ಅಮೇರಿಕದ ರೇಷ್ಮೆ ಕೃಷಿ ಸಂಶೋಧಕಿ ತಾಬಿತ ಹಿತ್ತಲಹಳ್ಳಿಗೆ ಭೇಟಿ
ವಿಜಯ ದರ್ಪಣ ನ್ಯೂಸ್….
ಅಮೇರಿಕದ ರೇಷ್ಮೆ ಕೃಷಿ ಸಂಶೋಧಕಿ ತಾಬಿತ ಹಿತ್ತಲಹಳ್ಳಿಗೆ ಭೇಟಿ
ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಹಿತ್ತಲಹಳ್ಳಿಗೆ ಅಮೇರಿಕದ ರೇಷ್ಮೆ ಕೃಷಿ ಸಂಶೋಧಕಿ ತಾಬಿತ ಅವರು ಭೇಟಿ ನೀಡಿ ರೇಷ್ಮೆ ಕೃಷಿ ಮತ್ತು ಉದ್ಯಮದ ಬಗ್ಗೆ ಮಾಹಿತಿಯನ್ನು ಪಡೆದರು.
ಹಿತ್ತಲಹಳ್ಳಿ ಗ್ರಾಮದ ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕೆ ಮನೆ, ಚಂದ್ರಿಕೆ ಶೆಡ್‌ಗಳನ್ನು ವೀಕ್ಷಿಸಿದ ಬಳಿಕ ನಗರದಲ್ಲಿ ರೇಷ್ಮೆ ನೂಲು ಬಿಚ್ಚುವ ಘಟಕ, ಆಟೋಮ್ಯಾಟಿಕ್ ರೀಲಿಂಗ್ ಯಂತ್ರ (ಎ.ಆರ್.ಎಂ), ಮಲ್ಟಿ ಎಂಡ್ ಮಿಷನ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಕಾರ್ಯ ವೈಖರಿಯನ್ನು ಆಸಕ್ತಿಯಿಂದ ವೀಕ್ಷಿಸಿದರು.
ರೇಷ್ಮೆ ಕೃಷಿಕ ರೈತ ಎಚ್.ಕೆ.ಸುರೇಶ್ ಅವರು ತಾಬಿತ ಅವರಿಗೆ ಮಾಹಿತಿ ನೀಡುವ ಜತೆಗೆ ಇತ್ತೀಚಿನ ದಿನಗಳಲ್ಲಿ ಹುಳು ಸಾಕಾಣಿಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ರೋಗಗಳು ಮತ್ತು ಅವುಗಳ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ವ್ಯವಸಾಯದೊಳಗಿನ ನಷ್ಟ-ಲಾಭಗಳು, ಬೆಲೆ ಏರಿಳಿತ, ಕೆಲಸಗಾರರ ಕೊರತೆಗಳಂತಹ ಪ್ರಚಲಿತ ಅಂಶಗಳ ಕುರಿತು ತಾಬಿತ ಅವರು ಗಮನ ನೀಡಿದರು,ನಂತರ ರೀಲಿಂಗ್ ಘಟಕಗಳಲ್ಲಿ ಯಂತ್ರಗಳ ತಾಂತ್ರಿಕತೆ, ಸರ್ಕಾರದ ಸವಲತ್ತುಗಳು ಮತ್ತು ಉದ್ಯಮಿಗಳ ಎದುರಾಗುತ್ತಿರುವ ತೊಂದರೆಗಳ ಕುರಿತೂ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಎಂಬಿಯ ಬೆನಕಪ್ಪ ಹುಬ್ಬಳ್ಳಿ ಮತ್ತು ಗೋಪಿನಾಥ್ ಹಾಜರಿದ್ದರು.