ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ರವರ ಪುಣ್ಯ ಸ್ಮರಣೆ

ವಿಜಯ ದರ್ಪಣ ನ್ಯೂಸ್…..

ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ರವರ ಪುಣ್ಯ ಸ್ಮರಣೆ

ಶಿಡ್ಲಘಟ್ಟ : ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಉನ್ನತ ಶಿಕ್ಷಣ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಭಾಗಿಯಾಗಿ ಬೆಳ್ಳೂಟಿ ಸಂತೋಷ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಇದಕ್ಕು ಮುನ್ನ ಬೆಳ್ಳೂಟಿ ಗ್ರಾಮದ ಶ್ರೀಗುಟ್ಟಾಂಜನೆಯಸ್ವಾಮಿ ಕಲ್ಯಾಣ ಮಂಟಪಕ್ಕೆ ಬೇಟಿ ನೀಡಿ ಕಲ್ಯಾಣ ಮಂಟಪವನ್ನು ವೀಕ್ಷಣೆ ಮಾಡಿ ಕಲ್ಯಾಣ ಮಂಟಪದ ಅಭಿವೃದ್ಧಿಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಸಚಿವ ಎಂ.ಸಿ.ಸುಧಾಕರ್ ಮಾತನಾಡಿ ಸದಾ ಹಸನ್ಮುಖಿಯಾಗಿ ನಗುನಗುತಾ ಇದ್ದಂತಹ ಬೆಳ್ಳೂಟಿ ಸಂತೋಷ್ ರವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ, ಸಂತೋಷ್ ಹಾಗೂ ನನ್ನ ಸ್ನೇಹ ಸಂಬಂಧ ಸುಮಾರು 18-20 ವರ್ಷದ್ದು, ನನ್ನನ್ನು ಟೈಗರ್ ಎಂದು ಕರೆಯುತ್ತಿದ್ದರು, ಅದರಂತೆ ನಾನು ಸಹ ಅವರ ಜೊತೆ ತಮಾಷೆಯಾಗಿ ಮಾತನಾಡುತ್ತಿದ್ದೆ , ಎಲ್ಲಾ ವಿಧಿಯಾಟ ಈ ಭೂಮಿಯ ಮೇಲೆ ಯಾರಿಗೆ ಎಷ್ಟು ಸಮಯವಿರುತ್ತೋ ಅಷ್ಟೇ ಸಮಯವಿರಲು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಆಂಜಿನಪ್ಪ(ಪುಟ್ಟು) ಮಾತನಾಡಿ ಸಂತೋಷ್ ಹಾಗು ನಾನು ಬಾಲ್ಯದಿಂದಲೇ ಸ್ನೇಹಿತರಾಗಿದ್ದು,ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದು ಯುವ ಕಾಂಗ್ರೆಸ್ ಅನ್ನು ಕಟ್ಟಲು ಸಾಕಷ್ಟು ಶ್ರಮಪಟ್ಟಿದ್ದೆವು ಬೆಳ್ಳೂಟಿ ಗ್ರಾಮಕ್ಕೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದ ,ಪರಿಸರದ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ಸಾಕಷ್ಟು ಒತ್ತು ಕೊಟ್ಟಿದ್ದ ,ಕೆರೆ ಕಟ್ಟೆಗಳನ್ನು ಕಟ್ಟಲು,ಇನ್ನೂ ಅನೇಕ ಸಮಾಜಮುಕಿ ಕೆಲಸಗಲನ್ನು ಮಾಡಿ ಜನಪ್ರಿಯವಾಗಿದನಂತಹ ಸಂತೋಷ್ ನಮ್ಮನ್ನೆಲ್ಲ ಅಗಲಿ ದೂರದ ಊರಿಗೆ ಹೋಗಿರುವುದು ಬಹಳಷ್ಟು ನೋವುಂಟು ಮಾಡಿದೆ ,ಅವರ ಆತನ ನೆನಪಿನಲ್ಲಿ ಆತನ ಕನಸುಗಳನ್ನು ಈಡೇರಿಸುವ ಕೆಲಸವನ್ನು ಎಲ್ಲಾರ ಸಹಕಾರದಿಂದ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ವರಲಕ್ಷ್ಮಿಸಂತೋಷ್, ಬೆಳ್ಳೂಟಿ ವೆಂಕಟೇಶ್, ಶ್ರೀನಿವಾಸ್ ರಾಮಯ್ಯ,ಗುಡಿಹಳ್ಳಿ ಚಂದ್ರನಾಥ್,ಮುರಳಿ,
ಹಿತ್ತಲಹಳ್ಳಿ ಸುರೇಶ್, ಮಧು, ರಾಜ್ ಕುಮಾರ್,ಸಾಧಿಕ್, ಸುಗಟೂರು ನಾಗೇಶ್,ಬೋದಗೂರು ಸುರೇಶ್, ಜಪ್ತಿಹೊಸಹಳ್ಳಿ ಪ್ರಕಾಶ್,ಹಿತ್ತಲಹಳ್ಳಿ,ಗೋಪಾಲಪ್ಪ,
ಮುನಿಯಪ್ಪ ,ಬೂದಾಳ ವರದರಾಜು, ಶಿಡ್ಲಘಟ್ಟ ದಾಮೋದರ್ ಮಳಮಾಚನಹಳ್ಳಿ ಮುನಿರಾಜು,ರಮೇಶ್, ಸಂತೋಷ್, ತುಮ್ಮನಹಳ್ಳಿ ವೆಂಕಟೇಶ್,ಯೂತ್ ಕಾಂಗ್ರೆಸ್ ದರ್ಶನ್,ರವಿ, ರಾಕೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಇನ್ನೀತರರು ಹಾಜರಿದ್ದರು.

