾಧ್ಯಮದಲ್ಲಿ ನೈತಿಕತೆಯೆ ಸವಾಲು: ಪ್ರೊ.ವಾನಳ್ಳಿ

ವಿಜಯ ಕರ್ನಾಟಕ ನ್ಯೂಸ್…..

ಕೃತಕ ಬುದ್ದಿಮತ್ತೆಯಿಂದ ಮಾಧ್ಯಮದಲ್ಲಿ ನೈತಿಕತೆಯೆ ಸವಾಲು: ಪ್ರೊ.ವಾನಳ್ಳಿ

ದೊಡ್ಡಬಳ್ಳಾಪುರ: ಸಮೂಹ ಮಾಧ್ಯಮದಲ್ಲಿ ಕೃತಕ ಬುದ್ದಿಮತ್ತೆ ಬೆಳೆಯುತ್ತಿದ್ದಂತೆ ವಸ್ತುನಿಷ್ಠತೆ ಮತ್ತು ನೈತಿಕತೆಯ ಕೊರತೆ ಎದುರಿಸುವುದೇ ಸವಾಲಾಗಿದೆ ಎಂದು ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ನಿರಂಜನ್ ವಾನಳ್ಳಿ ಹೇಳಿದರು.

ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಮಾಧ್ಯಮಗಳ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳಿಂದ ನಾಗರಿಕರೆಲ್ಲರೂ ಮಾಧ್ಯಮದವರೆ ಆಗಿದ್ದು, ಸಮೂಹ ಮಾಧ್ಯಮದ ಕುರಿತಾಗಿ ವ್ಯಾಖ್ಯಾನವೆ ಸವಾಲಾಗಿದೆ. ಅದರಲ್ಲೂ ಕೃತಕ ಬುದ್ದಿಮತ್ತೆಯ ಪ್ರಭಾವದಿಂದಾಗಿ ಸಮೂಹ ಮಾಧ್ಯಮದಲ್ಲಿ ತಾಳ್ಮೆಯಿಲ್ಲದಾಗಿ, ಸುದ್ದಿಯ ಗುಣಮಟ್ಟ ಕಾಪಾಡುವುದೇ ಸವಾಲಾಗಿದೆ. ಸಮಾಚಾರವು ಸಮುದಾಯದ ಎಲ್ಲ ಸ್ಥರದಲ್ಲಿಯೂ ಸಿಗುತ್ತದೆ, ಆದ್ರೆ ಹೇಳಬಾರದ್ದನ್ನು ಪ್ರಚಾರಗೊಳಿಸಿದಾಗ ಸಮೂಹ ಮಾಧ್ಯಮ ವಿಶ್ವಾಸ ಕಳೆದುಕೊಳ್ಳುತ್ತದೆ. ಅದುವೇ ಎಲ್ಲರೂ ಮಾಧ್ಯಮದವರಾಗಿ ಸಮೂಹ ಮಾಧ್ಯಮದ ವಸ್ತುನಿಷ್ಠತೆ ಮತ್ತು ನೈತಿಕತೆಯ ಅವನತಿಗೆ ಕಾರಣವಾಗುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು. ಇತ್ತೀಚಿನ ಡಿಜಿಟಲ್ ಸೌಲಭ್ಯಗಳು ಮತ್ತು ಕೃತಕ ಬುದ್ದಿಮತ್ತೆಯ ಪರಿಣಾಮದಿಂದಾಗಿ ಸಮೂಹ ಮಾಧ್ಯಮ ತನ್ನ ಅಳಿವು-ಉಳಿನವಿನೊಂದಿಗೆ ಭಯೋತ್ಪಾದನೆಯ ಸಂದಿಗ್ಧತೆಯನ್ನು ಎದುರಿಸಬೇಕಾಗಿದೆ. ಇದರಿಂದ ಅವಕಾಶಗಳು ಕಡಿಮೆಯಾಗಿ ಮಾಧ್ಯಮ ಅನ್ಯ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಮಾತನಾಡಿ ಕೃತಕ ಬುದ್ದಿತ್ತೆಯು ಸಮೂಹ ಮಾಧ್ಯಮದಲ್ಲಿ ಒಂಬತ್ತು ಕೋಟಿ ನೂತನ ಉದ್ಯೋಗ ಸೃಷ್ಠಿಸಿದರೆ ಮೂಲತಃ 30 ಕೋಟಿ ಅವಕಾಶಗಳನ್ನು ಹಾಳು ಮಾಡುತ್ತಿದೆ ಎಂದು ಅಭಿಪ್ರಾಯಿಸಿದರು.

ಐಕ್ಯೂಎಸಿ ಸಂಯೋಜಕ ಡಾ. ಬಿ ಆರ್ ಗಂಗಾಧರಯ್ಯ ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕ ಡಾ. ಸತೀಶ ಕೆ.ಇಟಗಿ ವಂದಿಸಿದರು. ಕುಮಾರಿ ಪೂಜಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಡಾ. ಶೋಭಾ ಮಲ್ದಾರಿ ಮತ್ತು ಹಿರಿಯ ಪತ್ರಕರ್ತ ಶ್ರೀಕಾಂತ ತಮ್ಮ ಅನಿಸಿಕೆ ಹಂಚಿಕೊಂಡರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಸಮಸ್ತ ಕಲಿಕಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿರಿದ್ದರಲ್ಲದೆ ಆನ್‌ಲೈನ್‌ದಲ್ಲೂ ನೂರಾರು ಜನ ಭಾಗವಹಿಸಿ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ, ಐಕ್ಯೂಎಸಿ ಸಂಯೋಜಕ ಡಾ. ಬಿ ಆರ್. ಗಂಗಾಧರಯ್ಯ, ಪತ್ರಿಕೋದ್ಯಮ ಉಪನ್ಯಾಸಕ ಡಾ. ಸತೀಶ ಕೆ. ಇಟಗಿ, ಪ್ರಾಧ್ಯಾಪಕಿ ಡಾ. ಶೋಭಾ ಮಲ್ದಾರಿ ಮತ್ತು ಹಿರಿಯ ಪತ್ರಕರ್ತ ಶ್ರೀಕಾಂತ ಉಪಸ್ಥಿತರಿದ್ದರು.