ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ವಾರ್ಷಿಕೋತ್ಸವ
ವಿಜಯ ದರ್ಪಣ ನ್ಯೂಸ್….
ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ವಾರ್ಷಿಕೋತ್ಸವ
ಶಿಡ್ಲಘಟ್ಟ : ತಾಲ್ಲೂಕಿನ ಕದರಿನಾಯಕನಹಳ್ಳಿಯಲ್ಲಿ ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ದೇವಾಲಯದಲ್ಲಿ 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಾದ ಬಿ.ಎನ್ ರವಿಕುಮಾರ್ ಮಾತನಾಡಿ ಓಂ ಶಕ್ತಿ ಅಮ್ಮನವರು ಈ ಭಾಗದಲ್ಲಿ ಶಕ್ತಿ ದೇವತೆಯಾಗಿದ್ದು ಭಕ್ತಾದಿಗಳ ಇಷ್ಟಾರ್ಥಗಳನ್ನು ಪರಿಹರಿಸುತ್ತಿದ್ದು ಉತ್ತಮ ಮಳೆ ,ಬೆಳೆಯಾಗಿ ಜನ,ಜಾನುವಾರಗಳು ಸುಖಶಾಂತಿ ನೆಮ್ಮಂದಿಯಿಂದ ಬಾಳಲಿ ಎಂದು ಓಂಶಕ್ತಿ ಅಮ್ಮನವರಲ್ಲಿ ಪ್ರಾರ್ಥಿಸಿಕೊಂಡಿರುವುದಾಗಿ ತಿಳಿಸಿದರು.
ಓಂ ಶಕ್ತಿ ಅಮ್ಮನವರ ದೇವಾಲಯದ 3ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಓಂಶಕ್ತಿ ಅಮ್ಮನವರ ಪೂಜಾ ಕಾರ್ಯಕ್ರಮಗಳು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಆದ್ದೂರಿಯಾಗಿ ನಡೆಯಿತು.
ಚಿಂತಾಮಣಿ- ಶಿಡ್ಲಘಟ್ಟ ಮಾರ್ಗ ಮದ್ಯದ ಕದಿರಿನಾಯಕನಹಳ್ಳಿ ಗೇಟ್ ನಲ್ಲಿ ನೆಲೆಸಿರುವ ಓಂ ಶಕ್ತಿ ಅಮ್ಮನವರ ದೇವಾಲಯದ ವಾರ್ಷಿಕೊತ್ಸವದ ಅಂಗವಾಗಿ ಶ್ರೀ ಓಂ ಶಕ್ತಿ ಚಾರಿಟೇಬಲ್ ಟ್ರಸ್ಟ್ ನ ಕೃಷ್ಣಕುಮಾರಿ ಅವರ ನೇತೃತ್ವದಲ್ಲಿ ಓಂಶಕ್ತಿ ಅಮ್ಮನವರಿಗೆ ಬೆಳಿಗ್ಗೆಯಿಂದಲೇ ಭಕ್ತಾದಿಗಳ ಕೈಯಿಂದಲೇ ಹಾಲಿನ ಅಭಿಷೇಕ,ಮದ್ಯಾಹ್ನ 12 ಗಂಟೆಗೆ ದೀಪದ ಆರತಿ, 1 ಗಂಟೆಗೆ ಮಹಾಮಂಗಳಾರತಿ ,
ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.
ಶ್ರೀ ಓಂಶಕ್ತಿ ಅಮ್ಮನವರಿಗೆ ಹಾಗೂ ದೇವಾಲಯಕ್ಕೆ ವಿಶೇಷ ಹೂವಿನ ಆಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ಮಹಿಳೆಯರು ಓಂಶಕ್ತಿ ಅಮ್ಮನವರಿಗೆ ತಂಬಿಟ್ಟಿನ ದೀಪೋತ್ಸವ ನಡೆಸಿದರು ಹಾಗೂ ದೇವಾಲಯಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ವೇಳೆ ಮುಖಂಡರಾದ ತಾದೂರು ರಘು, ಕದಿರನಾಯಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೆ.ಎಂ ರವಿಕುಮಾರ್, ಕೆ.ಎಂ ನಾಗಾರಾಜ್,ಯುವ ಮುಖಂಡರಾದ ಕೆಎಂ.ಶಿವಕುಮಾರ್,ಸಿಂಗನಾಯಕನಹಳ್ಳಿ ಮಣಿ, ಡಾಬ ನರಸಿಂಹಮೂರ್ತಿ,ಭಕ್ತಾದಿಗಳು ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು