ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎನ್ ನಂಜಯ್ಯ ಉಪಾಧ್ಯಕ್ಷರಾಗಿ ಎಚ್ ಎಸ್ ಶೋಭಾ ಆಯ್ಕೆ
ವಿಜಯ ದರ್ಪಣ ನ್ಯೂಸ್…
ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಏನ್ ನಂಜಯ್ಯ ಉಪಾಧ್ಯಕ್ಷರಾಗಿ ಎಚ್ ಎಸ್ ಶೋಭಾ ಆಯ್ಕೆ
ತಾಂಡವಪುರ ಏಪ್ರಿಲ್ 16 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿಗೆ ತೆರುವಾಗಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎನ್ ನಂಜಯ್ಯ ಉಪಾಧ್ಯಕ್ಷರಾಗಿ ಹೆಜ್ಜಿಗೆ ಎಚ್ ಎಸ್ ಶೋಭಾ ಗಿರಿಧರ್ ಅವರು ಚುನಾಯಿತರಾಗಿ ಆಯ್ಕೆಯಾದರು.
ಉಳಿದ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ನಂಜಯ್ಯನವರಿಗೆ ಎಂಟು ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಅವರ ಪ್ರತಿಸ್ಪರ್ಧಿ ಆನಂದ್ ರವರು ಆರು ಮತಗಳನ್ನು ಪಡೆದು ಸೋಲುಂಡರು.
ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್ ಎಸ್ ಶೋಭಾ ಗಿರಿಧರ್ ರವರು 9 ಮತಗಳನ್ನು ಪಡೆದು ಜಯಗಳಿಸಿದರೆ ಅವರ ಪ್ರತಿಸ್ಪರ್ಧಿ ಶಿವಕುಮಾರಿ ರವರು ಐದು ಮತಗಳನ್ನು ಪಡೆದು ಸೋತರು.
ಚುನಾವಣೆ ಅಧಿಕಾರಿಯಾಗಿ ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಅಧಿಕಾರಿ ಸೋಮಶೇಖರ್ ಅವರು ಕಾರ್ಯನಿರ್ವಹಿಸಿ ಚುನಾಯಿತರಾದ ಎನ್ ನಂಜಯ್ಯ ಹಾಗೂ ಶೋಭಾ ಅವರನ್ನು ಘೋಷಣೆ ಮಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ನಂಜಯ್ಯ ಹಾಗೂ ಉಪಾಧ್ಯಕ್ಷರಾದ ಶೋಭಾ ರವರನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರವರು ಅಭಿನಂದಿಸಿ ಸ್ವಾಗತ ಕೋರಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಏನ್ ನಂಜಯ್ಯನವರು ಸುದ್ದಿಗಾರರೊಂದಿಗೆ ಮಾತಾಡುತ್ತಾ ಈ ಚುನಾವಣೆಯಲ್ಲಿ ಭಾರಿ ಪೈಪೋಟಿ ಇದ್ದರು ಸಹ ನನ್ನನ್ನು ಬೆಂಬಲಿಸಿ ನನ್ನ ನನಗೆ ಮತ ನೀಡಿ ಅಧ್ಯಕ್ಷರಾಗಲು ಕಾರಣಕರ್ತರಾದ ನನ್ನ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಹಾಗೂ ಗ್ರಾಮದ ಹಿರಿಯರಿಗೆ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಜೊತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಉಳಿದ ಅವಧಿಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ತೊರೆಮಾವು ಟಿಡಿ ಗಿರೀಶ್ ಟ.ಖಿಊ ಮಾತನಾಡಿ ನಮ್ಮ ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದ ಕಾಂಗ್ರೆಸ್ ಸರ್ಕಾರ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಏನ್ ನಂಜಯ್ಯನವರು ನಮ್ಮ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಿ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಗಿರೀಶ್ ರವರು ತಿಳಿಸಿದರು.
ಇದೇ ವೇಳೆ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಿವನಂಜು ಸಿದ್ದರಾಜು ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿ ಸನ್ಮಾನಿಸಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ತೊರೆಮಾವು ಟಿಡಿ ಗಿರೀಶ್ ಗಂಗಾಧರ್ ಪದ್ಮ ಪಾಣಿ ಚಿನ್ನೂರಮ್ಮ ಶೃತಿ ಬೇರೆಯ ಶಿವಕುಮಾರಿ
ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದರಾಜು ಶ್ರೀಕಂಠೇಶ್ವರ ವ್ಯವಸ್ಥಾಪನೆ ಸಮಿತಿಯ ಮಾಜಿ ಅಧ್ಯಕ್ಷ ಶಿವನಂಜು ಹೆಚ್ಚಿಗೆ ಪ್ರಸನ್ನ ಬೀರಪ್ಪ ಹಾಗೂ ಗ್ರಾಮದ ಯುವಕ ಮುಖಂಡರುಗಳು ಮುಂತಾದವರು ಹಾಜರಿದ್ದರು