@@@@@@@@@@@@@@@@@@@@@

ವಯಾಡಕ್ಟ್  ಉರುಳಿ ಬಿದ್ದು  ಶಿಡ್ಲಘಟ್ಟ ಮೂಲದ ಆಟೊ ಚಾಲಕ ಸಾವು

ಶಿಡ್ಲಘಟ್ಟ : ವಯಾಡಕ್ಟ್ (ಬೃಹದಾಕಾರದ ತಡೆಗೋಡೆ) ಉರುಳಿ ಬಿದ್ದು ಮಂಗಳವಾರ ರಾತ್ರಿ ಶಿಡ್ಲಘಟ್ಟ ಮೂಲದ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್‌ನಲ್ಲಿ ನಮ್ಮ ಮೆಟ್ರೋ ಕಾಮಗಾರಿಗೆಂದು ಲಾರಿಯಲ್ಲಿ ತರಲಾಗುತಿದ್ದ ವಯಾಡೆಕ್ಟ್ ರಸ್ತೆಯಲ್ಲಿ ಹೋಗುತ್ತಿದ್ದ ಆಟೊ ಮೇಲೆ ಬಿದ್ದು, ಚಾಲಕ ಸಾವನಪ್ಪಿದ್ದಾನೆ.

ಶಿಡ್ಲಘಟ್ಟ ನಗರದ ರಹಮತ್ ನಗರದ ಖಾಸಿಂಸಾಬ್ (40) ಮೃತರು. ಖಾಸಿಂ ಸಾಲ ಮಾಡಿ ಹೊಸ ಆಟೊ ಖರೀದಿಸಿ 20 ದಿನವಾಗಿತ್ತು ಶಿಡ್ಲಘಟ್ಟದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ದು ನಂತರ, ಶಿಡ್ಲಘಟ್ಟಕ್ಕೆ ವಾಪಸ್‌ ಆಗುತ್ತಿದ್ದಾಗ ಕೋಗಿಲು ಕ್ರಾಸ್‌ ಬಳಿ ಘಟನೆ ನಡೆದಿದೆ.

ಲಾರಿ ತಿರುವು ಪಡೆಯುವಾಗ ಈ ದುರಂತ ಸಂಭವಿಸಿದ್ದು ಅವಘಡದ ಮುನ್ಸೂಚನೆ ಸಿಗುತ್ತಿದ್ದಂತೆ ಆಟೊದಲ್ಲಿದ್ದ ಪ್ರಯಾಣಿಕರು ಆಟೊದಿಂದ ಇಳಿದು ಓಡಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಮೆಟ್ರೊ ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,ಮೃತರಿಗೆ ಮೂರು ಮಕ್ಕಳಿದ್ದು ಇಬ್ಬರು ಗಂಡು, ಒಂದು ಹೆಣ್ಣು ಮಗು ಇದ್ದಾರೆ ತಿಳಿದು ಬಂದಿದೆ