ಗಣಿ ಮಾಲೀಕನಿಂದ ರೈತನಿಗೆ ಗುಂಡೇಟು
ವಿಜಯ ದರ್ಪಣ ನ್ಯೂಸ್…..
ಗಣಿ ಮಾಲೀಕನಿಂದ ರೈತನಿಗೆ ಗುಂಡೇಟು
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಕಲ್ಲು ಕ್ವಾರಿ ಕ್ರಷರ್ ಗೆ ಅನುಮತಿ ನೀಡಿರುವುದರ ವಿರುದ್ಧ ಸ್ಥಳೀಯರಿಂದ ನಿರಂತರವಾಗಿ ಪ್ರತಿಭಟನೆಯೂ ನಡೆಯುತಿತ್ತು ಈ ಕುರಿತು ಜನಪ್ರತಿನಿಧಿಗಳು ಕ್ರಷರ್ ಸ್ಥಾಪಿಸುವ ಕುರಿತು ವಿರೋಧ ವ್ಯಕ್ತಪಡಿಸಿದ್ದರು.
ಈ ಎಲ್ಲಾ ವಿರೋಧದ ಮದ್ಯೆಯೂ ಕ್ರಷರ್ ಗೆ ರಸ್ತೆ ಕಾಮಗಾರಿಯನ್ನ ಕ್ವಾರಿ ಮಾಲೀಕರು ನಡೆಸುತಿದ್ದರು.
ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಫೈರಿಂಗ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹೊರವಲಯದಲ್ಲಿ ಘಟನೆ ನಡೆದಿದೆ ಗುಂಡು ತಗುಲಿ ಚಿಕನ್ ರವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲ್ಲು ಕ್ವಾರಿ ಕ್ರಷರ್ಗೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು ,ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶಕುಮಾರ್ ಸಿನಿಮೀಯ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸಕಲೇಶಕುಮಾರ್ ಅಟ್ಟಾಡಿಸಿ ಮೂರು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ರವಿ ಅವರ ದೇಹದ ಒಳಗೆ ಹೊಕ್ಕಿದೆ ಅದನ್ನ ತಡೆಯಲು ಹೋದ ಸ್ಥಳೀಯ ರವಿ ಮತ್ತು ಕ್ರಷರ್ ಪಾಲುದಾರ ಸಕಲೇಶ್ ಕುಮಾರ್ ಎನ್ನುವವರ ಮದ್ಯೆ ಜಟಾಪಟಿ ನಡೆದಿದೆ ಎನ್ನಲಾಗಿದ್ದು ತಳ್ಳಾಟ ನೂಕಾಟ ವೇಳೆ ಸಕಲೇಶ್ ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದ್ದು ಅದನ್ನೆ ನೆಪಮಾಡಿಕೊಂಡ ಸಕಲೇಶ್ ತನ್ನ ಬಳಿ ಇದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿದ ಪರಿಣಾಮ ರವಿ ಕಾಲಿಗೆ ಗುಂಡು ತಾಗಿ ತೀವ್ರ ಗಾಯವಾಗಿದೆ ರವಿ ಗುಂಡು ಹಾರಿಸಿದ ಸಕಲೇಶ್ ಅಷ್ಟಕ್ಕೆ ಸುಮ್ಮನಾಗದೆ ಅಲ್ಲಿ ಸೇರಿದ್ದ ರೈತರ ಮೇಲೆಲ್ಲ ಪಿಸ್ಟೋಲ್ ತೋರಿಸಿ ಯಾರು ಬರ್ತರೋ ಬರ್ರೋ ನೋಡೋಣ ಎಂದು ಹೆದರಿಸುತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ರವಿ ಅವರನ್ನು ದಾಖಲಿಸಲಾಗಿದ್ದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಹಾಗೂ ದೀಪ್ತಿ ಎನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಸಕಲೇಶಕುಮಾರ್ನನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಸಕಲೇಶ್ ಕುಮಾರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿದರು.
ಮಂಚೇನಹಳ್ಳಿ ಠಾಣೆಯಲ್ಲಿ ಎಸ್ಪಿ ಕುಶಲ್ ಚೌಕ್ಸೆ ಮೊಕ್ಕಾಂ ಹೂಡಿದ್ದು, ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಪೊಲೀಸ್ ಠಾಣೆ ಬಳಿ ಸಾರ್ವಜನಿಕರ ಹಾಗು ರೈತಸಂಘದವರು ಸಾವಿರಾರು ಜಮಾಯಿಸಿದ್ದು, ಮಂಚೇನಹಳ್ಳಿ ಠಾಣೆ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂತಾ ಗತಿ ಬಂತಪ್ಪ ಕಳೆದ ಐವತ್ತು ವರ್ಷಗಳಲ್ಲಿ ಗನ್ ಸಂಸ್ಕೃತಿ ನೋಡಿಯೇ ಇಲ್ಲಾ ಮಂಚೇನಹಳ್ಳಿ ತಾಲ್ಲೂಕಿನ ಮಿಣಕನಗುರ್ಕಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ
ಗುಂಡಿನ ಘಟನೆ ಕ್ಷೇತ್ರದ ಜನರಿಗೆ ಭಯದ ವಾತಾವರಣ ಹುಟ್ಟಿಸುವಂತಿದೆ ಸಿನಿಮಾ ಸ್ಟೈಲಲ್ಲಿ ಡೈಲಾಗ್ ಹೊಡೆದು ಕ್ರಷರ್ ತೆರೆಯಲು ಬಿಡೊಲ್ಲ ಎಂದಿದ್ದ ಪ್ರತಿನಿಧಿ ಈಗ ಏನು ಮಾಡುತಿದ್ದಾರೆ ನಾನು ಶಾಸಕನಾಗಿದ್ದಾಗ ಹತ್ತು ವರ್ಷಗಳ ಕಾಲ ಅಲ್ಲಿ ಕ್ರಷರ್ ಗೆ ಎಷ್ಟೆ ಒತ್ತಡ ಬಂದರೂ ಅನುಮತಿ ನೀಡಿರಲಿಲ್ಲ, ಕಾಶ್ಮೀರದಲ್ಲಿ ಉಗ್ರರ ದಾಳಿಯಂತೆ ಇಲ್ಲಿ ಪ್ರಭಾವಿಗಳಿಂದ ಅಮಾಯಕರ ಮೇಲೆ ದಾಳಿ ನಡೆದಿದೆ ಇದು ಈಗೆ ಮುಂದುವರೆದರೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..